ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್‌ ಸೇವೆಗೆ ದಿನಗಣನೆ: ಜನವರಿ 14ರಂದು ಮುಂಬೈನಲ್ಲಿ ರಸ್ತೆಗಿಳಿಯಲಿದೆ ಹೈಟೆಕ್ ವಾಹನ

ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್‌ ಸೇವೆಗೆ ದಿನಗಣನೆ: ಜನವರಿ 14ರಂದು ಮುಂಬೈನಲ್ಲಿ ರಸ್ತೆಗಿಳಿಯಲಿದೆ ಹೈಟೆಕ್ ವಾಹನ

ನ್ಯೂಸ್ ಆ್ಯರೋ: ದೇಶದ ಮೊದಲ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಕ್ಕೆ ವಾಣಿಜ್ಯ ನಗರಿ ಮುಂಬೈಯಲ್ಲಿ ದಿನಗಣನೆ ಶುರುವಾಗಿದೆ. ಜನವರಿ 14ರಂದು ಈ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಬೃಹತ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಂಸ್ಥೆ ತಿಳಿಸಿದೆ.

ಈ ತಿಂಗಳಿನಿಂದಲೇ ಮುಂಬೈನಲ್ಲಿ ವಿದ್ಯುತ್ ಚಾಲಿತ ಪ್ರೀಮಿಯಂ ಸಿಂಗಲ್ ಡೆಕ್ಕರ್ ಬಸ್ ಸೇವೆ ಆರಂಭವಾಗಲಿದೆ. ಪ್ರಯಾಣಿಕರು ಈ ಸೇವೆಯನ್ನು ಪಡೆದುಕೊಳ್ಳಲು ಆಪ್ ಮೂಲಕವೇ ತಮ್ಮ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಇದರ ಜೊತೆಗೆ ಮುಂದಿನ ವರ್ಷದ ಜೂನ್ ತಿಂಗಳಿನಿಂದ ಮುಂಬೈ ನಗರದಲ್ಲಿ 500 ಎಲೆಕ್ಟ್ರಿಕ್ ವಾಹನಗಳ ಟ್ಯಾಕ್ಸಿ ಆರಂಭಿಸಲು ‘ಬೆಸ್ಟ್’ ಯೋಜನೆಯನ್ನು ಹೊಂದಿದೆ.

ಅಶೋಕ್ ಲೇಲ್ಯಾಂಡ್ ಈಗಾಗಲೇ ಬಸ್ ಸಿದ್ಧಪಡಿಸಿದ್ದು, ಸ್ವಿಚ್ ಮೊಬಿಲಿಟಿ ಎಂಬ ಹೆಸರಿನ ಈ ಬಸ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ‘ಬೆಸ್ಟ್’ ಗೆ ಹಸ್ತಾಂತರ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಕನಿಷ್ಠ 10 ಡಬಲ್ ಡೆಕ್ಕರ್ ಬಸ್ ಸೇವೆಯನ್ನು ನೀಡಲು ಚಿಂತನೆ ನಡೆಸಲಾಗಿದೆ.

ಸಚಿವ ನಿತಿನ್ ಗಡ್ಕರಿ ಮಾತನಾಡಿ, ದೇಶದ ಸಾರಿಗೆ ವ್ಯವಸ್ಥೆಯನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ಬದಲಾಯಿಸುವ ಅಗತ್ಯವಿದ್ದು, ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಗಮನಹರಿಸುವುದರೊಂದಿಗೆ ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸುವ ಸಮಗ್ರ ಸ್ವರೂಪದ ವಿದ್ಯುತ್‌ಚಾಲಿತ ವಾಹನಗಳ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದೆ ಎಂದರು.

ಸ್ವಿಚ್‌ಇಐವಿ 22 ಮೂಲಕ ಮುಂಬೈ ಮಹಾನಗರದ ನಿವಾಸಿಗಳಿಗೆ ಹಳೆಯ ದಿನಗಳ ನೆನಪನ್ನು ಮತ್ತೊಮ್ಮೆ ಹೊಸ ರೂಪದಲ್ಲಿ ನೆನಪಿಸಲು ಸಜ್ಜಾಗಿರುವ ಸ್ವಿಚ್ ಮೊಬಿಲಿಟಿ ಕಂಪನಿಯು ಹೊಸ ಇವಿ ಬಸ್ ಮಾದರಿಯನ್ನು ಸಮಕಾಲಿನ ಆಕರ್ಷಕ ವಿನ್ಯಾಸ ಮತ್ತು ಹಿತಾನುಭವ ನೀಡುವ ಒಳಾಂಗಣ ಹಾಗೂ ಹೊರಾಂಗಣದ ವಿನ್ಯಾಸದೊಂದಿಗೆ ಬಸ್‌ನ್ನು ಅಭಿವೃದ್ಧಿಪಡಿಸಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *