‘ದೆವ್ವದ ಕಾಟದಿಂದ ಮುಕ್ತಿ ಸಿಗ್ಬೇಕಾದ್ರೆ ಇಸ್ಲಾಂಗೆ ಮತಾಂತರವಾಗು’ – ಮಹಿಳೆಗೆ ನಂಬಿಸಿ ಮತಾಂತರಿಸಿದ್ದ ಮೌಲ್ವಿ ಅರೆಸ್ಟ್..!!

‘ದೆವ್ವದ ಕಾಟದಿಂದ ಮುಕ್ತಿ ಸಿಗ್ಬೇಕಾದ್ರೆ ಇಸ್ಲಾಂಗೆ ಮತಾಂತರವಾಗು’ – ಮಹಿಳೆಗೆ ನಂಬಿಸಿ ಮತಾಂತರಿಸಿದ್ದ ಮೌಲ್ವಿ ಅರೆಸ್ಟ್..!!

ನ್ಯೂಸ್ ಆ್ಯರೋ : ‘ಮತಾಂತರ’ ಅನ್ನುವಂತದ್ದು ಇದೀಗ ದೇಶವ್ಯಾಪಿ ಹಬ್ಬಿರುವ ಪಿಡುಗು ಅಂತಾನೇ ಹೇಳಬಹುದು. ಕೋಮು ಸೌಹಾರ್ದತೆಯಿಂದ ಪ್ರತೀ ಧರ್ಮವನ್ನು ಗೌರವಿಸುವ ಕೆಲವು ಜಿಲ್ಲೆಗಳಿವೆ. ಸಹೋದರತ್ವಕ್ಕೆ ಮಾದರಿ ಅಂತಾನೂ ಅನ್ನಿಸಿಕೊಂಡಿದೆ. ಆದರೆ ಧರ್ಮ ಧರ್ಮಗಳ ನಡುವೆ ದ್ವೇಷ, ಅಸೂಯೆ ಇದ್ದರೆ ಅಲ್ಲಿ ಶಾಂತಿಯ ನೆಲೆಯಾಗುವುದಿಲ್ಲ. ಮತಾಂತರಕ್ಕೆ ಬಲಿಯಾಗಿ ಅನೇಕ ಮಹಿಳೆಯರು ತಮ್ಮ ಬದುಕು ಹಾಳು ಮಾಡಿಕೊಂಡ ಸಂಗತಿಗಳನ್ನು ನಾವು ಮಾಧ್ಯಮದಲ್ಲಿ ಕೂಡಾ ಆಗಾಗ ಕೇಳುತ್ತಿರುತ್ತೇವೆ, ನೋಡುತ್ತಿರುತ್ತೇವೆ.‌ ಆಮಿಷವೊಡ್ಡಿ ಮತಾಂತರ ಮಾಡಲು ಅನೇಕ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಇಲ್ಲೊಬ್ಬ ಮೌಲ್ವಿ ಏನ್ ಮಾಡಿದ್ದಾನೆ ನೋಡಿ….

ಇಸ್ಲಾಂಗೆ ಮತಾಂತರವಾಗುವುದರಿಂದ ‘ದುಷ್ಟ ಶಕ್ತಿಯಿಂದ ಬಿಡುಗಡೆ ಸಾಧ್ಯ’ ಎಂದು ಮಹಿಳೆಯನ್ನು ಹೆದರಿಸಿ ನಂಬಿಸಿದ್ದ ಆರೋಪದಲ್ಲಿ ಉತ್ತರ ಪ್ರದೇಶದಲ್ಲಿ ಮೌಲ್ವಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಹಿಳೆಯ ಮಗನಿಂದಲೇ ಕೇಸು ದಾಖಲು

ಮಹಿಳೆಯ ಮಗ ಅಕ್ಷಯ್ ಶ್ರೀವಾಸ್ತವ (35) ನಂದಗ್ರಾಮ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಮೌಲ್ವಿ ಸರ್ಫರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೌಲ್ವಿಯ ಸಲಹೆಯಂತೆ ಮನೆಯಲ್ಲಿದ್ದ ಎಲ್ಲಾ ಹಿಂದೂ ದೇವರ ವಿಗ್ರಹಗಳು ಮತ್ತು ಫೋಟೋಗಳನ್ನು ಅಮ್ಮ ಕಿತ್ತು ಹಾಕಿದ್ದರು. ಇಸ್ಲಾಂಗೆ ಮತಾಂತರವಾಗುವಂತೆ ತಮ್ಮ ಮಕ್ಕಳು ಹಾಗೂ ಕುಟುಂಬದ ಇತರೆ ಸದಸ್ಯರಿಗೂ ಒತ್ತಾಯಿಸಲು ಶುರುಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ.

ಮಹಿಳೆಯನ್ನು ಮೌಲ್ವಿ ಏನೆಂದು ಹೇಳಿ ನಂಬಿಸಿದ್ದ…?

ಹಿಂದೂ ಧರ್ಮದ ಆಚರಣೆಯನ್ನು ಮುಂದುವರಿಸಿದರೆ ತನ್ನ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಇದಕ್ಕಾಗಿ ನೀವು ಇಸ್ಲಾಂಗೆ ಮತಾಂತರವಾಗಬೇಕು. ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಲು ಇರುವುದು ಇದೊಂದೇ ಮಾರ್ಗ. ನೀವು ಮತಾಂತರವಾದರೆ ನಿಮ್ಮ ಆರೋಗ್ಯ ಸುಧಾರಣೆಯಾಗಲಿದೆ ಎಂದು ಮೀನು ಅವರನ್ನು ಸರ್ಫರಾಜ್ ನಂಬಿಸಿದ್ದ ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಗಾಜಿಯಾಬಾದ್‌ನ ಮೋರ್ಟಿ ಗ್ರಾಮದ ಟ್ರೈ ಸೆಕ್ಷನ್‌ನಿಂದ ಮೌಲ್ವಿ ಸರ್ಫರಾಜ್‌ನನ್ನು ಬಂಧಿಸಲಾಗಿದೆ ಎಂದು ನಂದಗ್ರಾಮ ಎಸಿಪಿ ರವಿ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟ ಸತ್ಯ ಏನು..?

ತಾನು ಈ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ಭೂತೋಚ್ಛಾಟನೆ ಚಟುವಟಿಕೆ ನಡೆಸುತ್ತಿದ್ದು, ದೆವ್ವ ಭೂತಗಳ ಭಯವನ್ನು ಬಿತ್ತಿ, ಅನಾರೋಗ್ಯಪೀಡಿತ ಜನರು ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರುತ್ತಿದ್ದುದ್ದಾಗಿ ವಿಚಾರಣೆ ವೇಳೆ ಸರ್ಫರಾಜ್ ಪೊಲೀಸರಿಗೆ ತಿಳಿಸಿದ್ದಾನೆ. ತಾನು ಕೆಲವು ವರ್ಷಗಳ ಹಿಂದೆ ಹಜ್ ಯಾತ್ರೆ ಮುಗಿಸಿ ವಾಪಸಾಗಿದ್ದು, ಅದರ ನಂತರ ಮಾಟ ಮಂತ್ರದ ಮೂಲಕ ದೆವ್ವಗಳನ್ನು ಓಡಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ.

ಈತನ ಮೇಲೆ ಯಾವೆಲ್ಲಾ ಕೇಸುಗಳು ದಾಖಲಾಗಿದೆ…?

ಉತ್ತರ ಪ್ರದೇಶ ಅಕ್ರಮ ಧಾರ್ಮಿಕ ಮತಾಂತರದ ನಿಷೇಧ ಕಾಯ್ದೆ ಮತ್ತು ಮಾದಕವಸ್ತು ಹಾಗೂ ಮಂತ್ರ ವಿದ್ಯೆ ಪರಿಹಾರ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿ ಸರ್ಫರಾಜ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಸಿಪಿ ರವಿ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ತನಿಖೆ ಇನ್ನೂ ಮುಂದುವರೆದಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *