
Spicy Chicken Roast Recipe : ಸ್ಪೈಸಿ ಚಿಕನ್ ರೋಸ್ಟ್ ಒಮ್ಮೆಯಾದ್ರೂ ಟೇಸ್ಟ್ ಮಾಡಿದ್ದೀರಾ? – ಮನೆಯಲ್ಲೇ ಮಾಡೋ ವಿಧಾನ ಇಲ್ಲಿದೆ ನೋಡಿ..
- ನಳಪಾಕ
- September 4, 2023
- No Comment
- 79
ನ್ಯೂಸ್ ಆ್ಯರೋ : ಭಾನುವಾರ ಬಂತು ಅಂದರೆ, ನಾನ್ ವೆಜ್ ಪ್ರಿಯರಿಗೆ ಹಬ್ಬ. ರಜೆ ದಿನ ಬೆಳ್ಳಂಬೆಳ್ಳಗೆ ಮಾಂಸದಂಗಡಿ ಮುಂದೆ ಕ್ಯೂ ನಿಂತು, ಬಿರಿಯಾನಿ ಕನಸು ಕಾಣುವುದು ಕಾಮನ್. ಮಾಂಸಾಹಾರಿಗಳಿಗೆ ತಮಗಿಷ್ಟವಾದ ಊಟ ತಿನ್ನಲು ವಾರದ ಮಿತಿ ಇಲ್ಲದಿದ್ದರೂ ವೀಕೆಂಡ್ನಲ್ಲಿ ತಮ್ಮ ಪ್ರೀತಿಪಾತ್ರರೊಂದಿಗೆ ಕುಳಿತು ವೆರೈಟಿ ಅಡುಗೆ ಮಾಡಿ ತಿಂದರೆ ಅದರ ಮಜಾನಾ ಬೇರೆ. ಹೀಗಾಗಿ ಹೆಚ್ಚಿನ ಜನರು ಭಾನುವಾರದ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ನೆಚ್ಚಿನ ಹೋಟೆಲ್ಗಳಿಗೆ ಹೋಗಿ ವೆರೈಟಿ ವೆರೈಟಿ ಬಾಡೂಟ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರು ಮಾತ್ರ ಮನೆಯಲ್ಲಿಯೇ ಕುಳಿತು ರುಚಿರುಚಿಯಾಗಿ ವಿಭಿನ್ನವಾದ ಅಡುಗೆ ಗಳನ್ನು ತಯಾರಿಸಿ ತಮ್ಮ ಕುಟುಂಬದವರಿಗೂ ತಿನ್ನಿಸಿ ತಾವು ತಿಂದು ತಮ್ಮ ಭಾನುವಾರವನ್ನು ಮತ್ತಷ್ಟು ವಿಭಿನ್ನವಾಗಿಯೇ ಕಳೆಯಲು ಇಷ್ಟಪಡುತ್ತಾರೆ..
ಹೀಗಾಗಿ ನಾವು ಇಂದು ಮನೆಯಲ್ಲಿ ಚಿಕನ್ ರೋಸ್ಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಬೇಕಾಗುವ ಸಾಮಗ್ರಿಗಳು:
- ಚಿಕನ್ – 1ಕೆಜಿ
- ಮೆಣಸಿನ ಪುಡಿ – 1 ಟೀ ಸ್ಪೂನ್
- ಗರಂ ಮಸಾಲ – 1 ಟೀ ಸ್ಪೂನ್
- ಅರಿಶಿಣ – 2 ಟೀ ಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಅಡುಗೆ ಎಣ್ಣೆ- 1 ಕಪ್
ಮಾಡುವ ವಿಧಾನ:
- ಕ್ಲೀನ್ ಆಗಿ ತೊಳೆದ ಚಿಕನ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಮೆಣಸಿನಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಮತ್ತು ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದು ಗಂಟೆ ನೆನೆಸಿಡಿ.
- ಒಂದು ಗಂಟೆಯ ನಂತರ ಪ್ಯಾನ್‍ಗೆಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದಾಗ ನೆನೆಸಿದ ಚಿಕನ್ ಅನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಪ್ರೈ ಮಾಡಬೇಕು.
- ಚಿಕನ್ ಎಣ್ಣೆಯಲ್ಲೆ ಸಂಪೂರ್ಣವಾಗಿ ಬೇಯಬೇಕು, ನೀರನ್ನು ಹಾಕುವಂತಿಲ್ಲ.
- ಚಿಕನ್ ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ 5 ನಿಮಿಷ ಬಿಡಿ.
- ಈಗ ರುಚಿಯಾದ ಚಿಕನ್ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ.