ಹೀರೋ ಮೋಟೋಕಾರ್ಪ್ ಉತ್ಪಾದಿಸಲಿದೆ ಹಾರ್ಲೆ ಡೇವಿಡ್ಸನ್ ಎಕ್ಸ್ 440 ಬೈಕ್ – ಇದರ ಬೆಲೆ ಎಷ್ಟು? ಬುಕಿಂಗ್ ಹೇಗೆ?

ಹೀರೋ ಮೋಟೋಕಾರ್ಪ್ ಉತ್ಪಾದಿಸಲಿದೆ ಹಾರ್ಲೆ ಡೇವಿಡ್ಸನ್ ಎಕ್ಸ್ 440 ಬೈಕ್ – ಇದರ ಬೆಲೆ ಎಷ್ಟು? ಬುಕಿಂಗ್ ಹೇಗೆ?

ನ್ಯೂಸ್ ಆ್ಯರೋ‌ : ಐಷಾರಾಮಿ ಬೈಕ್ ಉತ್ಪಾದನಾ ಕಂಪೆನಿ ಹಾರ್ಲೆ ಡೇವಿಡ್ಸನ್ ತನ್ನ ಬಹು ನಿರೀಕ್ಷಿತ ಎಕ್ಸ್ 440 (Harley-Davidson X440) ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೀರೋ ಮೊಟೋಕಾರ್ಪ್ (Hero motoCorp) ಜೊತೆಗಿನ ಸಹಭಾಗಿತ್ವ ಯೋಜನೆಯಡಿ ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ಸುಮಾರು 2.29 ಲಕ್ಷ ರೂ. ಇದು ರಾಯಲ್ ಎನ್ ಫೀಲ್ಡ್ ಬೈಕ್ ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

ರಾಯಲ್ ಎನ್ ಫೀಲ್ಡ್ ಗೆ ಸವಾಲು

ಮೊದಲೇ ಹೇಳಿದಂತೆ ಎಕ್ಸ್ 440 ಭಾರತದಲ್ಲಿ ರಾಯಲ್ ಎನ್ ಫೀಲ್ಡ್ ಗೆ ಮಾರುಕಟ್ಟೆಯಲ್ಲಿ ಸವಾಲು ಹಾಕಲಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಕ್ಲಾಸಿಕ್ 350 ಮಾದರಿ 1.93 ಲಕ್ಷ ರೂ.ಯಿಂದ ಆರಂಭವಾದರೆ ಹಂಟರ್ ಬೆಲೆ 1.5 ಲಕ್ಷ ರೂ. ಆಸುಪಾಸಿನಲ್ಲಿದೆ. ಫ್ಲಾಟ್ ಬಾಯ್ ತಯಾರಕರು 2021ರಲ್ಲಿ ನಿರ್ಗಮಿಸಿದ ಬಳಿಕ ಹಾರ್ಲೆ ಡೇವಿಡ್ಸನ್ ಭಾರತಕ್ಕೆ ಬರುತ್ತಿರುವುದು ಇದು ಎರಡನೇ ಬಾರಿ. ಹೀರೋ ಮೋಟೋಕಾರ್ಪ್ ನೊಂದಿಗೆ ಪಾಲುದಾರಿಕೆ ಹೊಂದಿ 250 ಸಿಸಿಯಿಂದ 500 ಸಿಸಿ ಸೆಗ್ ಮೆಂಟ್ ವಿಭಾಗದಲ್ಲಿ ಮ್ಯಾಜಿಕ್ ಮಾಡುವ ನಿರೀಕ್ಷೆಯಲ್ಲಿದೆ. ಈ ವಿಭಾಗದಲ್ಲಿ ರಾಯಲ್ ಎನ್ ಫೀಲ್ಡ್ ಈಗ ಶೇ. 90ಕ್ಕಿಂತ ಹೆಚ್ಚಿನ ಪಾಲು ಹೊಂದಿದೆ.

ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಎಕ್ಸ್ 440 ಬೈಕ್ ಅನ್ನು ಹೀರೋ ಮೊಟೋಕಾರ್ಪ್ ಉತ್ಪಾದನೆ, ಮಾರಾಟ ಮಾಡಲಿದೆ. ಇದು ಯಶಸ್ವಿಯಾದರೆ ಭವಿಷ್ಯದಲ್ಲಿ ಇನ್ನಷ್ಟು ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ. ರಾಯಲ್ ಎನ್ ಫೀಲ್ಡ್ ಮಾತ್ರವಲ್ಲದೆ ಎಕ್ಸ್ 440 ಬೈಕ್ ಬಜಾಜ್ ಆಟೋ ಲಿಮಿಟೆಡ್, ಟ್ರಯಂಫ್ ಮೋಟಾರ್ ಸೈಕಲ್ಸ್ ಲಿಮಿಟೆಡ್ ನ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಗಳಿಗೆ ಪೈಪೋಟಿ ನೀಡಲಿದೆ.

ಮೂರು ವೇರಿಯೆಂಟ್

ಈ ಹೊಸ ಮಾದರಿ ಡೆನಿಮ್(2.29 ಲಕ್ಷ ರೂ.), ವಿವಿಡ್(2.49 ಲಕ್ಷ ರೂ.) ಮತ್ತು ಎಸ್(2.69 ಲಕ್ಷ ರೂ.) ಎಂಬ ಮೂರು ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಇದು 350 ಸಿಸಿ ವಿಭಾಗದಲ್ಲಿ ಇತರ ಮಾದರಿಗಳಿಗೆ ಪೈಪೋಟಿ ನೀಡುವ ನಿರೀಕ್ಷೆ ಇದೆ. ಎಕ್ಸ್ 440 ಮಾದರಿಯು 440 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಜೋಡಣೆ ಹೊಂದಿದೆ. 6-ಸ್ಪಿಡ್ ಗೇರ್ ಬಾಕ್ಸ್ ನೊಂದಿಗೆ 27 ಹಾರ್ಸ್ ಪವರ್ ಮತ್ತು 38 ಎನ್.ಎಂ. ಟಾರ್ಕ್ ಉತ್ಪಾದನೆ ಜೊತೆಗೆ ಇಂಧನ ದಕ್ಷತೆಯಲ್ಲೂ ಗ್ರಾಹಕರನ್ನು ಆಕರ್ಷಿಸಲಿದೆ.

ವೈಶಿಷ್ಟ್ಯ

ರೆಟ್ರೋ ಲುಕ್ ಮತ್ತು ಆಧುನಿಕ ತಂತ್ರಜ್ಞಾನ ಬೈಕ್ ಗೆ ಹೊಸ ರೂಪ ಕೊಡಲಿದ್ದು, ಎಲ್.ಇ.ಡಿ. ಹೆಡ್ ಲ್ಯಾಂಪ್ಸ್ ಮತ್ತು ಡೈಮಂಡ್ ಕಟ್ ಅಲಾಯ್ ವ್ಹೀಲ್, 3ಡಿ ಬ್ಯಾಡ್ಜಿಂಗ್ ಮತ್ತು ಎಕ್ಸಾಸ್ಟ್ ಗಮನ ಸೆಳೆಯುವಂತಿದೆ. ಬ್ಲೂ ಟೂತ್ ಕನೆಕ್ಟಿವಿಟಿ, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಇಂಡಿಕೇಟರ್ ಈ ಬೈಕ್‍ನ ವಿಶೇಷತೆ.

ಸುರಕ್ಷತೆಗೂ ಆದ್ಯತೆ

ಎಕ್ಸ್ 440 ಬೈಕ್ ನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಬೈಕ್ ನ ಮುಂಭಾಗದ ಚಕ್ರದಲ್ಲಿ ಸೆಗ್ಮೆಂಟ್ ಫಸ್ಟ್ 320 ಎಂ.ಎಂ. ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನಲ್ ಎ.ಬಿ.ಎಸ್. ಜೋಡಣೆ ಮಾಡಲಾಗಿದೆ. ಬೈಕ್ ಮಸ್ಟರ್ಡ್ ಡೆನಿಮ್, ಮೆಟಾಲಿಕ್ ಡಾರ್ಕ್ ಸಿಲ್ವರ್, ಮೆಟಾಲಿಕ್ ಥಿಕ್ ಸಿಲ್ವರ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *