Mutton leg Soup Recipe : ಸಿಂಪಲ್ ಆಗಿ ಟೇಸ್ಟಿ ಕಾಲು ಸೂಪ್ ಮಾಡಿ – 2 ರೀತಿಯ ವಿಧಾನ ನಾವು ಹೇಳಿಕೊಡ್ತೇವೆ..!!

Mutton leg Soup Recipe : ಸಿಂಪಲ್ ಆಗಿ ಟೇಸ್ಟಿ ಕಾಲು ಸೂಪ್ ಮಾಡಿ – 2 ರೀತಿಯ ವಿಧಾನ ನಾವು ಹೇಳಿಕೊಡ್ತೇವೆ..!!

ನ್ಯೂಸ್ ಆ್ಯರೋ : ಭಾನುವಾರ ಬಂತು ಅಂದ್ರೆ ಅದೆಷ್ಟೂ ಮಂದಿಗೆ ಮೊದಲು ನೆನಪಾಗುವುದೇ ನಾನ್ವೆಜ್. ನಾನ್ವೆಜ್ ಸವಿಯುವ ಸಲುವಾಗಿ ಸಂಡೇ ಬರುವುದನ್ನೇ ಜನ ಕಾದು ಕುಳಿತಿರುತ್ತಾರೆ. ಹಾಗಂತ ಬೇರೆ ದಿನಗಳಲ್ಲಿ ನಾನ್ ವೆಜ್ ತಿನ್ನಲು ಆಗುವುದಿಲ್ಲ ಎಂದರ್ಥವಲ್ಲ. ಯಾವ ದಿನ ನಾನ್ ವೆಜ್ ತಿಂದರೂ ಭಾನುವಾರ ತಿನ್ನುವುದೇ ಒಂದು ರೀತಿ ವಿಶೇಷ. ಏಕೆಂದರೆ ಭಾನುವಾರ ಸಾಮಾನ್ಯವಾಗಿ ಎಲ್ಲರಿಗೂ ಶಾಲೆ, ಕಚೇರಿ ಎಲ್ಲವೂ ಕೂಡ ರಜೆ ಇರುತ್ತದೆ. ಈ ಸಮಯದಲ್ಲಿ ಮನೆಯವರೆಲ್ಲಾ ಒಟ್ಟಿಗೆ ಸೇರುತ್ತಾರೆ. ಹಾಗಾಗಿ ಮನೆಯಲ್ಲಿ ನಾನ್ವೆಜ್ ಮಾಡಿ ಎಲ್ಲರೂ ಒಟ್ಟಾಗಿ ಕುಳಿತು ತಿನ್ನುವುದೇ ಒಂದು ರೀತಿ ಆನಂದ.

ಪ್ರತಿ ಭಾನುವಾರದಂತೆ ಈ ಸಂಡೇ ಏನಪ್ಪಾ ಮಾಡುವುದು ಅಂತ ಯೋಚಿಸ್ತಿದ್ರೆ ಕಾಲು ಸೂಪ್ ಟ್ರೈ ಮಾಡಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಕೀಲುಗಳ ಬೆಳವಣಿಗೆಗೆ ಸಹಕಾರಿಯಾದ ಹೀಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಟನ್‌ ಕಾಲು ಸೂಪು ವಾರಕ್ಕೊಮ್ಮೆ ಸೇವಿಸುವುದು ಉತ್ತಮ. ಚೆನ್ನಾಗಿ ಬೆಂದ ಕುರಿಯ ಕಾಲಿನಿಂದ ಬರುವ ಅಂಶಗಳು ಆರೋಗ್ಯಕ್ಕೆ ಅತ್ಯುತ್ತಮ ಮದ್ದಿನ ಮೂಲವಾಗಿದೆ. ಅಲ್ಲದೇ ಇದನ್ನು ಬಾಣಂತಿಯರಿಗೆ ಹಾಗೂ ಮೊದಲ ಬಾರಿ ಋತುಮತಿಯಾದವರಿಗೆ, ಮಕ್ಕಳಿಗೆ, ವೃದ್ಧರಿಗೆ ಎಲ್ಲರಿಗೂ ಕೂಡ ಆರೋಗ್ಯಕ್ಕೆ ಒಳ್ಳೆಯದು.

ಮಟನ್ ಕಾಲು ಸೂಪ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು

  • 2 – ಮೇಕೆ ಕಾಲು
  • ಮೀಡಿಯಂ ಸೈಜ್ ಈರುಳ್ಳಿ
  • 2-3 ಎಸಳು ಬೆಳ್ಳುಳ್ಳಿ
  • ಸ್ವಲ್ಪ ಶುಂಠಿ
  • ಸ್ವಲ್ಪ ಚಕ್ಕೆ
  • 2-3 ಲವಂಗ
  • ½ ಚಮಚ ದನಿಯಾ ಪುಡಿ
  • ಖಾರಕ್ಕೆ ಬೇಕಾದಷ್ಟು ಕೆಂಪು ಮೆಣಸಿನಕಾಯಿ
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ರುಚಿಗೆ ತಕ್ಕಷ್ಟು ಉಪ್ಪು
  • 2 ಚಮಚ ಎಣ್ಣೆ
  • ಚಿಟಿಕೆ ಅರಿಶಿಣ

ಮಟನ್ ಕಾಲು ಸೂಪ್ ಮಾಡುವ ವಿಧಾನ

ಮೊದಲಿಗೆ ಅಂಗಡಿಯಿಂದ ಸುಟ್ಟಿರುವ ಕಾಲನ್ನು ತಂದು ಚೆನ್ನಾಗಿ 2 ರಿಂದ 3 ಬಾರಿ ಶುದ್ಧ ನೀರಿನಲ್ಲಿ ತೊಳೆಯಬೇಕು.

ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.

ಅದು ತಣ್ಣಗಾದ ಬಳಿಕ ಒಂದು ಮಿಕ್ಸರ್ ಜಾರ್‍ಗೆ ಹಾಕಿ ಫ್ರೈ ಮಾಡಿದ ಪದಾರ್ಥಗಳ ಜೊತೆಗೆ ಧನಿಯಾ, ಅರಿಶಿಣ ಪುಡಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಒಂದು ಕುಕ್ಕರ್ ಬಿಸಿಗಿಟ್ಟು, ಎಣ್ಣೆ ಹಾಕಿ ಬಿಸಿಯಾದ ಮೇಲೆ ತೊಳೆದ ಕಾಲುಗಳನ್ನು ಹಾಕಿ. 2 ನಿಮಿಷ ಚೆನ್ನಾಗಿ ಫ್ರೈ ಮಾಡಿ.

ಅದರೊಂದಿಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಉಪ್ಪು ಸೇರಿಸಿ, ಜಾಸ್ತಿ ನೀರು ಹಾಕಿ 5-6 ಕೂಗು ಕೂಗಿಸಿ.

ಸೂಪ್ ನೀರಿನಂತೆ ಇದ್ದರೆ ಕುಡಿಯಲು ಚೆನ್ನಾಗಿರುತ್ತದೆ. ಹೀಗಾಗಿ ಜಾಸ್ತಿ ನೀರು ಹಾಕಿ ಚೆನ್ನಾಗಿ ಕೂಗಿಸಬೇಕು.

ಕುಕ್ಕರ್ ಪ್ರೆಶರ್ ಇಳಿದ ಮೇಲೆ ಕಾಲನ್ನು ಬೇರ್ಪಡಿಸಿ, ಸೂಪನ್ನು ಪ್ರತ್ಯೇಕಿಸಿ. ಸರ್ವ್ ಮಾಡುವಾಗ ಸೂಪ್‍ಗೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ. ಕುಡಿಯಲು ಚೆನ್ನಾಗಿರುತ್ತದೆ.

ಸೂಪ್‍ನೊಂದಿಗೆ ಕಾಲನ್ನು ಸೇವಿಸಬಹುದು ಅಥವಾ ಅದೇ ಕಾಲನ್ನು ಮೇಲೆ ತಿಳಿಸಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಾರು ಮಾಡಿಕೊಂಡು ಸೇವಿಸಬಹುದು.

ಇಷ್ಟೇ ಅಲ್ಲದೇ ಕಾಲು ಸೂಪ್ ಅನ್ನು ಮತ್ತೊಂದು ವಿಧಾನದಲ್ಲಿ ಕೂಡ ನೀವು ತಯಾರಿಸಬಹುದು. ಕಾಲು ಸೂಪಿಗೆ ಮಸಾಲೆ ಇಲ್ಲದೆಯೂ ಸೂಪನ್ನು ತಯಾರಿಸಬಹುದು.

ಕುಕ್ಕರ್ ಬಿಸಿಗಿಟ್ಟು ಚೆನ್ನಾಗಿ ತೊಳೆದ ಕಾಲು, ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5-6 ಕೂಗು ಕೂಗಿಸಿ. ಆದಾದ ಬಳಿಕ ಸೂಪಿಗೆ ಕಾಳು ಮೆಣಸಿನ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸಹ ಕುಡಿಯಬಹುದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *