ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್ – ಹುಡುಗಿ ಯಾರು ಗೊತ್ತಾ?

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್ – ಹುಡುಗಿ ಯಾರು ಗೊತ್ತಾ?

ನ್ಯೂಸ್ ಆ್ಯರೋ‌ : ಒಳ್ಳೆ ಹುಡುಗ ಪ್ರಥಮ್ ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಮಾತುಗಳಿಂದಲೇ ಸುದ್ದಿಯಲ್ಲಿರುವ ಈ ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸದ್ಯ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಉಂಗುರ ಧರಿಸಿರುವ ಫೋಟೋ ಹಂಚಿಕೊಂಡ ಪ್ರಥಮ್ ಹುಡುಗಿಯ ಮುಖ ಆಗಲಿ, ವಿವರವನ್ನಾಗಲೀ ನೀಡಿಲ್ಲ. ಇವತ್ತು ನನ್ನ ಎಂಗೇಜ್‍ಮೆಂಟ್ ಆಯ್ತು. ಬಹಳ ಸರಳವಾಗಿ, ಕುಟುಂಬದವರು ಮೆಚ್ಚಿದವರ ಜೊತೆ ನಿಶ್ಚಿತಾರ್ಥ ನೆರವೇರಿತು. ನಾನು ತುಂಬಾ ಸರಳವಾಗಿ ಬದುಕಿದವನು. ಹಾಗೇ ಇರೋಕೆ ಇಷ್ಟ. ಹರಸುವವರು ಅಲ್ಲಿಂದಲೇ ಹರಸಿ, ಅದೇ ಆಶೀರ್ವಾದ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ಹಲವರು ಕಮೆಂಟ್ ಮಾಡಿದ್ದಾರೆ. ಕೆಲವರು ಶುಭ ಹಾರೈಸಿದರೆ, ಒಬ್ಬರು ನಿಮ್ಮದು ಲವ್ ಮ್ಯಾರೇಜ್ ಅಥವಾ ಆರೇಂಜ್ ಮ್ಯಾರೇಜ್? ಎಂದು ಕೇಳಿದ್ದಾರೆ. ಇನ್ನೊಬ್ಬರು ನಿಮ್ಮ ಹುಡುಗಿಯ ಮುಖ ತೋರಿಸಿ ಎಂದು ಹೇಳಿದ್ದಾರೆ.

ಚಾಮರಾಜನಗರ ಮೂಲದ ಪ್ರಥಮ್ ತಮ್ಮನ್ನು ತಾವು ಒಳ್ಳೆ ಹುಡುಗ ಎಂದೇ ಸಂಬೋಧಿಸುತ್ತಾರೆ. ಕನ್ನಡದ ಬಿಗ್ ಬಾಸ್ ಸೀಸನ್ 4 ವಿಜೇತರಾದ ಇವರು ಬಹುಮಾನದ ಮೊತ್ತ ವಿಶೇಷ ಚೇತನರ ಅಭಿವೃದ್ದಿಗೆ ನೀಡಿ ಮಾದರಿಯಾಗಿದ್ದರು. ‘ಎಂ.ಎಲ್.ಎ.’, ‘ದೇವರಂಥ ಮನುಷ್ಯ’, ‘ರಾಜು ಕನ್ನಡ ಮೀಡಿಯಂ’, ‘ನಟ ಭಯಂಕರ’ ಮುಂತಾದ ಚಿತ್ರಗಳಲ್ಲಿ ಪ್ರಥಮ್ ಅಭಿನಯಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *