ಅ. 3 ರಿಂದ 10ರವರೆಗೆ ಹೈಕೋರ್ಟ್ ಗೆ ದಸರಾ ರಜೆ

high court holiday
Spread the love

ಬೆಂಗಳೂರು:ರಾಜ್ಯ ಹೈಕೋರ್ಟ್ ಗೆ ಅಕ್ಟೋಬರ್ 3ರಿಂದ 10ರವರೆಗೆ ದಸರಾ ರಜೆ ಇರಲಿದೆ. ಅ. 2ರಂದು ಗಾಂಧಿ ಜಯಂತಿ, ಅ. 11ರಂದು ಆಯುಧಪೂಜೆ, ಅ. 12ರಂದು ವಿಜಯದಶಮಿ, ಎರಡನೇ ಶನಿವಾರ, ಅ. 13 ಭಾನುವಾರ ರಜೆ ಇರುವುದರಿಂದ ಅಕ್ಟೋಬರ್ 14 ರಿಂದ ಕೋರ್ಟ್ ಕಲಾಪಗಳು ಪುನರಾರಂಭ ಆಗಲಿವೆ.

ಬೆಂಗಳೂರಿನ ಹೈಕೋರ್ಟ್ ಪ್ರಧಾನಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ದಸರಾ ರಜೆ ಅನ್ವಯವಾಗಲಿದೆ. ತುರ್ತು ಪ್ರಕರಣಗಳ ವಿಚಾರಣೆಗೆ ಅ. 4 ಮತ್ತು 9ರಂದು ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳಲ್ಲಿ ತಲಾ ಒಂದು ವಿಭಾಗೀಯ ನ್ಯಾಯಪೀಠ ಹಾಗೂ ಎರಡು ಏಕಸದಸ್ಯ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿದ್ದು, ಕಲಾಪ ನಡೆಯಲಿದೆ.

Leave a Comment

Leave a Reply

Your email address will not be published. Required fields are marked *