ವಾಹನ ಸವಾರರು ನಾಳೆ ಹಾರ್ನ್ ಹೊಡೆಯುವ ಹಾಗಿಲ್ಲ‌ – ನೋ ಹಾರ್ನ್ ಡೇ ಎಲ್ಲಿ ಜಾರಿ?

ವಾಹನ ಸವಾರರು ನಾಳೆ ಹಾರ್ನ್ ಹೊಡೆಯುವ ಹಾಗಿಲ್ಲ‌ – ನೋ ಹಾರ್ನ್ ಡೇ ಎಲ್ಲಿ ಜಾರಿ?

ನ್ಯೂಸ್ ಆ್ಯರೋ‌ : ಇತ್ತೀಚೆಗೆ ವಾಹನಗಳ ಸಂಖ್ಯೆ ವಿಪರೀತ ಏರಿಕೆಯಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಾಹನಗಳ ಶಬ್ದ, ಹಾರ್ನ್ ಶಬ್ದಗಳಿಂದ ಕಿವಿ ಬಿಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಾತ್ರವಲ್ಲ ಶಬ್ದ ಮಾಲಿನ್ಯ ಹೆಚ್ಚಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಮುಂಬಯಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ನೋ ಹಾರ್ನ್ ಡೇ ಆಚರಿಸಲು ಕರೆ ನೀಡಿದ್ದಾರೆ.

ನಾಳೆ (ಜೂ. 14) ನೋ ಹಾರ್ನ್ ಡೇ ನಡೆಯಲಿದೆ. ಅಂದರೆ ವಾಹನ ಸವಾರರು ಹಾರ್ನ್ ಹೊಡೆಯುವಂತಿಲ್ಲ. ಸುಮಾರು 17 ವರ್ಷಗಳ ಬಳಿಕ ಈ ಆಚರಣೆ ಜಾರಿಗೆ ತರಲಾಗುತ್ತಿದೆ.

ನಗರ ಪ್ರದೇಶದಲ್ಲಿ ಹಲವು ವಾಹನ ಸವಾರರು ಅನಗತ್ಯ ಹಾರ್ನ್ ಬಳಕೆ ಮಾಡುತ್ತಾರೆ. ಹೀಗಾಗಿ ನೋ ಹಾರ್ನ್ ಡೇ ಆಚರಣೆಗೆ ಮುಂದಾಗಿದ್ದೇವೆ. ಜೂನ್ 14ರಂದು ನೋ ಹಾರ್ನ್ ಡೇ ಪ್ರಯೋಗ ಜಾರಿಯಾಗುತ್ತಿದೆ. ಈ ದಿನ ಎಲ್ಲಾ ವಾಹನ ಸವಾರರು ಹಾರ್ನ್ ಹಾಕದೆ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ತುರ್ತು ವಾಹನಗಳು ಹಾರ್ನ್ ಬಳಕೆ ಮಾಡಬಹುದು. ಹಲವು ಪರಿಸರ ಹೋರಾಟ ಸಂಘಟನೆಗಳು ಮುಂಬಯಿ ಟ್ರಾಫಿಕ್ ಪೊಲೀಸರು ಈ ನಿರ್ಧಾರವನ್ನು ಸ್ವಾಗತಿಸಿವೆ.

ಮುಂಬಯಿಯಲ್ಲಿ ಪ್ರತಿ ದಿನ 43 ಲಕ್ಷಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಹೀಗಾಗಿ ಶಬ್ದ ಮಾಲಿನ್ಯ ಅತಿಯಾಗಿದೆ. ಈ ಹಿಂದೆ 2006ರಲ್ಲಿ ಮುಂಬಯಿಯಲ್ಲಿ ನೋ ಹಾರ್ನ್ ಡೇ ಆಂದೋಲನ ಆರಂಭಿಸಲಾಗಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *