Udupi : ಉದ್ಘಾಟನೆಗೂ ಮುನ್ನವೇ ಕುಸಿದ ಪರ್ಕಳದ ದುರ್ಗಾನಗರ ಕೆರೆ – 60 ಲಕ್ಷ ಕಾಮಗಾರಿಯ ಹಿಂದೆ ಅಕ್ರಮದ ಘಾಟು..!!

20240625 164232
Spread the love

ನ್ಯೂಸ್ ಆ್ಯರೋ : ಉಡುಪಿ ನಗರಸಭೆ ಮತ್ತು ಉಡುಪಿ ಕೆರೆ ಅಭಿವೃದ್ಧಿಯ ಪ್ರಾಧಿಕಾರದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಅನುದಾನದಲ್ಲಿ ಸುಮಾರು ಅಂದಾಜು 60 ಲಕ್ಷ ವೆಚ್ಚದಲ್ಲಿ ಪರ್ಕಳದ ದುರ್ಗಾ ನಗರದಲ್ಲಿ ನೂತನವಾಗಿ ರಚಿಸಲಾದ ಕೆರೆ ಉದ್ಘಾಟನೆಯಾಗುವ ಮುನ್ನವೇ ಕುಸಿದಿದೆ.

ಈ ಕೆರೆ ಮಣ್ಣುಅಗೆಯುವಾಗ ತ್ರಿಶೂಲ ಇರುವ ಕಲ್ಲು ಹಾಗೂ ಅಭಿಶೇಕ ನಡೆದ ತೀರ್ಥ ಹರಿದು ಹೋಗುವ ಕಲ್ಲಿನ ಕೊಂಡಿ ಸಿಕ್ಕಿದ್ದು, ನಾಥ ಪಂಥಕ್ಕೆ ಸೇರಿದ ವಸ್ತುಗಳಾಗಿವೆ ಎಂಬುದು ತಜ್ಞರ ಮಾತು. ಈ ವಸ್ತುಗಳು 12ನೇ ಶತಮಾನಕ್ಕೆ ಸೇರಿರುತ್ತದೆ ಎಂದು ತಿಳಿದುಬಂದಿದೆ.

ಇದೀಗ ಒಂದು ತಿಂಗಳ ಹಿಂದೆ ಈ ಕೆರೆ ಪೂರ್ಣಗೊಂಡಿದೆ. ಉದ್ಘಾಟನೆಯಾಗುವ ಮೊದಲೇ ಕೆರೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಕೊರತೆಯೇ ಎಂದು ಪರೀಕ್ಷಿಸಬೇಕಾಗಿದೆ..

ಪರ್ಕಳದ ಸುತ್ತಮುತ್ತ ಬೇರೆ ಬೇರೆ ಇಲಾಖೆಯ ಅನುದಾನದಿಂದ ಕೆರೆಯ ಅಭಿವೃದ್ಧಿ ಆಗಿದೆ. ಆದರೆ ಮತ್ತೆ ಮತ್ತೆ ಕುಸಿಯುತ್ತಿರುವುದು ಹೇಗೆ ಎಂಬುದೇ ಯಕ್ಷ ಪ್ರಶ್ನೆ. ನಗರಸಭೆ ಮತ್ತು ಉಡುಪಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಎರಡು ಕೆರೆ ಅಭಿವೃದ್ಧಿ ಆಗಿದ್ದು, ಉದ್ಘಾಟನೆ ಮುನ್ನ ಈ ಕೆರೆಯು ಕುಸಿತ ಕಂಡಿದೆ.

ಈ ಹಿಂದೆಯೂ ಕೂಡ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ ಎರಡು ಕೋಟಿ ರುಪಾಯಿ ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ನಿರ್ಮಾಣವಾದ ಕೆರೆ ಕೂಡ ಸತತ ನಾಲ್ಕು ಬಾರಿ ಕುಸಿತ ಕಂಡಿದ್ದು, ಅನುದಾನ ಮೀಸಲಿಟ್ಟ, ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳ ಈ ಕೆಲಸಕಾರ್ಯದ ಕಾರ್ಯವೈಖರಿಯನ್ನು ಜನ ಪ್ರಶ್ನಿಸುವಂತಾಗಿದೆ.

Leave a Comment

Leave a Reply

Your email address will not be published. Required fields are marked *