
Shakeela : ಮತ್ತೆ ಬಿಗ್ ಬಾಸ್ ಮನೆಯಲ್ಲಿ ಶಕೀಲಾ ಆಟ ಪಕ್ಕಾ – ವೀಕ್ಷಕರಲ್ಲಿ ಹೆಚ್ಚಾಯ್ತು ಕಾತುರ, ಆತುರ…!!
- ಮನರಂಜನೆ
- August 28, 2023
- No Comment
- 84
ನ್ಯೂಸ್ ಆ್ಯರೋ : ಶಕೀಲಾ – ಈ ಹೆಸರು ಕೇಳಿದರೆ ಸಾಕು ಪಡ್ಡೆಗಳೆಲ್ಲ ಒಂದು ಕ್ಷಣ ರೋಮಾಂಚಿತರಾಗುತ್ತಾರೆ. ಮಲೆಯಾಳಂ ಮೂಲದ ಈ ನಟಿ ಹಲವು ಸಾಫ್ಟ್ ಪೋರ್ನ್ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಇವರ ಚಿತ್ರಗಳು ಬೇರೆ ಬೇರೆ ಭಾಷೆಗಳಿಗೂ ಡಬ್ ಆಗಿರುವ ಸೂಪರ್ ಸ್ಟಾರ್. ಇಂತಿಪ್ಪ ನಟಿ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು, ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿದೆ.
ತೆಲುಗು ಬಿಗ್ ಬಾಸ್
ಶಕೀಲಾ ಕಾಲಿಡುತ್ತಿರುವುದು ತೆಲುಗು ಬಿಗ್ ಬಾಸ್ ಗೆ. ಸೆಪ್ಟಂಬರ್ ನಲ್ಲಿ ತೆಲುಗು ಬಿಗ್ ಬಾಸ್ ನ ಸೀಸನ್-7 ಆರಂಭವಾಗಲಿದ್ದು, ಇದರಲ್ಲಿ ಶಕೀಲಾ ಸ್ಪರ್ಧಿಸುವ ಸಾಧ್ಯತೆ ಇದೆ. ಇವರಿಗೆ ಭರ್ಜರಿ ಸಂಭಾವನೆ ನೀಡಿ ಈ ರಿಯಾಲಿಟಿ ಶೋಗೆ ಕರೆ ತರಲಾಗುತ್ತಿದೆಯಂತೆ.
ಅಕ್ಕಿನೇನಿ ನಾರ್ಗಾಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೆಪ್ಟಂಬರ್ 3ರಂದು ಆರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್-2ರಲ್ಲಿ ಸ್ಪರ್ಧಿಸಿದ್ದ ಶಕೀಲಾ ಈ ಬಾರಿ ತೆಲುಗಿಗೆ ಕಾಲಿಡುವುದು ಪಕ್ಕಾ ಎನ್ನುವ ಲೆಕ್ಕಾಚಾರವಿದೆ.
ಇತರ ಸ್ಪರ್ಧಿಗಳು
ನಟ ಶಿವಾಜಿ, ಕ್ರಾಂತಿ, ಅಮರ್ ದೀಪ್ ಚೌಧರಿ, ಯೂಟ್ಯೂಬರ್ ಅನಿಲ್ ಗೀಲಾ, ಡ್ಯಾನ್ಸರ್ ಸಂದೀಪ್, ನಟಿ ಪೂಜಾ ಮೂರ್ತಿ, ಕಾಮಿಡಿಯನ್ ರಿಯಾಜ್, ಮಾಡೆಲ್ ಪ್ರಿನ್ಸ್ ಯಾವರ್, ಸಿಂಗರ್ ದಾಮಿನಿ ಬಾತ್ಲಾ ಮತ್ತಿತರರು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ.
1994ರಲ್ಲಿ ತಮಿಳಿನ ‘ಪ್ಲೇಗರ್ಲ್ಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶಕೀಲಾ ಬಳಿಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿಮಾರಂಗದಲ್ಲಿ ನಟಿಸಿದರು. 2020ರಲ್ಲಿ ಇವರ ಜೀವನಾಧರಿಸಿದ ‘ಶಕೀಲಾ’ ಹೆಸರಿನ ಬಾಲಿವುಡ್ ಚಿತ್ರ ತೆರೆಕಂಡಿತ್ತು. ಕನ್ನಡ ಮೂಲದ ಇಂದ್ರಜಿತ್ ಲಂಕೇಶ್ ಈ ಚಿತ್ರ ನಿರ್ದೇಶಿಸಿದ್ದರು. ಸದ್ಯ ರಿಯಾಲಿಟಿ ಶೋ ಮೂಲಕ ಶಕೀಲಾ ಮತ್ತೆ ಸದ್ದು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.