ಭಾರತದ ಹೊರಗೆ ಮೊದಲ IIT ಸ್ಥಾಪನೆಗೆ ಮೆಗಾ‌ ಪ್ಲಾನ್ – ವಿದೇಶಾಂಗ ಸಚಿವ ಜೈಶಂಕರ್ ಉದ್ದೇಶ ಏನ್ ಗೊತ್ತಾ?

ಭಾರತದ ಹೊರಗೆ ಮೊದಲ IIT ಸ್ಥಾಪನೆಗೆ ಮೆಗಾ‌ ಪ್ಲಾನ್ – ವಿದೇಶಾಂಗ ಸಚಿವ ಜೈಶಂಕರ್ ಉದ್ದೇಶ ಏನ್ ಗೊತ್ತಾ?

ನ್ಯೂಸ್ ಆ್ಯರೋ : ಭಾರತದ ತಂತ್ರಜ್ಞಾನ ಸಂಸ್ಥೆ ಕ್ಯಾಂಪಸ್ ಇದೇ ಮೊದಲ ಬಾರಿಗೆ (IIT global campus) ಭಾರದ‌ ಹೊರಗೆ ಸ್ಥಾಪನೆಯಾಗುವ ಹೊಸ್ತಿಲಲ್ಲಿದೆ. ತಾಂಜಾನಿಯಾದ (Tanzania) ಜಂಜಿಬಾರ್ ನಲ್ಲಿ ಭಾರತದ ಮೊದಲ IIT ಕ್ಯಾಂಪಸ್ ಸ್ಥಾಪಿಸಲು ಭಾರತ ಯೋಚಿಸಿರುವ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಪ್ರಕಟಣೆಯ ಮೂಲಕ‌ ತಿಳಿಸಿದೆ. ಅಷ್ಟಕ್ಕೂ ಇಂತಹದ್ದೊಂದು ತೀರ್ಮಾನಕ್ಕೆ ಭಾರತ ಬರಲು ಕಾರಣವೇನು? ಈ ಮೆಗಾ ಪ್ಲಾನ್ ಹಿಂದಿರುವ ಉದ್ದೇಶವೇನು? ಎಂಬೆಲ್ಲ ಪ್ರಶ್ನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಈಗಾಗಲೇ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತಾಂಜಾನಿಯ ಪ್ರವಾಸ ಕೈಗೊಂಡಿದ್ದಾರೆ. ತಾಂಜಾನಿಯಾದ ಜಾಂಜಿರಾಬಾರ್ ನಲ್ಲಿ ಐಐಟಿ ಮದ್ರಾಸ್ ಕ್ಯಾಂಪಸ್ ಸ್ಥಾಪನೆಗೆ ಇದೀಗ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಈ ಮಹತ್ವದ ಒಪ್ಪಂದಕ್ಕೆ ಜಾಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಹಾಗೂ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸಮ್ಮುಖದಲ್ಲಿ ಇಲಾಖೆಗಳು ಸಹಿ ಹಾಕಿವೆ ಎನ್ನಲಾಗಿದೆ.

ಭಾರತದ ಇತಿಹಾಸಲ್ಲಿ‌ ಇದೇ ಮೊಟ್ಟ ಮೊದಲ‌ ಭಾರಿಗೆ ಭಾರತದ‌ ಹೊರಗೆ‌ ಜಿಂಜರಾಬಾದ್ ನಲ್ಲಿ ಮೊದಲು ಐಐಟಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ಭಾರತದ ಈ ಮಹತ್ವದ ತೀರ್ಮಾನಕ್ಕೆ ಭಾರತೀಯ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಹಾಗೂ ಜಂಜಿರಾಬಾರ್ ಮತ್ತು ವೃತ್ತಿಪರ ತರಬೇತಿ ಸಚಿವಾಲಯಗಳ ನಡುವೆ ತಿಳುವಳಿಕೆಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎನ್ನಲಾಗಿದೆ.

ಭಾರತವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಲವು ದೇಶಗಳೊಂದಿಗಿರುವ ಸಂಬಂಧವನ್ನು ಗಟ್ಟಿಗೊಳಿಸಲು ದಾಪುಗಾಲಿಟ್ಟಿದೆ. ಸದ್ಯ, ಇದೇ ಯೋಚನೆಯಡಿಯಲ್ಲಿ ಭಾರತದ ಹೊರಗಡೆ ಹೊಸ ಐಐಟಿ ಕ್ಯಾಂಪಸ್ ಆರಂಭಿಸಲು ಯೋಚಿಸಿದ್ದು, ಇದು ಭಾರತ ಮತ್ತು ತಾಂಜಾನಿಯಾದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಈಗಾಗಲೇ ಎರಡೂ ದೇಶಗಳು ಇದಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಸದ್ಯದಲ್ಲೇ ಇದರ ಇನ್ನಷ್ಟು ರೂಪುರೇಷೆಗಳು ಸಿದ್ಧವಾಗಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *