ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ; ಮೂರು ಸಾವು !
ಮಹಾರಾಷ್ಟ್ರ: ಪುಣೆಯ ಬವ್ಧಾನ್ ಬುದ್ರುಕ್ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಅಪಘಾತದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ ಬಿದ್ದ ವಿಚಾರ ಗೊತ್ತಾಗುತ್ತಿದ್ದಂತೆಯೇ ಗ್ರಾಮಸ್ಥರು ಹಿಂಜೆವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಮತ್ತು ವೈದ್ಯಕೀಯ ತಂಡ ಅಲ್ಲಿಗೆ ಆಗಮಿಸಿದೆ. ಆಕ್ಸ್‌ಫರ್ಡ್ ಗಾಲ್ಫ್ ಕ್ಲಬ್‌ನ ಹೆಲಿಪ್ಯಾಡ್‌ನಿಂದ ಟೇಕಾಫ್ ಆದ ಕೂಡಲೇ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ.
ಬೆಳಗ್ಗೆ 7:00 ರಿಂದ 7:10 ರ ನಡುವೆ ದುರ್ಘಟನೆ ಸಂಭವಿಸಿದೆ. ದಟ್ಟವಾದ ಮಂಜಿನಿಂದಾಗಿ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ.
ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದಿಂದಾಗಿ ಹೆಲಿಕಾಪ್ಟರ್‌ಗೆ ತೀವ್ರ ಹಾನಿಯಾಗಿದೆ. ಪತನಗೊಂಡ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಪೈಲಟ್ ಆನಂದ್ ಟೇಕ್ ಆಫ್ ಮಾಡಿದ್ದರು.
Leave a Comment