ಕಾಸರಗೋಡು ವ್ಯಕ್ತಿಗೆ 12 ಕೋಟಿ ರೂಪಾಯಿ ಕೇರಳ ಲಾಟರಿ – ಮಾರಿದ ದಂಪತಿಗೂ ಖುಲಾಯಿಸಿದ ಅದೃಷ್ಟ..!!

ಕಾಸರಗೋಡು ವ್ಯಕ್ತಿಗೆ 12 ಕೋಟಿ ರೂಪಾಯಿ ಕೇರಳ ಲಾಟರಿ – ಮಾರಿದ ದಂಪತಿಗೂ ಖುಲಾಯಿಸಿದ ಅದೃಷ್ಟ..!!

ನ್ಯೂಸ್ ಆ್ಯರೋ : ಮನುಷ್ಯನ ಜೀವನ ಅಂದ ಮೇಲೆ ಏಳು- ಬೀಳು ಸಹಜ. ಸಾಕಷ್ಟು ನೋವುಗಳನ್ನು ತಿಂದ, ಕಷ್ಟ ಎದುರಿಸಿದ ವ್ಯಕ್ತಿ ಎಷ್ಟೋ ಸಲ ‘ ಒಂದು ಲಾಟರಿ ಆದ್ರೂ ಹೊಡೀತ್ತಿದ್ರೆ’ ಅಂತ ಮನಸ್ಸಲ್ಲಿ ಅದೆಷ್ಟು ಬಾರಿ ಯೋಚಿಸಿರುತ್ತಾನೋ. ಆದರೆ ಅನಿರೀಕ್ಷಿತವಾಗಿ ತಾನು ತೆಗೆದ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿದರೆ ಎಷ್ಟು ಖುಷಿಯಾಗಿರಬಹುದು.‌ ಇಲ್ಲಿ ನಡೆದಿದ್ದು ಅದೇ. ಆದರೆ ಲಾಟರಿ ಟಿಕೆಟ್ ಮಾರಿದವರಿಗೂ ಮತ್ತು ಲಾಟರಿ ತೆಗೆದವರಿಗೂ ಧನಲಕ್ಷ್ಮಿ ಒಲಿದಿದ್ದೇ ಒಲಿದದ್ದು.

ಕೇರಳ ಲಾಟರಿಗೆ ಈಗಲೂ ಭಾರೀ ಬೇಡಿಕೆ. ಜನರೂ ಲಾಟರಿ ಟಿಕೆಟ್‌ ಖರೀದಿಸಿ ತಮ್ಮ ಅದೃಷ್ಠ ಪರೀಕ್ಷೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದೃಷ್ಟು ಚೆನ್ನಾಗಿದ್ದರೆ ಕೋಟಿ ಕೋಟಿ ಹಣ ಲಾಟರಿ ಹೊಡೆಯಲೂ ಬಹುದು. ಈ ಬಾರಿಯೂ ದೀಪಾವಳಿ ಅಂಗವಾಗಿ ನಡೆದ ಪೂಜಾ ಬಂಪರ್‌ ಲಾಟರಿಯಲ್ಲಿ ವ್ಯಕ್ತಿಯೊಬ್ಬರಿಗೆ 12 ಕೋಟಿ ರೂ. ಲಾಟರಿ ಬಂದಿದೆ. ಅವರು ಕಾಸರಗೋಡಿನವರು.

ಕೇರಳ ಸರ್ಕಾರದ ಲಾಟರಿ ವಿಭಾಗವು ನಡೆಸುವ ಲಾಟರಿಯನ್ನು ಪ್ರಕಟಿಸಲಾಗಿದ್ದು, ಕಾಸರಗೋಡಿನ ವ್ಯಕ್ತಿಗೆ ಬಂಪರ್‌ ಬಹುಮಾನ ಬಂದಿದೆ. ಆದರೆ ಅವರು ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಲಾಟರಿಯಲ್ಲಿ ಸಿಕ್ಕ ಹಣವೆಷ್ಟು..?

ಜೆಸಿ 253199 ಸಂಖ್ಯೆಯ ಲಾಟರಿಗೆ ಬಂಪರ್‌ ಬಹುಮಾನ ಲಭಿಸಿದೆ. ಈ ಲಾಟರಿ ಕಾಸರಗೋಡಿನಲ್ಲಿ ಮಾರಾಟವಾಗಿತ್ತು. 12 ಕೋಟಿ ರೂ. ಬಂಪರ್‌ ಲಾಟರಿಯಿದು. ತೆರಿಗೆಯೆಲ್ಲಾ ಕಡಿತಗೊಳಿಸಿ 7.56 ಕೋಟಿ ರೂ. ಹಣ ವಿಜೇತರಿಗೆ ಲಭಿಸಲಿದೆ ಎನ್ನುವುದು ಕೇರಳ ಲಾಟರಿ ವಿಭಾಗದ ಅಧಿಕಾರಿಗಳ ವಿವರಣೆ.

ಇದಲ್ಲದೇ ನಾಲ್ಕು ಟಿಕೆಟ್‌ಗಳಿಗೆ ತಲಾ ಒಂದು ಕೋಟಿ ರೂ. ಕೂಡ ಲಭಿಸಿದೆ. ಅದರಲ್ಲಿ ಜೆಡಿ 504106, ಜೆಸಿ 748835, ಜೆಸಿ 293247, and ಜೆಸಿ 781889 ಸಂಖ್ಯೆಯ ಲಾಟರಿಗಳಿಗೆ ತಲಾ ಒಂದು ಕೋಟಿ ರೂ. ಸಿಗಲಿದೆ. ಇದಲ್ಲದೇ 10 ಲಾಟರಿಗಳಿಗೆ ತಲಾ 10 ಲಕ್ಷ ರೂ. ಬಹುಮಾನ ಸಿಗಲಿದೆ. ಜೆಎ 269609, ಜೆಬಿ 117859, ಜೆಸಿ 284717, ಜೆಡಿ 239603, ಜೆಇ 765533, ಜೆಎ 538789, ಜೆಬಿ 271191, ಜೆಸಿ 542383, ಜೆಡಿ 899020, ಜೆಇ 588634 ಸಂಖ್ಯೆಯ ಲಾಟರಿಗಳು ತಲಾ 10 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿವೆ.

ದಂಪತಿಗೂ ಖುಲಾಯಿಸಿದ ಅದೃಷ್ಟ…!

ಇನ್ನು ಈ ಬಾರಿಯ ಲಾಟರಿ ಮಾರಾಟ ಮಾಡಿದ ಕಾಸರಗೋಡಿನ ಮಂಜೇಶ್ವರದ ದಂಪತಿಗೂ ಬಂಪರ್‌ ಒಲಿದಿದೆ. ಏಕೆಂದರೆ ಜೋಸೆಫ್‌ ಹಾಗೂ ಮೇರಿಕುಟ್ಟಿ ದಂಪತಿ ಮಾರಾಟ ಮಾಡಿದ ಎರಡು ಲಾಟರಿಗಳು ಬಂಪರ್‌ ಬಹುಮಾನ ಪಡೆದಿವೆ. ಅದರಲ್ಲಿ ಮೇರಿಕುಟ್ಟಿ ಮಾರಾಟ ಮಾಡಿದ ಲಾಟರಿಗೆ 12 ಕೋಟಿ ರೂ. ಬಹುಮಾನ ಲಭಿಸಿದೆ. ಪತಿ ಜೋಸೆಫ್‌ ಮಾರಿದ್ದ ಲಾಟರಿಗೆ 1 ಕೋಟಿ ರೂ. ಬಹುಮಾನ ಲಭಿಸಿದೆ. ಕೇರಳದಲ್ಲಿ ಲಾಟರಿ ಮಾರಾಟ ಮಾಡುವವರಿಗೂ ಶೇ. 10 ರಷ್ಟು ಮೊತ್ತ ನೀಡಲಾಗುತ್ತದೆ.

ಈಗ ಪತ್ನಿಗೆ 1.20 ಕೋಟಿ ರೂ. ಹಾಗೂ ಪತಿಗೆ 10 ಲಕ್ಷ ರೂ. ಹಣ ಸಿಗಲಿದೆ. ಮೂಲತಃ ಕಣ್ಣೂರಿನವರಾದರೂ ಅನಾರೋಗ್ಯದ ಕಾರಣದಿಂದ ಕಾಸರಗೋಡು ಜಿಲ್ಲೆ ಮಂಜೇಶ್ವರಕ್ಕೆ ಬಂದು ನೆಲೆಸಿದ ಮೇರಿಕುಟ್ಟಿ ಹಾಗೂ ಜೋಸೆಫ್‌ ದಂಪತಿ ಐದು ವರ್ಷದಿಂದ ಲಾಟರಿ ಟಿಕೆಟ್‌ ಮಾರಾಟ ಮಾಡಿ ಬದುಕು ನಡೆಸುತ್ತಿದ್ದಾರೆ. ಮೊದಲ ಬಾರಿಗೆ ಅವರು ಮಾರಾಟ ಮಾಡಿದ ಟಿಕೆಟ್‌ಗೆ ಬಂಪರ್‌ ಲಭಿಸಿ ದಂಪತಿಗೂ ಭಾರೀ ಮೊತ್ತ ಲಭಿಸಿದೆ.

ಕೇರಳದ ಪ್ರಮುಖ ಲಾಟರಿಗಳು ಯಾವುವು..?

ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರದ ಲಾಟರಿ ವಿಭಾಗವು ಹಲವಾರು ಬಂಪರ್‌ ಲಾಟರಿ ನಡೆಸುತ್ತದೆ. ಇದರಲ್ಲಿ ಪೂಜಾ ಬಂಪರ್‌, ಸ್ತ್ರೀಶಕ್ತಿ, ವಿನ್‌ ವಿನ್‌, ಅಕ್ಷಯಾ, ಕಾರುಣ್ಯ, ನಿರ್ಮಲ್‌ , ಕಾರುಣ್ಯ ಪ್ಲಸ್‌, ಫಿಪ್ಟಿ ಫಿಪ್ಟಿ ಪ್ರಮುಖವಾದ ಲಾಟರಿಗಳು.

ಒಟ್ಟಾರೆಯಾಗಿ ಇವರಿಗಂತೂ ಇದು ಬಯಸದೆ ಬಂದ ಭಾಗ್ಯ ಎನ್ನಬಹುದು. ಮನೆ ಬಾಗಿಲಿಗೆ ಧನಲಕ್ಷ್ಮಿ ಬಂದು ನಿಂತರೆ ಅದರಿಂದ ಸಿಗುವ ಆನಂದಕ್ಕೆ ಬೆಲೆಯೇ ಇಲ್ಲ ಬಿಡಿ..!!

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *