ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ಇಂದಿನಿಂದ ಚಾರ್‌ಧಾಮ್ ಯಾತ್ರೆ ಆರಂಭ: ಬುಕ್ಕಿಂಗ್ ತುಂಬಾ ಸುಲಭ

ನ್ಯೂಸ್ ಆ್ಯರೋ : ಬದರಿನಾಥ್ ಧಾಮ್, ಯಮುನೋತ್ರಿ ಧಾಮ್‌, ಕೇದಾರನಾಥ ಧಾಮ್ ಮತ್ತು ಗಂಗೋತ್ರಿ ಧಾಮ್ ಕ್ಷೇತ್ರಗಳನ್ನು ಸಂದರ್ಶಿಸುವುದನ್ನು ಚಾರ್ ಧಾಮ್ ಯಾತ್ರಾ ಎಂದು ಕರೆಯುತ್ತಾರೆ. ಇಂತಹ ಪವಿತ್ರವಾದ ಯಾತ್ರೆ ಮಾಡುವುದು ಬಹುತೇಕ ಹಿಂದೂಗಳ ಕನಸು ಕೂಡ ಹೌದು.

ಇದೀಗ ಇಂದಿನಿಂದ ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್‌ ಯಾತ್ರೆ ಆರಂಭವಾಗಿದ್ದು, ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7 ಗಂಟೆಗೆ ತೆರೆದರೆ, ಗಂಗೋತ್ರಿ ದೇವಾಲಯವು ಮಧ್ಯಾಹ್ನ 12.20 ತೆರೆಯುತ್ತದೆ. ಮೇ 12 ರಂದು ಬೆಳಗ್ಗೆ 6 ಗಂಟೆಗೆ ಉತ್ತರಾಖಂಡದ ಚಾರ್​ಧಾಮ್ ಯಾತ್ರೆಯ ಭಾಗವಾಗಿರುವ ಬದರಿನಾಥ್ ಅನ್ನು ತೆರೆಯಲಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.

ಚಾರ್‌ಧಾಮ್ ಎಂದು ಕರೆಯಲಾಗುವ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ದೇವಸ್ಥಾನಗಳನ್ನು ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆಯಲಾಗುತ್ತದೆ. ಉಳಿದ ಆರು ತಿಂಗಳು ದೇವಸ್ಥಾನಗಳ ಬಾಗಿಲನ್ನು ಮುಚ್ಚಲಾಗಿರುತ್ತದೆ. ಈ ವರ್ಷ ಚಾರ್‌ಧಾಮ್ ಯಾತ್ರೆಯು ಮೇ10 ಅಂದರೆ ಅಕ್ಷಯ ತೃತೀಯವಾದ ಇಂದಿನಿಂದ ಪ್ರಾರಂಭವಾಗಿದ್ದು, ಪೂಜಾ ಕಾರ್ಯಗಳೊಂದಿಗೆ ಕೇದಾರನಾಥ ದೇವಸ್ಥಾನವನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತದೆ. ಇವತ್ತಿನಿಂದ ಮುಂದಿನ ಆರು ತಿಂಗಳು ಭಕ್ತರು ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದ್ದು, ಇದಕ್ಕಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬೇಕಾಗುತ್ತದೆ.

ಏಪ್ರಿಲ್​ 15ರಿಂದ ಪ್ರಾರಂಭವಾದ ಆನ್​ಲೈನ್ ನೋಂದಣಿ ಪ್ರಕ್ರಿಯೆಯನ್ನು ಜೂನ್ ತಿಂಗಳ ಕೊನೆಯವರೆಗೆ ವಿಸ್ತರಿಸಲಾಗಿದೆ. ಈ ಬಾರಿ ಮೇ ತಿಂಗಳ ಆರಂಭದ ವೇಳೆಗೆ ಆನ್​ಲೈನ್​ ನೋಂದಣಿ ಸಂಖ್ಯೆ 21 ಲಕ್ಷ ದಾಟಿದೆ. ಈ ಕಾರಣಕ್ಕಾಗಿ ಮೇ ತಿಂಗಳಲ್ಲಿ ಬುಕಿಂಗ್ ಫುಲ್ ಆಗಿವೆ. ಈ ಬಾರಿ 7 ಲಕ್ಷ 41 ಸಾವಿರಕ್ಕೂ ಹೆಚ್ಚು ಮಂದಿ ಕೇದಾರನಾಥ ಯಾತ್ರೆಗೆ ಹೆಸರು ನೋಂದಾಯಿಸಿದ್ದಾರೆ. ಬದರಿನಾಥ್​ 7 ಲಕ್ಷ 38 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿಗೆ ಕ್ರಮವಾಗಿ 38 ಲಕ್ಷ ಮತ್ತು 33 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.

ನೋಂದಣಿ ಇಲ್ಲದೆ ಯಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಹರಿದ್ವಾರ ಮತ್ತು ಋಷಿಕೇಶದಲ್ಲಿ ಮೇ8ರಿಂದ ಆಫ್​ಲೈನ್​ ನೋಂದಣಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಆಫ್​ಲೈನ್​ ನೋಂದಣಿಯೂ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಕೇದಾರನಾಥ ಪ್ರಾಮುಖ್ಯತೆ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರನಾಥ ಶಿವನ ಪವಿತ್ರ ಸ್ಥಳವಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಗಟ್ಟಲೆ ಜನರು ದರ್ಶನಕ್ಕೆ ಬರುತ್ತಾರೆ. ಶಿವನ ಹನ್ನೆರಡು ಜ್ಯೋತಿರ್ಲಿಂಗಗಳು ಮತ್ತು ಪಂಚ ಕೇದಾರಗಳಲ್ಲಿ ಕೇದಾರನಾಥವನ್ನು ಸಹ ಪರಿಗಣಿಸಲಾಗಿದೆ. ಕೇದಾರನಾಥ ದೇವಾಲಯದಲ್ಲಿ ಸ್ಥಾಪಿಸಲಾದ ಶಿವಲಿಂಗವು ಸ್ವಯಂಪೂರ್ಣವಾಗಿದೆ. ಇದರಿಂದಾಗಿ ದೇವಾಲಯದ ಮಹತ್ವ ಹೆಚ್ಚುತ್ತಿದೆ.

ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಹೇಗೆ?

ಅಧಿಕೃತ ವೆಬ್‌ಸೈಟ್ www.registrationandtouristcare.uk.gov.in ಗೆ ಭೇಟಿ ನೀಡಿ

ನೋಂದಣಿ/ಲಾಗ್-ಇನ್ ಬಟನ್ ಕ್ಲಿಕ್ ಮಾಡಿ.

ಹೊಸ ವಿಂಡೋದಲ್ಲಿ ಫಾರ್ಮ್‌ನಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ.

ಒದಗಿಸಿದ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಬಳಸಿಕೊಂಡು OTP ಪರಿಶೀಲನೆಯ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಿ.

ಪರಿಶೀಲನೆಯ ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ.

ನಿಮ್ಮ ವೈಯಕ್ತೀಕರಿಸಿದ ಡ್ಯಾಶ್‌ಬೋರ್ಡ್ ಅನ್ನು ಪ್ರವೇಶಿಸಿ ಮತ್ತು ಯಾತ್ರಿಕರು ಅಥವಾ ಪ್ರವಾಸಿಗರನ್ನು ಸೇರಿಸಿ/ನಿರ್ವಹಿಸು ಬಟನ್ ಅನ್ನು ಕ್ಲಿಕ್ ಮಾಡಿ.

ಪ್ರಕಾರ, ಹೆಸರು, ದಿನಾಂಕಗಳು ಮತ್ತು ಪ್ರವಾಸಿಗರ ಸಂಖ್ಯೆಯಂತಹ ಅಗತ್ಯವಿರುವ ಎಲ್ಲಾ ಪ್ರವಾಸದ ವಿವರಗಳನ್ನು ಒದಗಿಸಿ.

ಬೇಕಾದ ಪುರಾವೆಗಳನ್ನು ನಮೂದಿಸಿ.

ಯಶಸ್ವಿ ನೋಂದಣಿಯ ನಂತರ, ನಿಮ್ಮ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸುವ SMS ಮೂಲಕ ನೀವು ಅನನ್ಯ ನೋಂದಣಿ ಸಂಖ್ಯೆಯನ್ನು (URN) ಸ್ವೀಕರಿಸುತ್ತೀರಿ.

ನಿಮ್ಮ ಪ್ರಯಾಣದ ಸಮಯದಲ್ಲಿ ಅಗತ್ಯವಿರುವ ಚಾರ್‌ ಧಾಮ್‌ ಯಾತ್ರೆಗಾಗಿ ನೋಂದಣಿ ಪತ್ರವನ್ನು ಡೌನ್‌ಲೋಡ್ ಮಾಡಿ. 

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *