ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದ ಮ್ಯಾಕ್ಸಿಮಮ್ ಸಾಂಗ್ ರಿಲೀಸ್ ; ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಚಿತ್ರ ತಂಡ

Spread the love

ನ್ಯೂಸ್ ಆ್ಯರೋ :  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಮ್ಯಾಕ್ಸ್ ಚಿತ್ರತಂಡ ಭರ್ಜರಿ ಸರ್ಪ್ರೈಸ್ ನೀಡಿದೆ. ಇದೀಗ ಮ್ಯಾಕ್ಸ್ ಚಿತ್ರದ ಮ್ಯಾಕ್ಸಿಮಮ್ ಹಾಡು ರಿಲೀಸ್ ಆಗಿದ್ದು, ಕಿಚ್ಚನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಇ ಸಾಂಗ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಮ್ಯಾಕ್ಸ್ ಚಿತ್ರವನ್ನು ವಿಜಯ್ ಕಾರ್ತಿಕೇಯ  ನಿರ್ದೇಶಿಸುತ್ತಿದ್ದು, ಎಸ್ ಆರ್ ಗಣೇಶ್ ಬಾಬು ಚಿತ್ರದ ಸಂಕಲನ ಮಾಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಸಿನಿಮಾದಲ್ಲಿ ಸುದೀಪ್ ಪೊಲೀಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಂಯುಕ್ತ ಹೊರನಾಡು, ಸುನಿಲ್, ಪ್ರಮೋದ್ ಶೆಟ್ಟಿ , ವರಲಕ್ಷ್ಮಿ, ಶರತಕುಮಾರ್, ಅನಿರುದ್ಧ ಭಟ್, ಹಾಗೂ ಸುಕೃತ ವಾಗ್ಲೆ  ಅಭಿನಯಿಸಿದ್ದಾರೆ.

ವಿ ಕ್ರಿಯೇಶನ್ಸ್ ಹಾಗೂ ಕಿಚ್ಚ ಕ್ರಿಯೇಶನ್ಸ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು,  ಶೇಖರ್ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಹುಮುಖ ನಟನೆಯ ಮೂಲಕ ಸದ್ದು ಮಾಡಿರುವ ಕಿಚ್ಚನ ಮ್ಯಾಕ್ಸ್ ಸಿನಿಮಾ ರಿಲೀಸ್ ಗೆ ಫ್ಯಾನ್ಸ್ ಕಾದು ಕುಳಿತಿದ್ದಾರೆ.

ಇದರ ಬೆನ್ನಲ್ಲೇ ಇಂದು ಬಿಗ್ ಬಾಸ್ ಪ್ರೊಮೋ ರಿಲೀಸ್ ಆಗಿದ್ದು, ಕಿಚ್ಚ ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರಾ..? ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!