ಐತಿಹಾಸಿಕ ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆಗೆ 25 ವರ್ಷ – ವಾಜಪೇಯಿ ಸರ್ಕಾರದ ನಿರ್ಧಾರದ ಬಳಿಕ ಅಂದಿನ ಸ್ಥಿತಿ ಹೇಗಿತ್ತು?

ಐತಿಹಾಸಿಕ ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆಗೆ 25 ವರ್ಷ – ವಾಜಪೇಯಿ ಸರ್ಕಾರದ ನಿರ್ಧಾರದ ಬಳಿಕ ಅಂದಿನ ಸ್ಥಿತಿ ಹೇಗಿತ್ತು?

ನ್ಯೂಸ್ ಆ್ಯರೋ‌ : ಭಾರತ ಅತ್ಯಂತ ರಹಸ್ಯವಾಗಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆಗೆ ಈಗ 25 ವರ್ಷ. ಭಾರತ ಇಂತಹದೊಂದು ಪರಮಾಣು ಪರೀಕ್ಷೆ ನಡೆಸಲಿದೆ ಎಂದು ಊಹಿಸಿಯೂ ಇರದ ಜಗತ್ತು ವಿಷಯ ತಿಳಿಯುತ್ತಿದ್ದಂತೆ ಅಚ್ಚರಿಗೆ ಒಳಗಾಗಿತ್ತು.

ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ವೈಜ್ಞಾನಿಕ ಸಲಹೆಗಾರ ಮತ್ತು ಡಿ.ಆರ್.ಡಿ.ಒ. ಮುಖ್ಯಸ್ಥ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಮೊದಲ ಪರೀಕ್ಷೆಯನ್ನು ಮೇ 1974ರಲ್ಲಿ ಮಾಡಲಾಯಿತು. ಬಳಿಕ 1998ರ ವರೆಗೆ ಯಾವುದೇ ಪರಮಾಣು ಪರೀಕ್ಷೆ ನಡೆದಿರಲಿಲ್ಲ.

ಐತಿಹಾಸಿಕ ಕ್ಷಣ

1998ರ ಮೇ 11 ಮತ್ತು 13ರಂದು ಪೋಖ್ರಾನ್ ಪರಮಾಣು ಸ್ಥಳದಲ್ಲಿ ಐದು ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು. ಅದರ ಕೋಡ್ ಹೆಸರು ಸ್ಮೈಲಿಂಗ್ ಬುದ್ಧ. ಮೇ 11ರಂದು ಪರಮಾಣು ಪರೀಕ್ಷೆಯಲ್ಲಿ 15 ಕಿಲೋ ಟನ್ ನಷ್ಟು ವಿದಳನ ಉಪಕರಣಗಳು ಮತ್ತು 0.2 ಕಿಲೋ ಟನ್ ಸಹಾಯಕ ಉಪಕರಣಗಳು ಸೇರಿದ್ದವು. ಇದರ ನಂತರ, ಜಪಾನ್ ಮತ್ತು ಯುಎಸ್ ಸೇರಿದಂತೆ ಪ್ರಮುಖ ದೇಶಗಳು ಭಾರತದ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಿದ್ದವು.

ಈ ಸಂದರ್ಭದಲ್ಲಿ ಇಸ್ರೇಲ್ ಮಾತ್ರ ಭಾರತಕ್ಕೆ ಬೆಂಬಲ ಕೊಟ್ಟಿತು. 1998ರ ಮೇ 11ರಂದು ನಡೆದ ಐದು ಪರಮಾಣು ಪರೀಕ್ಷೆಗಳ ಗೌರವಾರ್ಥ ಭಾರತ ಸರ್ಕಾರ ಈ ದಿನವನ್ನು ಅಧಿಕೃತವಾಗಿ ‘ನ್ಯಾಷನಲ್ ಟೆಕ್ನಾಲಜಿ ಡೇ’ ಎಂದು ಘೋಷಿಸಿತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *