
ನಾಳೆ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ – ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಬದಲಾದ ಸಂಚಾರ ಮಾರ್ಗ ಗಮನಿಸಿ
- ರಾಷ್ಟ್ರೀಯ ಸುದ್ದಿ
- August 25, 2023
- No Comment
- 30
ನ್ಯೂಸ್ ಆ್ಯರೋ : ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಕೋಟ್ಯಾಂತರ ಭಾರತೀಯರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಈ ಐತಿಹಾಸಿಕ ಕ್ಷಣವನ್ನು ಹೆಮ್ಮೆಯಿಂದ ವೀಕ್ಷಿಸಿದ್ದಾರೆ. ಬೆಂಗಳೂರಿನ ಇಸ್ರೋ ಕಚೇರಿಗೆ ನಾಳೆ (ಆಗಸ್ಟ್ 26) ಆಗಮಿಸಿ ಮೋದಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ.
ವಿದೇಶ ಪ್ರವಾಸದಲ್ಲಿದ್ದ ಮೋದಿ
ಚಂದ್ರಯಾನ ಚಂದ್ರನನ್ನು ಸ್ಪರ್ಶಿಸುವ ದಿನವಾದ ಆಗಸ್ಟ್ 23ರಂದು ವಿದೇಶ ಪ್ರವಾಸದಲ್ಲಿದ್ದ ಮೋದಿ ಅಲ್ಲಿಂದಲೇ ನೇರ ಪ್ರಸಾರದ ಮೂಲಕ ವೀಕ್ಷಿಸಿದ್ದರು. ಯಶಸ್ವಿಯಾದ ಬಳಿಕ ಇಸ್ರೋ ವಿಜ್ಞಾನಿಗಳ ಜೊತೆ ಫೋನ್ ನಲ್ಲಿ ಮಾತನಾಡಿದ್ದರು. ಇದೀಗ ನೇರವಾಗಿ ಕಚೇರಿಗೆ ಆಗಮಿಸಲಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ
ಮೋದಿ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾಳೆ ಹಲವು ಮಾರ್ಗಗಳ ಸಂಚಾರ ವ್ಯವಸ್ಥೆ ಬದಲಾಯಿಸಲಾಗುವುದು. ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಮೋದಿ ಆಗಮಿಸಲಿರುವುದರಿಂದ ಬೆಳಗ್ಗೆ 4.30ರಿಂದ 9.30ರ ತನಕ ಈ ಕೆಳಗಿನ ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ನಿರ್ಬಂಧಿಸಿ ಮಾರ್ಗ ಬದಲಾವಣೆ ಮಾಡಲಾಗಿದೆ. ಹೀಗಾಗಿ ಪರ್ಯಾಯ ರಸ್ತೆ ಬಳಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ಬಂಧಿತ ರಸ್ತೆಗಳ ವಿವರ
- ಹಳೆ ವಿಮಾನ ನಿಲ್ದಾಣ ರಸ್ತೆ
- ಹಳೆ ಮದ್ರಾಸ್ ರಸ್ತೆ
- ಎಂ.ಜಿ.ರಸ್ತೆ
- ಕಬ್ಬನ್ ರಸ್ತೆ
- ರಾಜಭವನ ರಸ್ತೆ
- ಬಳ್ಳಾರಿ ರಸ್ತೆ(ಮೇಖ್ರಿ ವೃತ್ತ)
- ಸಿ.ವಿ.ರಾಮನ್ ರಸ್ತೆ
- ಯಶವಂತಪುರ ಮೇಲ್ಸೇತುವೆ
- ತುಮಕೂರು ರಸ್ತೆ(ಯಶವಂತಪುರದಿಂದ ನಾಗಸಂದ್ರದವರೆಗೆ)
- ಮಾಗಡಿ ರಸ್ತೆಯ ಹೊರ ವರ್ತುಲ ರಸ್ತೆ(ಗೊರಗುಂಟೆಪಾಳ್ಯ ಜಂಕ್ಷನ್ ನಿಂದ ಸುಮನಹಳ್ಳಿಯವರೆಗೆ)
- ಗುಬ್ಬಿ ತೋಟದಪ್ಪ ರಸ್ತೆ
- ಜಾಲಹಳ್ಳಿ ವೃತ್ತ ರಸ್ತೆ