
ಪ್ರತಿಷ್ಠಿತ ಐಸ್ ಕ್ರೀಂ ಕಂಪನಿ ಮಾಲೀಕರ ಸೊಸೆ ಆತ್ಮಹತ್ಯೆ ಪ್ರಕರಣ – ವಾರದ ಬಳಿಕ ಬಯಲಾಯ್ತು ಸಾವಿನ ಸತ್ಯ : ಗಂಡ, ಮಾವ ಸೇರಿ ಐವರ ಬಂಧನ
- ಕರ್ನಾಟಕ
- November 3, 2023
- No Comment
- 95
ನ್ಯೂಸ್ ಆ್ಯರೋ : ಮನೆಯಲ್ಲಿ ಅ.26 ರಂದು ಯಾರೂ ಇಲ್ಲದ ವೇಳೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಗೃಹಿಣಿ ಐಶ್ವರ್ಯ ಆತ್ಮಹತ್ಯೆ ಮಾಡಿದ್ದ ಪ್ರಕರಣ ಬೆಂಗಳೂರು ನಗರದಲ್ಲಿ ನಡೆದಿತ್ತು. ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ, ಮೃತೆಯ ಪತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ವಾರದ ಬಳಿಕ ಪ್ರಕರಣದ ಹಿಂದಿನ ಅಸಲಿಯತ್ತು ಹೊರಬಿದ್ದಿದೆ.

ಆಕೆ ಚೆಂದುಳ್ಳಿ ಚೆಲುವೆ, ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದ ಅಂದಗಾತಿ. ಮೂರ್ನಾಲ್ಕು ಡಿಗ್ರಿಯನ್ನು ಮುಡಿಗೇರಿಸಿಕೊಂಡು ವಿದೇಶದಲ್ಲಿ ವ್ಯಾಸಂಗ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ಳು. ಆದ್ರೆ ಅನುಮಾನ ಅನ್ನೋ ಭೂತ ತಲೆಗತ್ತಿಸಿಕೊಂಡ ಗಂಡನ ಮನೆಯ ಕಾಟಕ್ಕೆ ಐದು ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದು ನೊಂದು ಅಮ್ಮನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಈ ಚೆಲುವೆ ಹೆಸ್ರು ಐಶ್ವರ್ಯ. ಕಳೆದ ಐದು ವರ್ಷದ ಹಿಂದೆ ರಾಜ್ಯದ ಪ್ರತಿಷ್ಟಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ನ ವರಿಸಿದ್ಳು. ಬಿಇ ಅಂತಿಮ ವರ್ಷದಲ್ಲಿದ್ದ ಐಶ್ವರ್ಯಳನ್ನು ಮುಂದೆ ಓದಿಸೋದಾಗಿ ಮಾತು ಕೊಟ್ಟಿದ್ದ ಗಿರಿಯಪ್ಪ ಗೌಡ ಫ್ಯಾಮಿಲಿ ಅದ್ರಂತೆ ಅಮೇರಿಕಾಗೆ ಐಶ್ವರ್ಯಾಳನ್ನ ಕಳುಹಿಸಿ ಮಾಸ್ಟರ್ ಮಾಡಿಸಿದ್ರು. ಈ ವೇಳೆ ಐಶ್ವರ್ಯ ಪಾಲಿಗೆ ವಿಲನ್ ಆಗಿಬಂದಿದ್ದು ಇದೇ ಐಶ್ವರ್ಯ ಸೋದರತ್ತೆ ಗೀತಾ ಮತ್ತು ಅತ್ತೆ ಮಗಳು ಲಿಪಿ.

ಐಶ್ವರ್ಯ ತಂದೆ ಜೊತೆಗೆ ಆಸ್ತಿ ವಿಚಾರಕ್ಕೆ ಕಿರಿಕ್ ಮಾಡಿಕೊಂಡಿದ್ದ ಗೀತಾ, ಐಶ್ವರ್ಯ ಅಮೆರಿಕಾದಲ್ಲಿ ಸ್ನೇಹಿತರ ಜೊತೆಗೆ ಇದ್ದ ಒಂದಷ್ಟು ಪೋಟೋಗಳನ್ನ ಐಶ್ವರ್ಯ ಇನ್ಸ್ಟಾಗ್ರಾಮ್ ನಿಂದ ಸೇವ್ ಮಾಡಿಕೊಂಡಿದ್ಳು. ಐಶ್ವರ್ಯ ಮಾಡ್ರನ್ ಡ್ರೆಸ್ ಹಾಕಿದ್ದ ಫೋಟೋಗಳನ್ನ ಕ್ರಾಪ್ ಮಾಡಿ ಐಶ್ವರ್ಯ ಮಾವ ಗಿರಿಯಪ್ಪಗೆ ಕಳುಹಿಸಿ ನಿಮ್ಮ ಸೊಸೆ ಅಮೇರಿಕಾಗೆ ಓದೋಕೆ ಹೋಗಿಲ್ಲ ಶೋಕಿ ಮಾಡೋಕೆ ಹೋಗಿದ್ದಾಳೆ ಅಂತ ಐಶ್ವರ್ಯ ಬಗ್ಗೆ ಇಲ್ಲ ಸಲ್ಲದನ್ನು ಹೇಳಿದ್ರಂತೆ.
ರವೀಂದ್ರ ಕುಟುಂಬ ಐಶ್ವರ್ಯ ಚಾರಿತ್ರ್ಯ ವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರಂತೆ. ಇದರಿಂದಾಗಿ ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದರಂತೆ.

ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡುತ್ತಿದ್ದರಂತೆ. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದಳು.
ತಾನು ದುಡಿದ ಹಣದಲ್ಲಿ ಗಂಡನಿಗೆ ಐಶಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳಂತೆ. ಆದರೆ ಕುಟುಂಬಸ್ಥರ ಮಾತನ್ನ ಕೇಳಿ ಪತಿ ರಾಜೇಶ್ ಕೂಡ ಐಶ್ವರ್ಯಳನ್ನು ನಿಂದಿಸುತ್ತಿದ್ದನಂತೆ. ಇದರಿಂದ ಮನನೊಂದ ಐಶ್ವರ್ಯ, 20 ದಿನಗಳ ಹಿಂದೆ ತವರು ಸೇರಿದ್ದಳು.

ಐಶ್ವರ್ಯ ಹಲವು ಬಾರಿ ಅತ್ತೆ ಮನೆಯವರು ಕೊಡುತ್ತಿದ್ದ ಕಿರುಕುಳದ ಬಗ್ಗೆ ತಾಯಿ ಜೊತೆ ಮಾತನಾಡಿದ್ದಾಳೆ, ಒಂದೆರಡು ಬಾರಿ ಕರೆದು ಮಾತನಾಡಿ ಸಮಾಧಾನ ಮಾಡಿದ್ರು. ಆದರೆ ಪದೇ ಪದೇ ಕಿರುಕುಳ ತಾಳಲಾರದೆ ಮನ ನೊಂದ ಐಶ್ವರ್ಯ ತಾಯಿ ಮನೆಯಲ್ಲೇ ಕಳೆದ ತಿಂಗಳು 26ರಂದು ನೇಣಿಗೆ ಶರಣಾಗಿದ್ದಾಳೆ.
ಇನ್ನು ಘಟನೆ ಸಂಬಂಧ ಐಶ್ವರ್ಯ ತಾಯಿ ಉಷಾ ಗೊವಿಂದರಾಜನಗರ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ನನ್ನು ಪೋಲಿಸರು ಬಂಧಿಸಿದ್ದು ಜೈಲಿಗೆ ತಳ್ಳಿದ್ದಾರೆ.
ಇನ್ನೂ ಸಾವಿನಲ್ಲೂ ಸಾರ್ಥಕತೆ ಮೆರೆದಿರೋ ಐಶ್ವರ್ಯ ತನ್ನ ಕಣ್ಣುಗಳನ್ನು ಇಬ್ಬರು ಅಂಧರಿಗೆ ದಾನ ಮಾಡಿ ಮಣ್ಣು ಸೇರಿದ್ದಾಳೆ. ಇನ್ನು ಅನುಮಾನ ಅನ್ನೋ ಭೂತ ಒಂದು ಅಮಾಯಕ ಜೀವ ಬಾರದ ಲೋಕಕ್ಕೆ ಪಯಣ ಬೆಳೆಸಿದೆ…!!