News Arrow IMPACT : ಪರ್ಕಳದ ದುರ್ಗಾನಗರ ಕೆರೆ ನಾಲ್ಕನೇ ಬಾರಿ ಕುಸಿತ, ಉಡುಪಿ ಜಿಲ್ಲಾಧಿಕಾರಿ ದಿಢೀರ್ ಭೇಟಿ – 60 ಲಕ್ಷ ಕಾಮಗಾರಿಯ ಅಕ್ರಮದ ಬಗ್ಗೆ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು..!!
ನ್ಯೂಸ್ ಆ್ಯರೋ : ಉಡುಪಿ ಜಿಲ್ಲೆಯ ಪರ್ಕಳದ ದುರ್ಗಾ ನಗರದಲ್ಲಿರುವ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆಯಲ್ಲಿ ನಿರ್ಮಾಣವಾಗುತ್ತಿರುವ ಕೆರೆ ಈ ಬಾರಿಯೂ ಮೊದಲ ಮಳೆಗೇ ಕುಸಿದಿದ್ದು, ಘಟನೆಯ ಬಳಿಕ ಉಡುಪಿಯ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯಿಂದ ಬಹುಕೋಟಿ ಅನುದಾನದಿಂದ ನಿರ್ಮಾಣವಾದ ಕೆರೆದಂಡೆ ನಾಲ್ಕನೇ ಬಾರಿಯೂ ಕುಸಿಯುತ್ತಿರುವುದು ಅವೈಜ್ಞಾನಿಕವಾದ ವಿನ್ಯಾಸ ಹಾಗೂ ಕಾಮಗಾರಿಯ ಗುಣಮಟ್ಟ ಕಳಪೆ ಆದ ಬಗ್ಗೆ ನಾಗರಿಕರಲ್ಲಿ ಸಂಶಯ ಮೂಡಿಸುತ್ತಿದೆ ಎಂದು ನಿಮ್ಮ ನ್ಯೂಸ್ ಆ್ಯರೋ ಜಾಗೃತಿ ಮೂಡಿಸಿ ಕಳೆದ ಮಂಗಳವಾರ ವರದಿ ಪ್ರಸಾರ ಮಾಡಿತ್ತು.
ಮಳೆ ನೀರು ಹರಿದು ಹೋಗಲು ಸರಿಯಾದ ತೋಡುಗಳನ್ನು ಕೆರೆಯ ಅಕ್ಕಪಕ್ಕದಲ್ಲಿ ನಿರ್ಮಾಣ ಮಾಡದೇ ಇರುವುದು ಮತ್ತು ಈ ಬಾರಿ ಕೆರೆಯ ಪಕ್ಕದಲ್ಲಿ ಯಥೇಚ್ಛವಾಗಿ ಸುತ್ತಲ ಶೇಡಿಮಣ್ಣನ್ನು ತೆಗೆದಿರುವುದು ಹಾಗೂ ಬೆಲೆಬಾಳುವ ಮರಗಳನ್ನು ಅಲ್ಲಿಂದ ತೆರವು ಮಾಡಿಸಿರುವುದು ಕೆರೆ ದಂಡೆಯ ಸವೆತಕ್ಕೆ ಮುಖ್ಯ ಕಾರಣವೂ ಆಗಿರಬಹುದು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಕೆರೆಯ ಸುತ್ತಮುತ್ತ ಗುಣಮಟ್ಟದ ಕಾಮಗಾರಿ ನಡೆಸದೇ ಇರುವುದು ಕೂಡ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ರೀತಿಯ ಕಾಮಗಾರಿ ನಡೆಸಿರುವುದನ್ನು ಸ್ಥಳೀಯರೇ ಈ ವೇಳೆ ಜಿಲ್ಲಾಧಿಕಾರಿಯವರಿಗೆ ಮನವರಿಕೆಯನ್ನೂ ಮಾಡಿಸಿದ್ದಾರೆ. ಕೆರೆಯ ದಂಡೆ ಕುಸಿಯಲು, ಸುತ್ತಮುತ್ತಲ ಬೆಲೆ ಬಾಳುವ ಮರ ಹಾಗೂ ಪಕ್ಕದಲ್ಲಿರುವ ಮಣ್ಣು ಅಗೆದು ಬೇರಡೆ ಸಾಗಾಟ ಮಾಡಿರುವುದೇ ಮೂಲ ಕಾರಣವಾಗಿದೆ. ಅಲ್ಲದೇ ಅದರ ಜೊತೆಗೆ ಕೆರೆವಿನ್ಯಾಸದಲ್ಲಿ ವ್ಯತ್ಯಾಸ, ಮತ್ತು ಗುಣಮಟ್ಟದ ಕಾಮಗಾರಿ ನಡೆಸದೇ ಇರುವುದು ಕಂಡುಬಂದಿದೆ.
ಈ ರೀತಿಯ ಕಾಮಗಾರಿಯಿಂದ ಪದೇ ಪದೇ ಕೆರೆದಂಡೆ ಬೀಳುತ್ತಿರುವುದು ಕೆರೆದಂಡೆಯ ಕಾಮಗಾರಿ ಉತ್ತಮ ಗುಣಮಟ್ಟದಲ್ಲ ಎಂದು ಸ್ಥಳೀಯರು ಕೆರೆ ಸಮೀಪ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಮನಮುಟ್ಟುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆ ಇದ್ದರು.
ಇದನ್ನೂ ಓದಿ
Udupi : ಉದ್ಘಾಟನೆಗೂ ಮುನ್ನವೇ ಕುಸಿದ ಪರ್ಕಳದ ದುರ್ಗಾನಗರ ಕೆರೆ – 60 ಲಕ್ಷ ಕಾಮಗಾರಿಯ ಹಿಂದೆ ಅಕ್ರಮದ ಘಾಟು..!!
Leave a Comment