
ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಇಸ್ರೋದ ಮೇಲೆ ನಂಬಿಕೆಯಿರಲಿಲ್ಲ – ಕೈ ನಾಯಕರ ಬಾಯಿ ಮುಚ್ಚಿಸಿದ ಇಸ್ರೋದ ಮಾಜಿ ವಿಜ್ಞಾನಿ
- ರಾಷ್ಟ್ರೀಯ ಸುದ್ದಿ
- August 28, 2023
- No Comment
- 142
ನ್ಯೂಸ್ ಆ್ಯರೋ : ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಕ್ರೆಡಿಟ್ ವಾರ್ ಜೋರಾಗಿಯೇ ನಡೆಯುತ್ತಿದೆ. ಇಸ್ರೋ ವಿಜ್ಞಾನಿಗಳಿಗೆ ನೀಡಬೇಕೇ? ತಿರುಪತಿ ತಿಮ್ಮಪ್ಪನಿಗೆ ನೀಡಬೇಕೇ? ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೇ.. ಎಂಬ ವಿಪಕ್ಷಗಳ ಟೀಕೆಗೆ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ನೀಡಿರುವ ಹೇಳಿಕೆ ಕೈ ನಾಯಕರ ಬಾಯಿ ಮುಚ್ಚಿಸಿದೆ.
ನಂಬಿ ನಾರಾಯಣನ್ ನೀಡಿದ ಹೇಳಿಕೆಯಲ್ಲಿ ಏನಿದೆ?
ಅದು ಇಸ್ರೋದ ಆರಂಭದ ದಿನಗಳು ಆಗಿದ್ದವು. ಕೇಂದ್ರದಲ್ಲಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರವು ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಹೆಚ್ಚಿನ ಹಣವನ್ನು ಮಂಜೂರು ಮಾಡಲಿಲ್ಲ. ಏಕೆಂದರೆ ಸರ್ಕಾರಕ್ಕೆ ಇಸ್ರೋದ ಮೇಲೆ ‘ನಂಬಿಕೆ ಇರಲಿಲ್ಲ’ ಎಂದಿದ್ದಾರೆ. ನಂಬಿ ನಾರಾಯಣನ್ ಮಾತನಾಡಿರುವ ಈ ವಿಡಿಯೋ ತುಣುಕನ್ನು ಬಿಜೆಪಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ಯಾವಾಗ ವಿಶ್ವಾಸಾರ್ಹತೆಯನ್ನು ಇಸ್ರೋ ಪ್ರೂವ್ ಮಾಡಿತೋ ಅಂದಿನಿಂದ ಕೇಂದ್ರ ಸರ್ಕಾರ ಸಂಸ್ಥೆಗೆ ಹಣವನ್ನು ಬಿಡುಗಡೆ ಮಾಡಿತು. ಅಂದು ನಮ್ಮ ಹತ್ತಿರ ಜೀಪ್ ಇರಲಿಲ್ಲ. ಕಾರೂ ಇರಲಿಲ್ಲ. ನಮ್ಮ ಬಳಿ ಏನೂ ಇರಲಿಲ್ಲ. ಅಂದರೆ, ನಮಗೆ ಬಜೆಟ್ ಹಂಚಿಕೆ ಆಗಿರಲಿಲ್ಲ. ಇವೆಲ್ಲ ಇಸ್ರೋದ ಆರಂಭ ದಿನಗಳು ಆಗಿದ್ದವು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ ಸಕ್ಸಸ್ ಅನ್ನು ತಾವು ಪಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಿಜ್ಞಾನಿ, ಹಾಗಾದರೆ ಈ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂದಿದ್ದಾರೆ.
ನೀವು ರಾಷ್ಟ್ರೀಯ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡಾಗ ಯಾರಿಗೆ ಕ್ರೆಡಿಟ್ ಸಲ್ಲಿಸಬೇಕು. ಅದು ಪ್ರಧಾನಮಂತ್ರಿಗೆ. ನಿಮಗೆ ಪ್ರಧಾನಮಂತ್ರಿ ಇಷ್ಟ ಆಗದಿದ್ದರೆ, ಅದು ನಿಮ್ಮ ಸಮಸ್ಯೆ. ಇದೇ ವೇಳೆ ಇಸ್ರೋ ವಿಜ್ಞಾನಿಗಳಿಗೆ ಸಂಬಳ ಸರಿಯಾಗಿ ಆಗುತ್ತಿರಲಿಲ್ಲವಂತೆ ಹೌದೇ ಎಂದು ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ನಾರಾಯಣನ್ ಸಂಬಳ ವಿಳಂಬ ಆಗುತ್ತಿರಲಿಲ್ಲ. ಪೆನ್ಷನ್ ಹಣದಲ್ಲೂ ಯಾವುದೇ ಮೋಸ ಇಲ್ಲ. ನನಗೆ ಪ್ರತಿ ತಿಂಗಳ 29ಕ್ಕೆ ಪೆನ್ಷನ್ ಹಣ ಬರುತ್ತದೆ ಎಂದು ಕೈ ನಾಯಕರ ಟೀಕೆಗಳಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.