
Money Plant : ಮನೆಯಲ್ಲಿ ವಾಸ್ತು ದೋಷವಿದ್ರೆ ಮನಿ ಪ್ಲಾಂಟ್ ತಂದಿಡಿ – ಇಡೋದು ಎಲ್ಲಿ? ಬೆಳೆಸೋದು ಹೇಗೆ? ಇಲ್ಲಿದೆ ಮಾಹಿತಿ..
- ಧಾರ್ಮಿಕ
- November 4, 2023
- No Comment
- 66
ನ್ಯೂಸ್ ಆ್ಯರೋ : ಮನೆ ಕಟ್ಟುವ ಸಂದರ್ಭದಲ್ಲಿ ಆತುರದಲ್ಲಿ ಮಾಡಿದ ಯಾವುದೋ ಒಂದು ಸಣ್ಣ ತಪ್ಪಿನಿಂದ ಇಡೀ ಮನೆಗೆ ವಾಸ್ತು ದೋಷ ಎದುರಾಗಿರುತ್ತದೆ. ಇದರಿಂದ ಪ್ರತಿ ದಿನ ಒಂದಲ್ಲ ಒಂದು ತೊಂದರೆಗಳು ಇದ್ದೇ ಇರುತ್ತವೆ. ಹಾಗೆಂದು ವಾಸ್ತು ತಜ್ಞರನ್ನು ಕರೆಸಿ ಮನೆಯ ಗೋಡೆ ಬಾಗಿಲುಗಳನ್ನು ಒಡೆದು ಚೂರು ಮಾಡಿ ಮತ್ತೊಮ್ಮೆ ಮನೆ ಕಟ್ಟಲು ಅಥವಾ ಒಳಾಂಗಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿ ಮನಿ ಪ್ಲಾಂಟ್ ಗಿಡ ತಂದು ಇಟ್ಟುಕೊಳ್ಳುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗಿ, ಮನೆ ಮಂದಿಯ ಮನಸ್ಸುಗಳಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆ ಉಂಟಾಗಿ ಮನೆಯಲ್ಲಿ ಹೆಚ್ಚು ಸುಖ, ಶಾಂತಿ, ನೆಮ್ಮದಿ ಜೊತೆಗೆ ಐಶ್ವರ್ಯ ಒಲಿದು ಬರುತ್ತದೆ ಎಂಬ ಭಾವನೆ ಬಹುತೇಕರಲ್ಲಿ ಇದೆ..
ಮನೆಯ ವಾಸ್ತು ದೋಷ ನಿವಾರಣೆಗೆ ಮನಿ ಪ್ಲಾಂಟ್
ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಜಗತ್ತಿನ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ನಿರ್ದೇಶನವಿದೆ. ಹಾಗೆ ಗಿಡ ಮರಗಳಿಗೂ ಸಹ. ಇದರಲ್ಲಿ ಮನಿ ಪ್ಲಾಂಟ್ ಸಹ ಹೊರತಲ್ಲ. ಮನೆಯಲ್ಲಿ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಮನಿ ಪ್ಲಾಂಟ್ ಬೆಳೆಸಿದರೆ ಮಾತ್ರ ಇದರಿಂದ ಲಾಭವಾಗುವುದು ಎನ್ನುವ ಅಂಶವಿದೆ. ಹೀಗಾಗಿ ಮನೆಯಲ್ಲಿಯೇ ಮನಿ ಪ್ಲಾಂಟ್ ನೆಡುವಾಗ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.
1). ಮನೆಯ ಒಳಾಂಗಣದಲ್ಲಿ ಇರಲಿ ಮನಿ ಪ್ಲಾಂಟ್
ಯಾವಾಗಲೂ ಮನಿ ಪ್ಲಾಂಟ್ ಮನೆಯೊಳಗೆ ಇರಿಸಿ. ಈ ಸಸ್ಯಕ್ಕೆ ಹೆಚ್ಚಿನ ಸೂರ್ಯನ ಬೆಳಕಿನ ಅಗತ್ಯವಿಲ್ಲ. ಆದ್ದರಿಂದ ಇದನ್ನು ಒಳಾಂಗಣದಲ್ಲಿ ನೆಡಬೇಕು. ವಾಸ್ತು ಪ್ರಕಾರ ಮನೆಯ ಹೊರಗೆ ಹಣದ ಗಿಡ ನೆಡುವುದು ಶುಭವಲ್ಲ. ಇದು ಹೊರಗಿನ ಹವಾಮಾನದಲ್ಲಿ ಸುಲಭವಾಗಿ ಒಣಗುತ್ತದೆ ಮತ್ತು ಬೆಳೆಯುವುದಿಲ್ಲ. ಸಸ್ಯದ ಕುಂಠಿತ ಬೆಳವಣಿಗೆಯು ಅಶುಭವಾಗಿದೆ.
2). ಆಗ್ನೇಯ ದಿಕ್ಕಿನಲ್ಲಿ ಇರಲಿ ಮನಿ ಪ್ಲಾಂಟ್
ಯಾವುದೇ ಕಾರಣಕ್ಕೂ ಮನಿ ಪ್ಲಾಂಟ್ ಅನ್ನು ಈಶಾನ್ಯ ಮೂಲೆಯಲ್ಲಿ ಬೆಳೆಸಬಾರದು. ಅಂದರೆ ಉತ್ತರ ಮತ್ತು ಪೂರ್ವ ದಿಕ್ಕುಗಳ ಮಧ್ಯ ಭಾಗದಲ್ಲಿ. ಇಡೀ ಮನೆಯ ವಾಸ್ತುವಿನಲ್ಲಿ ಇದೊಂದು ನಕಾರಾತ್ಮಕ ಪ್ರಭಾವ ಉಂಟು ಮಾಡುವ ದಿಕ್ಕು ಎಂದು ತಿಳಿಯಲಾಗಿದೆ.
ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಹಣದ ಸಸ್ಯಗಳನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿಯೇ ಇರುವ ಮತ್ತು ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ದೇವರು ಗಣೇಶ. ಈ ದಿಕ್ಕಿನಲ್ಲಿ ಗಿಡನೆಡುವುದು ಎಂದರೆ ದೇವರ ಆಶೀರ್ವಾದ ಇರುತ್ತದೆ ಎಂದು ಅರ್ಥ.
3). ವಾರಕ್ಕೊಮ್ಮೆ ಮನಿ ಪ್ಲಾಂಟ್ ಗಿಡದ ನೀರು ಬದಲಿಸಿ
ಮನಿ ಪ್ಲಾಂಟ್ ಬೆಳೆಯುವ ಕುಂಡದಲ್ಲಿ ನೀರನ್ನು ವಾರಕ್ಕೊಮ್ಮೆ ಬದಲಿಸುತ್ತಿರಬೇಕು. ನಿಮ್ಮ ಮನೆಯಲ್ಲಿನ ಮನಿ ಪ್ಲಾಂಟ್ ಅಂದವನ್ನು ಹೆಚ್ಚಿಸಲು ಕೆಲವು ಸಣ್ಣ ಎಲೆಗಳನ್ನು ಟ್ರಿಮ್ ಮಾಡಬಹುದು
4.) ಯಾವುದೇ ಕಾರಣಕ್ಕೂ ಬೇರೆಯವರಿಗೆ ಗಿಡ ನೀಡಬೇಡಿ
ವಾಸ್ತು ಪ್ರಕಾರ ಮನಿ ಪ್ಲಾಂಟ್ ಎಂದಿಗೂ ಬೇರೆಯವರಿಗೆ ನೀಡಬಾರದು. ಇದು ಶುಕ್ರ ಗ್ರಹವನ್ನು ಕೋಪಗೊಳಿಸುತ್ತದೆ. ಶುಕ್ರ ಸಮೃದ್ಧಿ ಮತ್ತು ಯೋಗಕ್ಷೇಮದ ಸಂಕೇತ. ಬೇರೆಯವರಿಗೆ ಕೊಡೋದ್ರಿಂದ ನಿಮ್ಮ ಮೇಲಿನ ಅನುಗ್ರಹ ಕಡಿಮೆಯಾಗುತ್ತಂತೆ.
5.) ಮನೆಯ ಪ್ರವೇಶದ್ವಾರದಲ್ಲಿ ಮನಿ ಪ್ಲಾಂಟ್ ಇರಲಿ
ಮನೆಯ ಪ್ರವೇಶ ದ್ವಾರದಲ್ಲಿ ಯಾವಾಗಲೂ ಮನಿ ಪ್ಲಾಂಟ್‌ಗಳನ್ನು ಇಡಬೇಕು. ಹಾಗೆ ಮಾಡುವುದರಿಂದ ಹೊಸ ಆದಾಯದ ಮೂಲಗಳು ಮತ್ತು ಹೊಸ ವೃತ್ತಿ ಅವಕಾಶಗಳು ದೊರೆಯುತ್ತದೆ. ಅಲ್ಲದೆ,ನೀಲಿ ಪಾತ್ರೆಯಲ್ಲಿ ಮನಿ ಪ್ಲಾಂಟ್‌ಗಳನ್ನು ಹಾಕಬೇಡಿ.