ಆನ್‌ಲೈನ್ ನಲ್ಲೇ ಪಾಕ್ ವಧುವನ್ನು ವರಿಸಿದ ರಾಜಸ್ತಾನದ ವರ – ಅಚ್ಚರಿಯ ಮದುವೆಗೆ ಕಾರಣವೇನು ಗೊತ್ತಾ?

ಆನ್‌ಲೈನ್ ನಲ್ಲೇ ಪಾಕ್ ವಧುವನ್ನು ವರಿಸಿದ ರಾಜಸ್ತಾನದ ವರ – ಅಚ್ಚರಿಯ ಮದುವೆಗೆ ಕಾರಣವೇನು ಗೊತ್ತಾ?

ನ್ಯೂಸ್ ಆ್ಯರೋ‌ : ಇತ್ತೀಚಿನ ದಿನಗಳಲ್ಲಿ ಭಾರತ – ಪಾಕಿಸ್ತಾನ ಗಡಿ ಮೀರಿ ಸಂಬಂಧ ಕುದುರುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ ಸೀಮಾ ಪ್ರಿಯತಮನನ್ನು ಹುಡುಕಿಕೊಂಡು ಪಾಕ್ ನಿಂದ ಭಾರತಕ್ಕೆ ಬಂದರೆ ರಾಜಸ್ತಾನದ ಅಂಜು ಗೆಳೆಯನನ್ನು ಅರಸಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಇದರ ಜೊತೆಗೆ ಇನ್ನೊಂದು ಪ್ರಕರಣವೂ ಸೇರಿದ್ದು ಭಾರತದ ವ್ಯಕ್ತಿಯೊಬ್ಬ ಪಾಕಿಸ್ತಾನದ ಯುವತಿಯನ್ನು ಆನ್ ಲೈನ್ ನಲ್ಲಿ ವರಿಸಿದ್ದಾನೆ.

ವೀಸಾ ಸಿಗದೆ ಹಿನ್ನೆಲೆ

ರಾಜಸ್ತಾನದ ಜೋಧ್ ಪುರದ ನಿವಾಸಿ ಅರ್ಬಾನ್ ಪಾಕಿಸ್ತಾನದ ಅಮೀನಾಳನ್ನು ಮದುವೆಯಾಗಿದ್ದಾನೆ. ಅಮೀನಾಗೆ ಭಾರತಕ್ಕೆ ಬರಲು ವೀಸಾ ಸಿಗದ ಹಿನ್ನಲೆಯಲ್ಲಿ ಈ ಜೋಡಿ ವೀಡಿಯೋ ಕಾನ್ಫರೆನ್ಸ್ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

ಎರಡೂ ಕಡೆಯ ಕುಟುಂಬದ ಸದಸ್ಯರು ವೀಡಿಯೋ ಕಾನ್ಫರೆನ್ಸ್ ಮೂಲಕ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇಡೀ ಸಮಾರಂಭದ ಪ್ರದರ್ಶನಕ್ಕೆ ಹುಡುಗನ ಮನೆಯ ಕಡೆಯವರು ಎಲ್.ಇ.ಡಿ. ಪರದೆ ವ್ಯವಸ್ಥೆ ಮಾಡಿದ್ದರು.

ಪ್ರಸ್ತುತ ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವುದರಿಂದ ವೀಸಾ ಪಡೆಯಲು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ನಾವು ವೀಡಿಯೋ ಕಾನ್ಫರೆನ್ಸ್ ಮೂಲಕ ವಿವಾಹಿತರಾಗಲು ನಿರ್ಧರಿಸಿದ್ದೆವು ಎಂದು ವರ ಅರ್ಬಾಜ್ ತಿಳಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *