ಮೈಕೊರೆಯುವ ಚಳಿಯಲ್ಲಿ ಕಿತ್ತಳೆ ತಿಂದರೆ ಹೇಗೆ ಒಳ್ಳೆಯದು?; ಮೋಸಂಬಿಯಲ್ಲಿನ ಪೋಷಕಾಂಶಗಳು ಯಾವ್ಯಾವು ಗೊತ್ತಾ?

ನ್ಯೂಸ್ ಆ್ಯರೋ: ಚಳಿಗಾಲ ಆರಂಭವಾಗಿ ತಿಂಗಳುಗಳೆ ಕಳೆಯುತ್ತಿವೆ. ಬೆಳಗ್ಗೆ ಎದ್ದೇಳಬೇಕು ಎಂದರೆ ಇನ್ನೊಂದು ಗಂಟೆ ಮಲಗಿದರೆ ಚೆನ್ನಾಗಿರುತ್ತೆ ಅನಿಸುತ್ತೆ. ಇಂತಹ ಮಹಾ ಚಳಿಯಲ್ಲಿ ಏನೇನು ತಿನ್ನಬೇಕು ಎಂದು ಆರೋಗ್ಯದ ಕಡೆನೂ ಸ್ವಲ್ಪ ಗಮನ ಕೊಡಬೇಕು. ಅಲ್ಲದೇ ಮೈಕೊರೆಯುವ ಚಳಿಯಲ್ಲಿ ಕಿತ್ತಳೆ ಹಣ್ಣುಗಳನ್ನು ತಿಂದರೆ ಆರೋಗ್ಯ ಹದಗೆಡುತ್ತದೆಯಾ ಅಥವಾ ಆರೋಗ್ಯ ಸುಧಾರಿಸುತ್ತದೆಯಾ ಎನ್ನುವ ಅನುಮಾನ ಇದ್ದೆ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಕಿತ್ತಳೆ, ಮೋಸಂಬಿ, Orange ಎಂದು ವಿವಿಧ ಹೆಸರುಗಳಿಂದ ಈ ಹಣ್ಣನ್ನು ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲೋರಿಗಳು, ಮೆಗ್ನೀಷಿಯಮ್ ಸೇರಿ ಇನ್ನು ಕೆಲ ಪೋಷಕಾಂಶಗಳಿವೆ. ಒಂದು ಲೋಟ ಇದರ ಜೂಸ್ ಕುಡಿದರೆ ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಅದರಲ್ಲೂ ಜೂಸ್ಗಿಂತ ಹಣ್ಣನ್ನೇ ತಿಂದ್ರೆ ಒಳ್ಳೆಯದು. ಕಿತ್ತಳೆ ಹಣ್ಣಿನ ಸಿಹಿ- ಹುಳಿ ಮಿಶ್ರಣ ಬಾಯಿಗೆ ಆಹ್ಲಾದಕ ನೀಡುತ್ತದೆ. ಚಳಿಗಾಲದಲ್ಲಿ ಈ ಹಣ್ಣನ್ನು ನಿಯಮಿತವಾಗಿ ತಿನ್ನಬೇಕು. ಅಧಿಕವಾಗಬಾರದರು.
ಚಳಿಗಾಲದಲ್ಲಿ ಕಿತ್ತಳೆ ಹಣ್ಣುಗಳನ್ನು ತಿನ್ನುವುದರಿಂದ ಕೀಲು ನೋವು ಮಾಯವಾಗುತ್ತವೆ. ಕೀಲು ನೋವು ಕಡಿಮೆ ಆಗುವುದರಿಂದ ದೇಹ ಆರಾಮಾಗಿ ಇರುತ್ತದೆ. ಇದರಿಂದ ಮೂಳೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದ್ರೋಗ ಸಮಸ್ಯೆ ತೀರ ಕಡಿಮೆ ಆಗುತ್ತವೆ.
ಕಿತ್ತಳೆಯಲ್ಲಿ ಉರಿಯೂತದ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದರಿಂದ ಹಣ್ಣು ತಿನ್ನುವುದರಿಂದ ಶೀತ ಮತ್ತು ಕೆಮ್ಮನ್ನು ದೂರ ಮಾಡುತ್ತದೆ. ಆದರೆ ನಿಯಮಿತವಾಗಿತಿನ್ನಬೇಕು. ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೇ ಚರ್ಮವನ್ನು ಆರೋಗ್ಯವಾಗಿ ಇಡುತ್ತದೆ.
ಚಳಿಗಾಲದಲ್ಲಿ ಈ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತೆ. ಅಲ್ಲದೇ ದೇಹದ ರೋಗನಿರೋಧಕ ಶಕ್ತಿ ಬಲಪಡಿಸುತ್ತೆ. ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಿತ್ತಳೆ, ದೇಹವನ್ನು ಶೀತಗಳಿಂದ ರಕ್ಷಿಸುತ್ತದೆ.
ಮೋಸಂಬಿಯನ್ನು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನುವುದರಿಂದ ಸಮಸ್ಯೆ ಬರಬಹುದು. ಇದಕ್ಕಾಗಿ ನಿಯಮಿತವಾಗಿ ಸೇವಿಸುವುದು ಉತ್ತಮ. ನಿಯಮಿತವಾಗಿ ಹಣ್ಣನ್ನು ಸೇವನೆ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ನಿವಾರಿಸಲು ಸಹಾಯಕ ಆಗುತ್ತದೆ.
Leave a Comment