ಹೊಸ ಸಮವಸ್ತ್ರದ ಜೊತೆ ಮಿಂಚಲಿದ್ದಾರೆ ಹೊಸ ಸಂಸತ್ ಸಿಬ್ಬಂದಿ – ಹೊಸ ವಿನ್ಯಾಸದ ದಿರಿಸು ಹೇಗಿರಲಿದೆ ಗೊತ್ತಾ?

ಹೊಸ ಸಮವಸ್ತ್ರದ ಜೊತೆ ಮಿಂಚಲಿದ್ದಾರೆ ಹೊಸ ಸಂಸತ್ ಸಿಬ್ಬಂದಿ – ಹೊಸ ವಿನ್ಯಾಸದ ದಿರಿಸು ಹೇಗಿರಲಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಸೆಪ್ಟೆಂಬರ್ 18ರಿಂದ ಸಂಸತ್ ನ ಹೊಸ ಕಟ್ಟಡದಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು, ಈ ವೇಳೆ ರಾಜ್ಯಸಭೆ ಮತ್ತು ಲೋಕಸಭೆಯ ಒಳ ಮತ್ತು ಹೊರಗಿನ ಸಿಬ್ಬಂದಿ ಹೊಸ ಸಮವಸ್ತ್ರ ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಮವಸ್ತ್ರಕ್ಕೆ ಭಾರತೀಯತೆಯ ಸ್ಪರ್ಶ ಇರಲಿದೆ.

ಹೊಸ ವಿನ್ಯಾಸ

ಹೊಸ ಸಮವಸ್ತ್ರಗಳ ಪೈಕಿ ಎರಡೂ ಸದನಗಳ ಮಾರ್ಷಲ್ ಗಳು ಮಣಿಪುರಿ ತಲೆಗವಸು ಧರಿಸಲಿದ್ದಾರೆ. ಕಚೇರಿ ಸಿಬ್ಬಂದಿ, ಸಂಸದೀಯ ವರದಿಗಾರಿಕೆ ವಿಭಾಗದ ಅಧಿಕಾರಿಗಳಿಗೆ ತಾವರೆ ಹೂವಿನ ಚಿಹ್ನೆ ಇರುವ ಅಂಗಿ ಮತ್ತು ಮಹಿಳಾ ಅಧಿಕಾರಿಗಳಿಗೆ ಹೊಸ ವಿನ್ಯಾಸದ ಸೀರೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾವರೆ ಹೂ ಭಾರತದ ರಾಷ್ಟ್ರೀಯ ಪುಷ್ಪವಾದರೂ ಬಿಜೆಪಿಯ ಚಿಹ್ನೆಯಾಗಿರುವುದರಿಂದ ಈ ವಿಚಾರ ವಿವಾದ ಎಬ್ಬಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೊಸ ಸಮವಸ್ತ್ರದ ವಿನ್ಯಾಸದ ಕುರಿತು ಎಲ್ಲಾ 18 ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಬಳಿ ಅಭಿಪ್ರಾಯ ಕೇಳಲಾಗಿತ್ತು. ಕೊನೆಗೆ ತಜ್ಞರ ಸಮಿತಿ ಈ ಸಮವಸ್ತ್ರದ ವಿನ್ಯಾಸವನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಸತ್ ನ 5 ಮುಖ್ಯ ವಿಭಾಗಗಳಾದ ವರದಿಗಾರಿಕೆ, ಟೇಬಲ್ ಆಫೀಸ್, ನೋಟಿಸ್ ಆಫೀಸ್, ಶಾಸಕಾಂಗ ಶಾಖೆ ಮತ್ತು ಭದ್ರತೆಯ ಸಿಬ್ಬಂದಿ ಹೊಸ ಸಮವಸ್ತ್ರ ಧರಿಸಿ ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸತ್ ನ ಮುಖ ಎಂದು ಇವರನ್ನು ಕರೆಯಲಾಗುತ್ತದೆ. ಹೊಸ ಸಮವಸ್ತ್ರ ಭಾರತೀಯ ಸಂಸತ್ತಿನ ಘನತೆ ಮತ್ತು ಅಂದವನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಮಾರ್ಷಲ್ ಗಳು ಸಫಾರಿ ಸೂಟ್ ಬದಲು ಕ್ರೀಮ್ ಬಣ್ಣದ ಕುರ್ತಾ ಪೈಜಾಮಾ ಧರಿಸಿ ಮಿಂಚಲಿದ್ದಾರೆ. ಪೇಟದ ಬದಲು ಮಣಿಪುರು ತೆಲೆಗವುಸು ಅವರ ಶಿರವನ್ನು ಅಲಂಕರಿಸಲಿದೆ.

2000 ಇಸವಿಯಿಂದ ಪ್ರತಿ 2 ವರ್ಷಗಳಿಗೊಮ್ಮೆ ಸಮವಸ್ತ್ರ ಖರೀದಿಸಲು ಈ 5 ವಿಭಾಗಗಳ ಪುರುಷರಿಗೆ 16,000 ರೂ. ಮತ್ತು ಮಹಿಳೆಯರಿಗೆ 17,000 ರೂ. ನೀಡಲಾಗುತ್ತಿದೆ.

5 ದಿನಗಳ ವಿಶೇಷ ಅಧಿವೇಶನ ಸೆಪ್ಟಂಬರ್ 18ರಂದು ಆರಂಭವಾಗಿ 22ರ ತನಕ ಜರಗಲಿದೆ. ಮೊದಲ ದಿನದ ಅಧಿವೇಶನ ಹಳೆ ಪಾರ್ಲಿಮೆಂಟ್ ಕಟ್ಟಡದಲ್ಲಿ ಜರಗಿದರೆ ಉಳಿದ ದಿನಗಳ ಕಲಾಪ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಹೊಸ ಕಟ್ಟಡದಲ್ಲಿ ನಡೆಯಲಿದೆ. ವಿಶೇಷ ಅಧಿವೇಶದ ಅಜೆಂಡಾವನ್ನು ಸರಕಾರ ಇದುವರೆಗೆ ಘೋಷಿಸಿಲ್ಲ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *