ರೈಲಿನಲ್ಲಿ ಅಶ್ಲೀಲ ಸನ್ನೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಡೆತ್ತಿದ ಮಹಿಳೆ – ಚಪ್ಪಲಿಯಲ್ಲೇ ಮಂಗಳಾರತಿ : ವಿಡಿಯೋ ವೀಕ್ಷಿಸಿ..!!

ರೈಲಿನಲ್ಲಿ ಅಶ್ಲೀಲ ಸನ್ನೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಡೆತ್ತಿದ ಮಹಿಳೆ – ಚಪ್ಪಲಿಯಲ್ಲೇ ಮಂಗಳಾರತಿ : ವಿಡಿಯೋ ವೀಕ್ಷಿಸಿ..!!

ನ್ಯೂಸ್ ಆ್ಯರೋ : ಮನುಷ್ಯನ ಜೀವನದಲ್ಲಿ ಆತನಿಗೆ ಮೂಲಭೂತ ಅವಶ್ಯಕತೆಗಳು ಎಂದು ಕರೆಸಿಕೊಳ್ಳುವ ಅಂಶಗಳು ಎಷ್ಟು ಮುಖ್ಯವೋ ಅದೇ ರೀತಿ ಸಂಬಂಧ, ಪ್ರೀತಿಯಲ್ಲಿ ಆಕರ್ಷಣೆ, ಕಾಮ ಎನ್ನುವಂತದ್ದು ಹುಟ್ಟುವುದೂ ಒಂದು ಸಹಜ ಕ್ರಿಯೆಯಾಗಿರುತ್ತದೆ. ಆದರೆ ಒಬ್ಬ ಹದಿಹರೆಯದ ಹುಡುಗ ಅಥವಾ ಹುಡುಗಿಯರಲ್ಲಿ ಇಂತಹ ಆಕರ್ಷಣೆ, ಪ್ರೀತಿ ಮಾತು, ಕಣ್ಣೋಟ ಇವುಗಳನ್ನೆಲ್ಲವನ್ನು ನಾವು ಆಗಾಗ ನೋಡುತ್ತಿರುತ್ತೇವೆ. ‌ಅದು ಸಹಜ ಕೂಡಾ…!!

ಆದರೆ ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣಿಸುವ ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಕೂಡಾ ಕೆಲವೊಮ್ಮೆ ಕೆಟ್ಟ ಅನುಭವಗಳು ಆಗುತ್ತಿರುತ್ತದೆ. ಎಷ್ಟೋ ಬಾರಿ ಕೆಲವು ಹುಡುಗಿಯರು ಮರ್ಯಾದೆಗೆ ಹೆದರಿ ಸುಮ್ಮನಿದ್ದರೆ ಇನ್ನೂ ಕೆಲವರು ಅಲ್ಲೇ ರಣಚಂಡಿಯಾಗಿ ಬಿಡುತ್ತಾರೆ. ಅಂತಹುದೇ ಘಟನೆ ಇಲ್ಲಿಯೂ ನಡೆದಿದೆ ನೋಡಿ. ಈ ಚಪಲ ಚೆನ್ನಿಗರಾಯನ ಚಪಲವನ್ನು ಮಹಿಳೆ ಬಿಡಿಸಿದ್ದು ಹೇಗೆ ಗೊತ್ತಾ..?

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಟ್ರೈನ್ ನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಹೊಡೆಯುತ್ತಿದ್ದಾಳೆ. ಈ ವಿಡಿಯೋದಲ್ಲಿ ಇತರ ಜನರು ಕೂಡ ಕಾಣಿಸಿಕೊಂಡಿದ್ದು, ಅವರು ಈ ಘಟನೆಯ ಮೊಬೈಲ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯಿಂದ ಚಪ್ಪಲಿ ಏಟು ತಿನ್ನುತ್ತಿದ್ದ ವ್ಯಕ್ತಿ ಮಹಿಳೆಯತ್ತ ನೋಡುತ್ತಾ ಅಶ್ಲೀಲ ಸನ್ನೆಗಳನ್ನು ಮಾಡುವಲ್ಲಿ ನಿರತವಾಗಿದ್ದ ಎನ್ನಲಾಗಿದೆ.

ವೈರಲ್ ವೀಡಿಯೋದಲ್ಲಿ ಏನಿದೆ..?

ಈ ಘಟನೆ ಎಲ್ಲಿ ನಡೆದಿದೆ ಮತ್ತು ಈ ವಿಡಿಯೋ ಯಾವಾಗ ಚಿತ್ರೀಸಲಾಗಿದೆ ಎಂಬುದರ ಮಾಹಿತಿ ತಿಳಿದುಬಂದಿಲ್ಲ. ಆದರೆ, ವಿಡಿಯೋದಲ್ಲಿ ಏಟು ತಿನ್ನುತ್ತಿರುವ ವ್ಯಕ್ತಿ ಮಹಿಳೆಯತ್ತ ನೋಡಿ ಅಶ್ಲೀಲ ಸಂಕೇತಗಳನ್ನು ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಮಹಿಳೆ ಆತನಿಗೆ ಪಾಠ ಕಲಿಸಲು ಚಪ್ಪಲಿಯಿಂದ ಹೊಡೆದಿದ್ದಾಳೆ. ಸಾಮಾಜಿಕ ವೇದಿಕೆ X ನಲ್ಲಿ @gharkekalesh ಹೆಸರಿನ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಹಿಳೆ ತನ್ನ ಚಪ್ಪಲಿಯಿಂದ ವ್ಯಕ್ತಿಗೆ ಮಂಗಳಾರತಿ ಎತ್ತಿದ್ದಾಳೆ.

ವೀಡಿಯೋ ನೋಡಿದ ನೆಟ್ಟಿಗರ ಅಭಿಪ್ರಾಯವೇನು..?

ವಿಡಿಯೋ ವೀಕ್ಷಿಸಿದ ಬಹುತೇಕ ಜನರು ಕೈಗೊಂಡ ಕ್ರಮವನ್ನು ಪ್ರಶಂಸಿಸುತ್ತಿದ್ದಾರೆ ಮತ್ತು ಇಂತಹ ವ್ಯಕ್ತಿಗೆ ಇದೇ ರೀತಿ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಓರ್ವ ‘X’ ಬಳಕೆದಾರ ‘ಮಹಿಳೆ ತುಂಬಾ ಫ್ರಸ್ಟ್ರೇಟ್ ಆಗಿದ್ದಾಳೆ ಎಂಬಂತೆ ತೋರುತ್ತಿದೆ, ಇದರಲ್ಲಿ ಕಥೆಯ ಒಂದು ಭಾಗ ಮಾತ್ರ ತೋರಿಸಲಾಗಿದೆ’ ಎಂದಿದ್ದಾನೆ.

ವಿಡಿಯೋಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಬಳಕೆದಾರ ‘ಈ ವಿಡಿಯೋದಲ್ಲಿ ಮಹಿಳೆ ವ್ಯಕ್ತಿಯ ಪ್ಯಾಂಟ್ ಜೀಪ್ ತೆರೆದಿದೆ ಎಂದು ಹೇಳುತ್ತಿದ್ದಾಳೆ. ಆತ ಜೀಪ್ ಹಾಕಲು ಮರೆತಿರಬಹುದು ಮತ್ತು ಜೀಪ್ ಹಾಕಲು ಮುಂದಾದಾಗ ಮಹಿಳೆ ಅದನ್ನು ನೋಡಿರಬಹುದು’ ಎಂದಿದ್ದಾನೆ. ಈ ವಿಡಿಯೋ ಕುರಿತು ಬರೆದುಕೊಂಡ ಮೂರನೇ ಬಳಕೆದಾರ ‘ಯಾವುದೇ ಓರ್ವ ಪುರುಷ ಈ ರೀತಿ ತಪ್ಪು ಮಾಡಿದರೆ, ಮಹಿಳೆ ಇದೇ ರೀತಿ ಹೊಡೆಯುತ್ತಾಳೆ ಮತ್ತು ಜನ ನೋಡುತ್ತಾ ನಿಲ್ಲುತ್ತಾರೆ. ಒಂದು ವೇಳೆ ಮಹಿಳೆ ತಪ್ಪು ಮಾಡಿದರೆ ಆಕೆಗೂ ಇದೇ ರೀತಿ ಹೊಡೆಯಬೇಕೆ?’ ಎಂದಿದ್ದಾನೆ.

ನಾಲ್ಕನೇ ಬಳಕೆದಾರ, ‘ಎಲ್ಲೋ ಹೊರಹಾಕಬೇಕಿದ್ದ ಸಿಟ್ಟು ಮಹಿಳೆ ಇಲ್ಲಿ ಹೊರಹಾಕಿದ್ದಾಳೆ ಎಂದು ನನಗೇಕೆ ಅನ್ನಿಸುತ್ತಿದೆ?’ ಎಂದು ಪ್ರಷ್ಟಿಸಿದ್ದಾನೆ. ಐದನೇ ಬಳಕೆದಾರ ‘ಈ ವಿಡಿಯೋವನ್ನು ದೇಶದ ಎಲ್ಲಾ ಪುರುಷರಿಗೆ ತೋರಿಸಬೇಕು’ ಎಂದಿದ್ದಾನೆ.

ಒಟ್ಟಾರೆಯಾಗಿ ಈ ವೀಡಿಯೋ ನೋಡಿದ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ಆತ ಕಾಮದ ತೃಷೆಯಿಂದ ಅನುಚಿತವಾಗಿ ವರ್ತಿಸಿದ್ದಾನೆಂದರೆ ಮಹಿಳೆಯ ಕಾರ್ಯವನ್ನು ನಿಜವಾಗಿಯೂ ಶ್ಲಾಘಿಸಲೇಬೇಕು

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *