Salaar Movie Teaser : ಸಲಾರ್ ಚಿತ್ರದ ಟೀಸರ್ ಬಿಡುಗಡೆ – ರಗಡ್ ಲುಕ್ ನಲ್ಲಿ ಗಮನ ಸೆಳೆದ ಪ್ರಭಾಸ್, ಏಳು ಗಂಟೆಯಲ್ಲಿ 16M ವ್ಯೂಸ್..!!

Salaar Movie Teaser : ಸಲಾರ್ ಚಿತ್ರದ ಟೀಸರ್ ಬಿಡುಗಡೆ – ರಗಡ್ ಲುಕ್ ನಲ್ಲಿ ಗಮನ ಸೆಳೆದ ಪ್ರಭಾಸ್, ಏಳು ಗಂಟೆಯಲ್ಲಿ 16M ವ್ಯೂಸ್..!!

Salaar Movie Teaser : : ‘ಸಲಾರ್’ ಚಿತ್ರ ಘೋಷಣೆಯಾದಾಗಿನಿಂದ ದಕ್ಷಿಣ ಭಾರತ ಮಾತ್ರವಲ್ಲ ಇಡೀ ಭಾರತದ ಗಮನ ಸೆಳೆದಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರ ಎನ್ನುವುದೊಂದೇ ಇದಕ್ಕೆ ಕಾರಣವಲ್ಲ. ‘ಕೆಜಿಎಫ್’ನಂತಹ ಮಹಾನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲಂಸ್ ಎನ್ನುವ ಪ್ರೊಡಕ್ಷನ್ ಕಂಪೆನಿ, ಪ್ರಭಾಸ್ ನಂತಹ ಸ್ಟಾರ್ ಒಳಗೊಂಡಿದ್ದ ಕಾರಣ ಈ ಚಿತ್ರ ಬಹಳ ನಿರೀಕ್ಷೆ ಮೂಡಿಸಿತ್ತು. ಇಂದು (ಜು. 6) ಬೆಳಗ್ಗೆ 5.12ಕ್ಕೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ದಾಖಲೆಯ ವೀಕ್ಷಣೆ ಕಂಡಿದೆ.

ರಗಡ್ ಅವತಾರದಲ್ಲಿ ಪ್ರಭಾಸ್

ಇತ್ತೀಚಿನ ವರ್ಷಗಳಲ್ಲಿ ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಸತತ ಸೋಲಿಗೆ ಸಿಲುಕಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಆದಿಪುರುಷ್’ ಕೂಡ ಮ್ಯಾಜಿಕ್ ಸೃಷ್ಟಿಸಲು ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಸಲಾರ್ ಚಿತ್ರದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದ್ದು, ಅದರಂತೆ ಟೀಸರ್ ಗಮನ ಸೆಳೆದಿದೆ. ಪ್ರಭಾಸ್ ಕಾಣಿಸಿಕೊಂಡ ರಗಡ್ ಅವತಾರಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.

‘ಕೆಜಿಎಫ್’ ಛಾಯೆ

ಇದೀಗ ತೆರೆಕಂಡು ಟ್ರೆಂಡಿಂಗ್ ನಲ್ಲಿರುವ ‘ಸಲಾರ್’ ಟೀಸರ್ ನಲ್ಲಿ ‘ಕೆಜಿಎಫ್’ ಛಾಯೆ ಕಂಡು ಬಂದಿದೆ. ‘ಕೆಜಿಎಫ್’ ಚಿತ್ರದಲ್ಲಿ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲಿ ಮುಂದುವರಿದಿದ್ದಾರೆ. ‘ಸಲಾರ್’ನಲ್ಲಿ ಮಲೆಯಾಳಂ ಸ್ಟಾರ್ ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಅವರ ಲುಕ್ ಕೂಡ ಟೀಸರ್ ನಲ್ಲಿ ಗಮನ ಸೆಳೆಯುತ್ತಿದೆ. ಜೊತೆಗೆ ಮೇಕಿಂಗ್, ಸಂಗೀತ ನೋಡುಗರನ್ನು ಆಕರ್ಷಿಸುತ್ತಿದೆ.

ದಾಖಲೆಯ ವ್ಯೂವ್ಸ್

‘ಸಲಾರ್’ ಚಿತ್ರ ಎರಡು ಭಾಗಗಳಲ್ಲಿ ಬರಲಿದೆ ಎನ್ನುವ ಸುದ್ದಿ ಇದೀಗ ಖಚಿತವಾಗಿದೆ. ಮೊದಲ ಭಾಗಕ್ಕೆ ‘ಸಲಾರ್: ಸೀಸ್ ಫೈರ್’ ಎಂದು ಹೆಸರಿಡಲಾಗಿದೆ. ಈ ಟೀಸರ್ ಬಿಡುಗಡೆಯಾದ ಕೇವಲ ಏಳು ಗಂಟೆಗಳಲ್ಲಿ ಬರೋಬ್ಬರಿ 16 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #SalaarTeaser #PrashanthNeel #Prabhas ಹೆಸರು ಟ್ರೆಂಡಿಂಗ್ ನಲ್ಲಿವೆ.

ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದು, ಜಗಪತಿ ಬಾಬು, ಈಶ್ವರಿ ರಾವ್, ಮಧು ಗುರುಸ್ವಾಮಿ, ಶ್ರೀಯಾ ರೆಡ್ಡಿ ಮತ್ತಿತರರು ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರ 2023ರ ಸೆ. 28ರಂದು ವಿಶ್ವಾದ್ಯಂತ ತೆರೆಕಾಣಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *