ಹೇಮಾ ಸಮಿತಿ ವರದಿ ಕುರಿತು ಮಾತನಾಡಿದ್ದೇ ಮುಳುವಾಯ್ತು; ನಟಿಗೆ ನಿಷೇಧ ಹೇರಿದ ಚಿತ್ರರಂಗ

Producer Sandra Thomas
Spread the love

ನ್ಯೂಸ್ ಆ್ಯರೋ: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹೇಮಾ ವರದಿಯ ಬಳಿಕ ಸಾಕಷ್ಟು ಮಂದಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ದೊಡ್ಡ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕರ ತಲೆದಂಡವಾಗಿತ್ತು. ಇದೀಗ ಹೇಮಾ ಕಮಿಟಿ ವರದಿ ಬಳಿಕ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಿದ್ದ ನಟಿಯೊಬ್ಬಾಕೆಯ ಮೇಲೆ ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘ ನಿಷೇಧ ಹೇರಿದೆ.

Sandra Thomas

ಹೇಮಾ ಕಮಿಟಿ ವರದಿ ಬಿಡುಗಡೆ ಆದ ಬಳಿಕ ಆ ಬಗ್ಗೆ ಮಾತನಾಡಿದ್ದ ನಟಿ ಸಂದ್ರಾ ಥಾಮಸ್ ಅವರಿಗೆ ಮಲಯಾಳ ಚಿತ್ರರಂಗದ ನಿರ್ಮಾಪಕರ ಸಂಘ ನಿಷೇಧ ಹೇರಿದೆ. ಕೇರಳ ಫಿಲ್ಮ್ಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಹಾಗೂ ಇತರೆ ಕೆಲವು ಮಲಯಾಳಂ ಚಿತ್ರರಂಗದ ಸಂಘ-ಸಂಸ್ಥೆಗಳ ಬಗ್ಗೆ ಖಾರವಾಗಿ ಮಾತನಾಡಿದ್ದರು, ಈ ಸಂಘ ಸಂಸ್ಥೆಗಳು ಹೇಮಾ ಕಮಿಟಿ ವರದಿ ಕುರಿತಾಗಿ ಏಕೆ ಮೌನವಾಗಿವೆ, ಸಂಘದ ಸದಸ್ಯರ ಮೇಲೆ ಆರೋಪ ಬಂದಾಗಲೂ ಸಹ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಇದೇ ಕಾರಣಕ್ಕೆ ಈಗ ನಟಿಯ ಮೇಲೆ ಮಲಯಾಳಂ ನಿರ್ಮಾಪಕರ ಸಂಘ ನಿಷೇಧ ಹೇರಿದೆ.

ಅಕ್ಟೋಬರ್ 28ರಂದು ಸಭೆ ನಡೆಸಿದ್ದ ನಿರ್ಮಾಪಕರ ಸಂಘದ ಪದಾಧಿಕಾರಿಗಳು ನಟಿ ಸಂದ್ರಾ ಥಾಮಸ್​ಗೆ ಷೋಕಾಸ್ ನೊಟೀಸ್ ನೀಡಿದ್ದರು. ಈಗ ನಿರ್ಮಾಪಕರ ಸಂಘದ ಕಾರ್ಯದರ್ಶಿ ರಾಜೇಶ್ ಎಂಬುವರು, ‘ಸಂಘದಿಂದ ಸಂದ್ರಾ ಥಾಮಸ್​ ಅವರಿಗೆ ನಿಷೇಧ ಹೇರುತ್ತಿರುವುದಾಗಿ, ಮುಂದಿನ ದಿನಗಳಲ್ಲಿ ಅವರೊಂದಿಗೆ ಯಾವುದೇ ನಿರ್ಮಾಣ ಸಂಸ್ಥೆ ಕೆಲಸ ಮಾಡುವುದಿಲ್ಲ’ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂದ್ರಾ ಥಾಮಸ್, ‘ಸಂಘ ನೀಡಿದ್ದ ಷೋಕಾಸ್ ನೊಟೀಸ್​ಗೆ ಸೂಕ್ತ ಪ್ರತ್ಯುತ್ತರ ನೀಡಿದ ಬಳಿಕವೂ ಸಹ ನನ್ನನ್ನು ತೆಗೆದು ಹಾಕಿದ್ದಾರೆ. ನನ್ನ ಮೇಲೆ ನಿಷೇಧ ಹೇರುವ ಮೂಲಕ ಮಹಿಳೆಯ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ’ ಎಂದಿದ್ದಾರೆ. ಸಂದ್ರಾ ಥಾಮಸ್ 1991 ರಿಂದಲೂ ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿರುವ ಜೊತೆಗೆ ಕೆಲ ಸಿನಿಮಾಗಳ ನಿರ್ಮಾಣವನ್ನೂ ಸಹ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!