ಜ್ಞಾನವಾಪಿ ಮಸೀದಿಯ ಸಮೀಕ್ಷೆ ಇಂದಿನಿಂದ ಆರಂಭ – ಶಿವಲಿಂಗ ಸೇರಿ ಮೂರು ವಿಗ್ರಹಗಳ ಕುರುಹು ಪತ್ತೆ

ಜ್ಞಾನವಾಪಿ ಮಸೀದಿಯ ಸಮೀಕ್ಷೆ ಇಂದಿನಿಂದ ಆರಂಭ – ಶಿವಲಿಂಗ ಸೇರಿ ಮೂರು ವಿಗ್ರಹಗಳ ಕುರುಹು ಪತ್ತೆ

ನ್ಯೂಸ್ ಆ್ಯರೋ‌ : ಕೊನೆಗೂ ವಾರಣಾಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಆರಂಭವಾಗಿದೆ. ಸರ್ವೇ ನಡೆಸುತ್ತಿರುವ ಎ.ಎಸ್.ಐ. ತಂಡಕ್ಕೆ ಮೂರು ವಿಗ್ರಹಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.

ಯಾಕಾಗಿ ಸಮೀಕ್ಷೆ?

ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆ ಎನ್ನುವ ವಾದವಿದೆ. ಇದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ಸಮೀಕ್ಷೆ ಆರಂಭಿಸಲಾಗಿದೆ. ಎ.ಎಸ್.ಐ. ತಂಡವು ಮಧ್ಯಾಹ್ನ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ ಅಪರಾಹ್ನ 2.30ರ ಬಳಿಕ ಮತ್ತೆ ಸಮೀಕ್ಷೆ ನಡೆಸಿತ್ತು,

ದೇವಾಲಯದ ಕಡೆಯವರು ಗುಮ್ಮಟದ ಕೆಳಗಿರುವ ಕೊಠಡಿಯನ್ನು ಜಿ.ಪಿ.ಆರ್. ಪರೀಕ್ಷೆಗೆ ಒಳಪಡಿಸಲು ಆಗ್ರಹಿಸಿದ್ದಾರೆ. ಮುಖ್ಯ ಗುಮ್ಮಟದ ಅಡಿಯಲ್ಲಿರುವುದು ಆದಿ ವಿಶ್ವೇಶ್ವರ ದೇವಸ್ಥಾನದ ಗರ್ಭಗುಡಿ. ಜಿ.ಪಿ.ಆರ್. ಪರೀಕ್ಷೆಯಿಂದ ಅಲ್ಲೇನಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಾರಣಾಸಿ ನ್ಯಾಯಾಲಯವು ಸೆಪ್ಟಂಬರ್ 2ರೊಳಗೆ ಸಮೀಕ್ಷೆಯ ವರದಿ ಸಲ್ಲಿಸುವಂತೆ ಸೂಚಿಸಿದೆ. ಮಸೀದಿ ಜಾಗದಲ್ಲಿ ಆದಿ ವಿಶ್ವೇಶ್ವರ ದೇವಸ್ಥಾನದ ಗರ್ಭಗುಡಿ ಇತ್ತು ಮತ್ತು ಅದರ ಕೆಳಗೆ ಶಿವಲಿಂಗ ಮತ್ತಿತರ ಪುರಾವೆಗಳಿವೆ ಎನ್ನುವ ವಾದವಿದೆ. ಹೀಗಾಗಿ ವೈಜ್ಞಾನಿಕ ಸಮೀಕ್ಷೆಗೆ ಕೋರ್ಟ್ ಆದೇಶ ನೀಡಿದೆ.

ಸಮೀಕ್ಷೆ ಕಾರ್ಯದ ವೇಳೆ ಜ್ಞಾನವಾಪಿ ಮಸೀದಿ ಬಳಿಗೆ ಹಿಂದೂ ಪರ ವಕೀಲರಾದ ವಿಷ್ಣು ಶಂಕರ್ ಜೈನ್ ಮತ್ತು ಸುಧೀರ್ ತ್ರಿಪಾಠಿ ಆಗಮಿಸಿ ವೀಕ್ಷಿಸಿದರು.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *