War Updates : ಹಮಾಸ್‌ಗೆ ಹಣ ಬೇಕಾದಾಗ ಯುದ್ಧ ಶುರು ಮಾಡುತ್ತಾರೆ – ಸ್ಫೋಟಕ ಹೇಳಿಕೆ ನೀಡಿದ ಹಮಾಸ್ ಸಂಸ್ಥಾಪಕನ ಮಗ ಯೂಸೆಫ್

War Updates : ಹಮಾಸ್‌ಗೆ ಹಣ ಬೇಕಾದಾಗ ಯುದ್ಧ ಶುರು ಮಾಡುತ್ತಾರೆ – ಸ್ಫೋಟಕ ಹೇಳಿಕೆ ನೀಡಿದ ಹಮಾಸ್ ಸಂಸ್ಥಾಪಕನ ಮಗ ಯೂಸೆಫ್

ನ್ಯೂಸ್ ಆ್ಯರೋ : ಹಮಾಸ್ ಉಗ್ರರ ಹಾಗೂ ಇಸ್ರೇಲಿಗರ ಮಧ್ಯೆ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಹಮಾಸ್ ಸಂಸ್ಥಾಪಕ ಶೇಖ್ ಹಸನ್ ಯೂಸೆಫ್ ಅವರ ಪುತ್ರ ಮೊಸಾಬ್ ಹಸನ್ ಯೂಸೆಫ್ ಅವರು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಯೂಸೆಫ್ ಅವರು ಹಮಾಸ್ ಭಯೋತ್ಪಾದಕ ಸಂಘಟನೆಯ ನೈಜತೆಯನ್ನು ಎಲ್ಲರಿಗೂ ವಿವರಿಸಿದ್ದಾರೆ. ಅಧಿಕಾರದ ಲಾಲಸೆ ಮತ್ತು ಅದರ ರಾಜಕೀಯ ಲಾಭಕ್ಕಾಗಿ ಗಾಜಾದ ಜನರು ನರಳುತ್ತಿದ್ದಾರೆ ಎಂದು ಎರಡು ನಿಮಿಷಗಳ ಸುದೀರ್ಘ ವೀಡಿಯೊದಲ್ಲಿ ಯೂಸೆಫ್ ಹೇಳಿದ್ದಾರೆ.

ಗಾಜಾದ ಜನರ ಇಂದಿನ ಪರಿಸ್ಥಿತಿಗೆ ಹಮಾಸ್ ಉಗ್ರರೇ ನೇರ ಕಾರಣ ಎಂದು ದೂರಿದ್ದಾರೆ. ಗಾಜಾದ ಜನರು ಇಷ್ಟು ದಿನ ತುಳಿತಕ್ಕೊಳಗಾಗಿದ್ದಾರೆ. ಅವರು ಮುತ್ತಿಗೆ, ಹಿಂಸಾಚಾರ, ಅನೇಕ ಯುದ್ಧಗಳನ್ನು ಸಹಿಸಬೇಕಾಯಿತು, ಹಮಾಸ್‌ ನ ಅಧಿಕಾರಕ್ಕಾಗಿ ಮತ್ತು ಹಮಾಸ್‌ನ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಇದೆಲ್ಲಾ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

ಹಮಾಸ್‌ಗೆ ಹಣ ಬೇಕಾದಾಗ ಯುದ್ಧ ಶುರು ಮಾಡುತ್ತಾರೆ..!!

ಹಮಾಸ್ ಪ್ರತಿ ಕೆಲವು ವರ್ಷಗಳಿಗೊಮ್ಮೆ ಅವರು ಹಣ ಬಯಸಿದಾಗ ಯುದ್ಧ ಪ್ರಾರಂಭಿಸುತ್ತಾರೆ. ಅವರು ಮಕ್ಕಳ ರಕ್ತವನ್ನು ಚೆಲ್ಲುತ್ತಾರೆ. ಇದು ಅವರಿಗೆ ಆಟ ಎನ್ನುವಂತಾಗಿದೆ ಎಂದು ಭಯೋತ್ಪಾದಕ ಗುಂಪಿನಿಂದ ಪಕ್ಷಾಂತರಗೊಂಡ ಯೂಸೆಫ್ ಹೇಳಿದ್ದಾರೆ.

ಇಸ್ರೇಲ್ ಗೆ ಪ್ಯಾಲೆಸ್ತೀನ್ ರಕ್ತದ ದಾಹವಿಲ್ಲ:

ಇನ್ನೂ ಇಸ್ರೇಲಿಗರಿಗೆ ಪ್ಯಾಲೆಸ್ತೀನ್‌ ರಕ್ತ ಬೇಕಾಗಿಲ್ಲ ಎಂದಿದ್ದಾರೆ.
ಕಳೆದ ತಿಂಗಳು ಗಾಜಾದ ಆಸ್ಪತ್ರೆಯಲ್ಲಿ ನಡೆದ ಸ್ಫೋಟದ ಬಗ್ಗೆ ಮಾತನಾಡಿದ ಯೂಸೆಫ್, “ಏಕೈಕ ಮಿಸ್‌ಫೈರ್ ಆಸ್ಪತ್ರೆಯಲ್ಲಿ ಆಶ್ರಯ ಪಡೆದ ನೂರಾರು ನಿರಾಶ್ರಿತರನ್ನು ಕೊಂದಿತು. ಅವರು ಇಸ್ರೇಲ್ ಅನ್ನು ದೂಷಿಸಿದರು. ನಾವು ಇಲ್ಲಿ ಏನು ಮಾತನಾಡುತ್ತಿದ್ದೇವೆ? ಇಸ್ರೇಲಿ ಪ್ರಜಾಪ್ರಭುತ್ವ. ಇಸ್ರೇಲ್ ಜವಾಬ್ದಾರಿಯುತವಾಗಿದೆ ಎಂದು ಇಸ್ರೇಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಪ್ಯಾಲೆಸ್ತೀನ್ ಮಕ್ಕಳು, ಪ್ಯಾಲೆಸ್ತೀನ್ ಸಮಾಜವನ್ನು ಈ ಅಪರಾಧಿಗಳು ಅಪಹರಿಸಿದ್ದಾರೆ. ‘ಹಮಾಸ್ ತನ್ನ ಆದರ್ಶಗಳನ್ನು ಮಾನವ ಜೀವನಕ್ಕಿಂತ ಹೆಚ್ಚು ಗೌರವಿಸುತ್ತದೆ ಎಂದಿದ್ದಾರೆ.

ಯೂಸೆಫ್ ಅವರು ಹಮಾಸ್‌ ಗಾಗಿ ಸಂದೇಶ ಹಂಚಿಕೊಂಡಿದ್ದು, ನೀವು (ಹಮಾಸ್) ರಕ್ಷಣೆಯಿಲ್ಲದ ನಾಗರಿಕರ ಜೀವಗಳನ್ನು ಅಪಾಯಕ್ಕೆ ಒಳಪಡಿಸುತ್ತೀರಿ, ಅವರನ್ನು ಆಳಲು ನಿಮಗೆ ವಹಿಸಿಕೊಟ್ಟರು, ಅವರನ್ನು ಮಾನವ ಗುರಾಣಿಗಳಾಗಿ ಬಳಸಬೇಡಿ. ಗಾಜಾದಲ್ಲಿ ನಿರಾಶ್ರಿತರು ಹಸಿವಿನಿಂದ ಬಳಲುತ್ತಿರುವಾಗ ನೀವು ಐಷಾರಾಮಿ ಬದುಕು ನಡೆಸಿದ್ದೀರಿ ಎಂದು ದೂರಿದ್ದಾರೆ.

ನೀವು ನಿಮ್ಮ ಆದರ್ಶಗಳನ್ನು ಗೌರವಿಸಿದ್ದೀರಿ. ನಿಮ್ಮ ನಿಷ್ಪ್ರಯೋಜಕ ಪ್ರಯತ್ನವು ಯಾವಾಗಲೂ ಇಸ್ರೇಲ್ ಅನ್ನು ನಾಶಮಾಡುವುದಾಗಿದೆ. ಪ್ಯಾಲೆಸ್ತೀನ್ ರಾಷ್ಟ್ರವನ್ನು ನಿರ್ಮಿಸಲು ಅಲ್ಲ ಎಂದು ಅವರು ಟೀಕಿಸಿದ್ದಾರೆ.

‘ಹಮಾಸ್ ಕೈಯಲ್ಲಿ ನಾಗರಿಕರ ರಕ್ತ’:

ದುರದೃಷ್ಟವಶಾತ್, ಹಮಾಸ್ ಈಗ ಇಸ್ರೇಲ್ ಮತ್ತು ಸ್ವತಂತ್ರ ಜಗತ್ತನ್ನು ತೊರೆದಿದೆ. ಆದರೆ ಅವರೊಂದಿಗೆ ಹೋರಾಡಲು ಮತ್ತು ಅವರ ಹಿಂಸಾಚಾರವನ್ನು ಕೊನೆಗೊಳಿಸಲು ಯಾವುದೇ ಆಯ್ಕೆ ಇಲ್ಲ. ಅನೇಕ ನಾಗರಿಕರು ಸಾಯುತ್ತಿದ್ದಾರೆ. ಅವರ ರಕ್ತ ಹಮಾಸ್ ಕೈಯಲ್ಲಿದೆ, ನಾನು ಇದನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನೂ ಮೊಸಾಬ್ ಹಸನ್ ಯೂಸೆಫ್ ಹಿನ್ನೆಲೆ:

ಹಮಾಸ್ ಸಂಸ್ಥಾಪಕ ಶೇಖ್ ಹಸನ್ ಯೂಸೆಫ್ ಅವರ ಮಗ. ಈ ವರ್ಷದ ಅಕ್ಟೋಬರ್ ಮಧ್ಯದಲ್ಲಿ ಪಶ್ಚಿಮ ದಂಡೆಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಅವರ ತಂದೆಯನ್ನು ಬಂಧಿಸಲಾಯಿತು.
‘ಗ್ರೀನ್ ಪ್ರಿನ್ಸ್’ ಎಂದು ಕರೆಯಲ್ಪಡುವ ಯೂಸೆಫ್, ಹಮಾಸ್‌ನಿಂದ ಪಕ್ಷಾಂತರಗೊಂಡಿದ್ದರು ಮತ್ತು 1997 ರಿಂದ 2007 ರವರೆಗೆ ಇಸ್ರೇಲಿ ಗೂಢಚಾರರಾಗಿ ಸೇವೆ ಸಲ್ಲಿಸಿದ್ದರು. ಅವರು ಆತ್ಮಹತ್ಯಾ ಬಾಂಬ್ ದಾಳಿಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಸಹಾಯ ಮಾಡುವ ಅಮೂಲ್ಯವಾದ ಗುಪ್ತಚರವನ್ನು ಒದಗಿಸಿದರು.

ಯೂಸೆಫ್ ಅವರು ತನ್ನ ತಂದೆಯ ಉದ್ದೇಶಗಳು, ಯಹೂದಿ ಜನರನ್ನು ‘ಸಂಹಾರ’ ಮಾಡುವ ಮತ್ತು ವಿಶ್ವದಾದ್ಯಂತ ಷರಿಯಾ ಕಾನೂನನ್ನು ಸ್ಥಾಪಿಸುವ ಹಮಾಸ್‌ನ ಗುರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *