ನಿಮ್ಮ ವಾಟ್ಸ್ಯಾಪ್ ಖಾತೆ ಹ್ಯಾಕ್ ಆಗಿದೆ ಅಂತ ಡೌಟ್ ಇದ್ಯಾ? – ಹೀಗೆ ಸಿಂಪಲ್ ಆಗಿ ಡೌಟ್ ಕ್ಲಿಯರ್ ಮಾಡ್ಕೊಳ್ಳಿ..!

ನಿಮ್ಮ ವಾಟ್ಸ್ಯಾಪ್ ಖಾತೆ ಹ್ಯಾಕ್ ಆಗಿದೆ ಅಂತ ಡೌಟ್ ಇದ್ಯಾ? – ಹೀಗೆ ಸಿಂಪಲ್ ಆಗಿ ಡೌಟ್ ಕ್ಲಿಯರ್ ಮಾಡ್ಕೊಳ್ಳಿ..!

ನ್ಯೂಸ್ ಆ್ಯರೋ : ಮೆಟಾ ಒಡೆತನದ ವಾಟ್ಸ್ಆ್ಯಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನೂ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿದೆ. ಫೇಸ್ಬುಕ್ , ಇನ್ಸ್ಟಾಗ್ರಾಮ್ ರೀತಿಯ ಎಮೋಜಿ ರಿಯಾಕ್ಷನ್ ಫೀಚರ್, ಲಾಗೌಟ್ ಫೀಚರ್, ಫೋಟೋ ಎಡಿಟ್ ಮಾಡುವ ಆಯ್ಕೆ ಹೀಗೆ ಅನೇಕ ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ವಾಟ್ಸ್ಆ್ಯಪ್ನಲ್ಲಿ ಮಲ್ಟಿ ಡಿವೈಸ್‌ ಸಪೋರ್ಟ್‌ ಅವಕಾಶ ನೀಡಿರುವುದು ಗೊತ್ತೇ ಇದೆ. ಇದರಿಂದ ಏಕಕಾಲಕ್ಕೆ ಎರಡು ಮೂರು ಡಿವೈಸ್‌ಗಳಲ್ಲಿ ವಾಟ್ಸ್ಆ್ಯಪ್ ಖಾತೆ ಬಳಕೆ ಮಾಡಬಹುದು.

ಬಳಕೆದಾರರ ಖಾತೆ ಸುರಕ್ಷತೆಗೆ ಕೆಲವು ಫೀಚರ್ಸ್‌ ಇದ್ದರೂ ಕೆಲವೊಮ್ಮೆ ವಾಟ್ಸ್ಆ್ಯಪ್ ಹ್ಯಾಕ್‌ ಆಗುವ ಸಾಧ್ಯತೆಗಳು ಇರುತ್ತವೆ. ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸ್ಆ್ಯಪ್ ಚಾಟ್ ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳಿವೆ.

ವಾಟ್ಸ್ಆ್ಯಪ್ ಖಾತೆಯನ್ನು ಇತರೆ ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದೊಂದು ಅನುಕೂಲಕರ ಫೀಚರ್ ಆಗಿದ್ದರೂ ಕೆಲವೊಮ್ಮೆ ಸಮಸ್ಯೆ ಎನಿಸಬಹುದು. ಕಂಪ್ಯೂಟರ್ಗಳಲ್ಲಿಯೂ ಈಗೀಗ ವಾಟ್ಸ್ಆ್ಯಪ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಮ್ಮ ಖಾತೆ ಎಲ್ಲಿ ಲಾಗಿನ್ ಆಗಿರುತ್ತದೆ ಎಂಬುದು ಅರಿವಿಗೆ ಬರುವುದಿಲ್ಲ. ಹಾಗಾದ್ರೆ ನಿಮ್ಮ ವಾಟ್ಸ್ಆ್ಯಪ್ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ‌‌ ಗೊತ್ತೇ?

ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸ್ಆ್ಯಪ್ ಚಾಟ್‌/ ಮೀಡಿಯಾ ಫೈಲ್ಸ್‌ ವೀಕ್ಷಿಸುತ್ತಾರೆ. ಅಂದರೆ ಬಳಕೆದಾರರ ತಪ್ಪಿನಿಂದಲೇ ಅವರ ವಾಟ್ಸ್ಆ್ಯಪ್ ಹ್ಯಾಕ್ ಆಗುವ ಚಾನ್ಸ್‌ ಇರುತ್ತವೆ. ಹೀಗೆ ಹ್ಯಾಕ್ ಆದ ವಾಟ್ಸ್ಆ್ಯಪ್ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸ್ಆ್ಯಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.

ಬಳಕೆದಾರರ ವಾಟ್ಸ್ಆ್ಯಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್‌ಪಾರ್ಟಿ ಆಪ್‌ ಅಗತ್ಯ ಇಲ್ಲ. ಬದಲಿಗೆ ಬಳಕೆದಾರರು ಅವರ ವಾಟ್ಸ್ಆ್ಯಪ್ನಲ್ಲಿಯೇ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು

ಮೊದಲಿಗೆ ನಿಮ್ಮ ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ತೆರೆಯಿರಿ
ನಂತರ ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಸೆಲೆಕ್ಟ್ ಮಾಡಿರಿ
ಬಳಿಕ ಅಲ್ಲಿ ಕಾಣುಸಿವ ವಾಟ್ಸ್ಆ್ಯಪ್ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್ಆ್ಯಪ್ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸ್ಆ್ಯಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.

ಬಾರ್‌ಕೋಡ್‌ ಸ್ಕ್ಯಾನ್‌

ಕೆಲವರಿಗೆ ಬೇರೆಯವರ ವಾಟ್ಸ್ಆ್ಯಪ್ ಇಣುಕಿ ನೋಡುವ ಕುತೂಹಲ ಇರುತ್ತದೆ. ಅಂತಹವರು ಇತರರ ವಾಟ್ಸ್ಆ್ಯಪ್ ಮೆಸೆಜ್ ಓದಲು ಕಳ್ಳ ಮಾರ್ಗ ಹುಡುಕುತ್ತಾರೆ. ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ವಾಟ್ಸ್ಆ್ಯಪ್ ಲ್ಯಾಪ್‌ಟಾಪ್‌ಗೆ ಅಥವಾ ಇತರೆ ಡಿವೈಸ್‌ನಲ್ಲಿ ನಕಲು ಮಾಡುವ ಸಾಧ್ಯತೆಗಳಿರುತ್ತವೆ.

ಕೆಲವು ಬಳಕೆದಾರರು ತಮ್ಮ ಫೋನಿಗೆ ಯಾವುದೇ ಲಾಕ್‌ ಇಟ್ಟಿರುವುದಿಲ್ಲ. ಹಾಗೆಯೇ ವಾಟ್ಸ್ಆ್ಯಪ್ ಆಪ್ ತೆರೆಯಲು ಸಹ ಯಾವುದೇ ಪಾಸ್‌ವರ್ಡ್‌ ಇಟ್ಟಿರುವುದಿಲ್ಲ. ಇಂತಹ ಖಾತೆಗಳಿಗೆ ಸುಲಭವಾಗಿ ಇತರರು ಹ್ಯಾಕ್ ಮಾಡಬಹುದಾಗಿದೆ. ಅವರ ವಾಟ್ಸ್ಆ್ಯಪ್ ಖಾತೆ ತೆರೆದು ವಾಟ್ಸ್ಆ್ಯಪ್ ವೆಬ್ / ಲಿಂಕ್‌ ಡಿವೈಸ್‌ ಬಾರ್‌ಕೋಡ್ ಸ್ಕ್ಯಾನ್ ಮೂಲಕ ಇನ್ನೊಂದು ಡಿವೈಸ್‌ನಲ್ಲಿ ನಕಲು ವಾಟ್ಸ್ಆ್ಯಪ್ ತೆರೆದುಕೊಳ್ಳುವ ಚಾನ್ಸ್‌ ಇರುತ್ತವೆ.

ಹ್ಯಾಕ್ ತಡೆಯಲು ಏನು ಮಾಡಬೇಕು?

ವಾಟ್ಸ್ಆ್ಯಪ್ ಹ್ಯಾಕ್ ಆಗುವುದನ್ನು ತಡೆಯಲು ಇತರೆ ಡಿವೈಸ್‌ಗಳಲ್ಲಿ ನೀವು ತೆರೆದಿರುವ ಎಲ್ಲಾ ಸೆಷನ್‌ಗಳಿಂದ ಲಾಗ್ ಔಟ್ ಮಾಡಬಹುದು. ಹೀಗೆ ಮಾಡಿದರೇ ಮೂರನೇ ವ್ಯಕ್ತಿಯು ನಿಮ್ಮ ಖಾತೆಗೆ ಪ್ರವೇಶವನ್ನು ತಕ್ಷಣ ಕಳೆದುಕೊಳ್ಳುತ್ತಾನೆ. ಈ ಸಂಗತಿಗಳು ಮತ್ತೆ ಸಂಭವಿಸುವುದನ್ನು ತಪ್ಪಿಸಲು, ಅಪ್ಲಿಕೇಶನ್ ಲಾಕ್‌ನೊಂದಿಗೆ ವಾಟ್ಸ್ಆ್ಯಪ್ ಅನ್ನು ಕಾನ್ಫಿಗರ್ ಮಾಡುವುದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಈ ರೀತಿಯಾಗಿ, ಯಾರಾದರೂ ನಿಮ್ಮ ಫೋನ್ ಪಡೆದರೂ ಸಹ, ಅವರು ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅದನ್ನು ವಾಟ್ಸ್ಆ್ಯಪ್ ವೆಬ್ ಮೂಲಕ ಪಿಸಿ ಅಥವಾ ಇತರ ಅಪ್ಲಿಕೇಶನ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *