Paralympics : ಚಿನ್ನಕ್ಕೆ ಮುತ್ತಿಟ್ಟ ನಿತೇಶ್ ಕುಮಾರ್; ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತೀಯನ ಸಾಧನೆ
ನ್ಯೂಸ್ ಆ್ಯರೋ : ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್‌ಎಲ್ 3 ವಿಭಾಗದ ಫೈನಲ್‌ನಲ್ಲಿ ನಿತೇಶ್ ಕುಮಾರ್ 2-1 ಅಂಕದ ಅಂತರದಲ್ಲಿ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿ, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಎರಡನೇ ಚಿನ್ನ ಲಭಿಸಿದೆ. ರೋಚಕ ಹಣಾಹಣಿಯಿಂದ ಕೂಡಿದ ಪಂದ್ಯವು ಸುಧೀರ್ಘ ಒಂದು ಗಂಟೆ 20 ನಿಮಿಷಗಳ ಕಾಲ ನಡೆಯಿತು. ಉಭಯ ಆಟಗಾರರ ಈಜಿಯಲ್ಲಿ ಕೊನೆಗೆ ನಿತೇಶ್ ಕುಮಾರ್ ಗೆಲುವು ಸಾಧಿಸಿದರು.
ಪಂದ್ಯವು ರೋಚಕತೆಯಿಂದ ಕೂಡಿದ್ದು, ಮೊದಲಿಗೆ ನಿತೇಶ್ 21-14 ರಿಂದ ಗೆದ್ದರು. ಎರಡನೇ ಪಂದ್ಯವನ್ನು 18-21 ಅಂತರದಿಂದ ಡೇನಿಯಲ್ ಗೆ ಬಿಟ್ಟುಕೊಟ್ಟರು. ಮುಂದೆ 16-16 ಅಂಕವನ್ನು ಗಳಿಸಿ ಸಮಬಲ ಸಾಧಿಸಿಕೊಂಡರು. ಅಂತಿಮ ಸುತ್ತಿನಲ್ಲಿ ನಿತೇಶ್ 23-21 ಅಂತರದಿಂದ ಗೆಲುವು ಸಾಧಿಸಿ, ಭಾರತಾಂಬೆಗೆ ಚಿನ್ನದ ಪದಕವನ್ನು ಅರ್ಪಿಸಿದರು.
2024ನೇ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಶೂಟರ್ ಅವನಿ ಲೆಖರಾ ಮೊದಲ ಚಂದ್ರ ಪದಕವನ್ನು ಗೆದ್ದು ಕೊಟ್ಟಿದ್ದರು. ಇದೀಗ ನಿತೇಶ್ ಅವರ ಈ ಚಿನ್ನದ ಪದಕ ಭಾರತಕ್ಕೆ ಸಿಕ್ಕ ಎರಡನೇ ಚಿನ್ನದ ಪದಕವಾಗಿದೆ. ಈ ವರೆಗೆ ಭಾರತಕ್ಕೆ 2 ಚಿನ್ನ 3 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಲಭಿಸಿದೆ. ಆದಾಗ್ಯೂ ಪ್ಯಾರಾಲಿಂಪಿಕ್ಸ್‌ನಲ್ಲಿ ನಿತೇಶ್‌ಗೆ ಇದು ಚೊಚ್ಚಲ ಪದಕವಾಗಿದೆ.
Leave a Comment