
ಶುಭ ಶುಕ್ರವಾರದಂದು ಈ ಕೆಲಸ ಮಾಡಲೇಬೇಡಿ – ಜೀವನದಲ್ಲಿ ನಷ್ಟ, ಹಣದ ಸಮಸ್ಯೆ, ದುಃಖ ಆವರಿಸುತ್ತದೆ..!
- ಧಾರ್ಮಿಕ
- November 3, 2023
- No Comment
- 70
ನ್ಯೂಸ್ ಆ್ಯರೋ : ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಕ್ಕೂ ಒಂದು ದೇವರ ದಿನವಾಗಿ ಪರಿಗಣಿಸಿ ಪೂಜಿಸಲಾಗುತ್ತದೆ. ಈ ಪೈಕಿ ಶುಭ ಶುಕ್ರವಾರವಾದ ಇಂದು ಶುಕ್ರ ಗ್ರಹ, ಮಾತೆ ಲಕ್ಷ್ಮೀ ದೇವಿ ಮತ್ತು ಸಂತೋಷಿ ಮಾತಾಳನ್ನು ಪೂಜಿಸಲಾಗುತ್ತದೆ.
ಈ ದಿನ 3 ಪ್ರಬಲ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಶುಭ ಶುಕ್ರವಾರದಂದು ಉಪವಾಸ ಮಾಡಿ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಅವಿವಾಹಿತ ಹುಡುಗಿಯರು ಬಯಸಿದ ವರನನ್ನು ಪಡೆಯಲು, ಬಡತನ ದೂರವಾಗಲು, ಪುಣ್ಯ ಪ್ರಾಪ್ತಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.
ಶುಕ್ರವಾರದ ಶುಭ ದಿನವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿದರೆ ಮತ್ತೊಂದೆಡೆ ಶುಕ್ರ ಗ್ರಹಕ್ಕೆ ಅರ್ಪಿಸಲಾಗಿದೆ. ಹೀಗಾಗಿ ನಾವು ಈ ದಿನ ಮಾಡುವ ಕೆಲವೊಂದು ಸಣ್ಣ ತಪ್ಪುಗಳು ಶುಕ್ರ ಮತ್ತು ಮಾತೆ ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತದೆ. ಆಗ ಜೀವನದಲ್ಲಿ ನಷ್ಟ, ಹಣದ ಸಮಸ್ಯೆ, ದುಃಖ ಆವರಿಸುತ್ತದೆ.
ಶುಕ್ರವಾರ ಶುಕ್ರನ ಕೋಪಕ್ಕೆ ಕಾರಣರಾಗಬೇಡಿ
ಇಂದು ಶುಕ್ರವಾರ. ಈ ದಿನ ಕೆಲವು ವಿಶೇಷ ಪರಿಹಾರಗಳನ್ನು ಮಾಡುವ ಮೂಲಕ ಜಾತಕದಲ್ಲಿ ಶುಕ್ರ ಗ್ರಹವನ್ನು ಬಲಪಡಿಸಿಕೊಳ್ಳಬಹುದು. ಆದ್ರೆ ಅಪ್ಪಿತಪ್ಪಿ ಈ ದಿನ ತಪ್ಪು ಮಾಡಿದ್ರೆ, ಶುಕ್ರನನ್ನು ಕೋಪಕ್ಕೆ ಗುರಿ ಮಾಡಿದ್ರೆ ಜಾತಕದಲ್ಲಿ ಶುಕ್ರ ದುರ್ಬಲನಾಗುತ್ತಾನೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.
ಶುಕ್ರವಾರದಂದು ಹಣದ ವಹಿವಾಟು ಬೇಡ
ಧಾರ್ಮಿಕ ನಂಬಿಕೆಯ ಪ್ರಕಾರ, ಹಣದ ವಹಿವಾಟುಗಳನ್ನು ಶುಕ್ರವಾರ ಮಾಡಬಾರದು. ಏಕೆಂದರೆ ಶುಭ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಮೀಸಲಿಡಲಾಗಿದೆ. ಹಣ ಲಕ್ಷ್ಮಿಯ ಸ್ವರೂಪ. ಹೀಗಾಗಿ ಈ ದಿನ ಹಣ ವಹಿವಾಟು ಮಾಡಬಾರದು. ಈ ದಿನ ನಾವು ಯಾರಿಗಾದ್ರು ಹಣ ನೀಡಿದರೆ ಲಕ್ಷ್ಮಿ ನಮ್ಮಿಂದ ದೂರ ಹೋಗುತ್ತಾಳೆ, ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.
ಹುಡುಗಿಯರು, ಮಹಿಳೆಯರು ಮತ್ತು ನಪುಂಸಕರನ್ನು ಅವಮಾನಿಸಬೇಡಿ
ಭಾರತೀಯ ಸಂಪ್ರದಾಯದ ಪ್ರಕಾರ, ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಯನ್ನು ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶುಕ್ರವಾರದಂದು ಹುಡುಗಿ, ಮಹಿಳೆ, ಅಥವಾ ನಪುಂಸಕರನ್ನು ಅವಮಾನಿಸಬಾರದು. ಅವರಿಗೆ ಉಡುಗೊರೆ ನೀಡಿ ಖುಷಿ ಪಡಿಸಬೇಕು. ಅವರಿಂದ ಆಶೀರ್ವಾದ ಪಡೆಯಬೇಕು. ಇನ್ನು ಶುಕ್ರವಾರ ಮನೆಯಲ್ಲಿ ಹೆಣ್ಣು ಮಕ್ಕಳು ಅತ್ತರೆ ಮನೆಗೆ ಒಳ್ಳೆಯದಾಗಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ.
ಸಕ್ಕರೆ ನೀಡುವುದನ್ನು ತಪ್ಪಿಸಿ
ಧರ್ಮಗ್ರಂಥಗಳ ಪ್ರಕಾರ, ಸಕ್ಕರೆ ಚಂದ್ರ ಮತ್ತು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ, ಆದ್ದರಿಂದ ಶುಕ್ರವಾರ ಯಾರಿಗಾದರೂ ಸಕ್ಕರೆ ನೀಡಿದರೆ ಆ ವ್ಯಕ್ತಿಯ ಜಾತಕದಲ್ಲಿ ಶುಕ್ರ ದುರ್ಬಲನಾಗುತ್ತಾನಂತೆ. ಆ ವ್ಯಕ್ತಿಯ ಜೀವನದಲ್ಲಿ ಸಂತೋಷ, ಆರ್ಥಿಕ ಸಮೃದ್ಧಿ ಕಡಿಮೆಯಾಗುತ್ತದೆ.
ಹುಳಿ ತಿನ್ನಬಾರದು
ಶುಕ್ರವಾರ ಉಪವಾಸ ಮಾಡುವವರು ಹುಳಿ ಪದಾರ್ಥಗಳನ್ನು ಸೇವಿಸಬಾರದು. ಇದನ್ನು ಮಾಡುವುದರಿಂದ, ಅವರು ಉಪವಾಸದ ಪೂರ್ಣ ಫಲವನ್ನು ಪಡೆಯುವುದಿಲ್ಲ. ಜೊತೆಗೆ ಶುಕ್ರವಾರ ಯಾವುದೇ ಹುಳಿ ಪದಾರ್ಥವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದರಿಂದ ತಾಯಿ ಸಂತೋಷಿ ಮಾತ ಸಿಟ್ಟಿಗೇಳುತ್ತಾಳೆ.
ಶುಕ್ರವಾರ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಬೇರೆ ದಿನಗಳಂತೆ ಶುಕ್ರವಾರದಂದೂ ಕೂಡ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ದೇವತೆಗಳು ಸಂತೋಷಗೊಂಡು ಅವರ ಕೃಪೆಗೆ ಪಾತ್ರರಾಗುತ್ತೀರಿ. ಲಕ್ಷ್ಮಿ ದೇವಿಯ ಕೃಪೆ ಜೀವನದಲ್ಲಿ ಉಳಿಯುತ್ತದೆ. ಐಶ್ವರ್ಯ ವೃದ್ಧಿಯಾಗುತ್ತದೆ. ಹಾಗೂ ಸಂತೋಷಿ ಮಾತಾ ಕೃಪೆಯಿಂದ ಸಂತೋಷ, ನೆಮ್ಮದಿ ನೆಲೆಸುತ್ತದೆ.