ಅಯೋಧ್ಯೆಯ ರಾಮ ಮಂದಿರಕ್ಕೆ ತಯಾರಾಯ್ತು ಬರೋಬ್ಬರಿ 400 ಕೆಜಿ ತೂಕದ ಬೀಗ‌ – ಏನಿದರ ವಿಶೇಷತೆ?

ಅಯೋಧ್ಯೆಯ ರಾಮ ಮಂದಿರಕ್ಕೆ ತಯಾರಾಯ್ತು ಬರೋಬ್ಬರಿ 400 ಕೆಜಿ ತೂಕದ ಬೀಗ‌ – ಏನಿದರ ವಿಶೇಷತೆ?

ನ್ಯೂಸ್ ಆ್ಯರೋ‌ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಜನವರಿಯಲ್ಲಿ ಮಂದಿರದ ಬಾಗಿಲು ತೆರೆಯಲು ಸಿದ್ದತೆ ನಡೆಯುತ್ತಿದೆ. ಇದೀಗ ರಾಮ ಮಂದಿರಕ್ಕೆ ಅಲಿಘರ್ ಮೂಲದ ಕುಶಲಕರ್ಮಿ ಸತ್ಯ ಪ್ರಕಾಶ್ ಶರ್ಮಾ ತಯಾರಿಸಿದ ಬೀಗ ಗಮನ ಸೆಳೆಯುತ್ತಿದೆ.

400 ಕೆ.ಜಿ. ತೂಕದ ಬೀಗ

ಇದು ಅಂತಿಂಥ ಬೀಗವಲ್ಲ. ಇದರ ತೂಕ ಬರೋಬ್ಬರಿ 400 ಕೆಜಿ! ಇದು 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪ ಹೊಂದಿದೆ. ಇದಕ್ಕಾಗಿ ವಿಶೇಷವಾಗಿ 4 ಅಡಿ ಉದ್ದದ ಕೀ ತಯಾರಿಸಲಾಗಿದೆ.

ಈ ಬೀಗ ತಯಾರಿಕೆಗೆ ಸುಮಾರು 2 ಲಕ್ಷ ರೂ. ಖರ್ಚಾಗಿದೆ. ಇದಕ್ಕಾಗಿ ತಿಂಗಳುಗಟ್ಟಲೆ ವ್ಯಯಿಸಿದ್ದಾರೆ. ರಾಮನ ಭಕ್ತರಾಗಿರುವ ಸತ್ಯ ಪ್ರಕಾಶ್ ಕುಟುಂಬ ಸಮೇತ ಅಲಿಘರ್ ನಲ್ಲಿ ನೆಲೆಸಿದ್ದಾರೆ. ಹಲವು ವರ್ಷಗಳಿಂದ ಕೈಯಾರೆ ಬೀಗವನ್ನು ತಯಾರಿಸುತ್ತಿದ್ದಾರೆ. ಇದೀಗ ಸ್ವಯಂ ಪ್ರೇರಣೆಯಿಂದ ರಾಮ ಮಂದಿರಕ್ಕಾಗಿ ಈ ಹಿರಿದಾದ ಬೀಗ ತಯಾರಿಸಿದ್ದಾರೆ.

ಈ ಬೃಹತ್ ಬೀಗ ತಯಾರಿಗೆ ಪತ್ನಿ ರುಕ್ಮಿಣಿ ಶರ್ಮಾ ನೆರವು ನಿಡಿರುವುದಾಗಿ ಸತ್ಯ ಪ್ರಕಾಶ್ ತಿಳಿಸಿದ್ದಾರೆ. ನಾವು ಈ ಬೀಗವನ್ನು ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಈ ಬೀಗವನ್ನು ನೋಡಿ ಜನರು ನಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ದಂಪತಿ ತಿಳಿಸಿದ್ದಾರೆ.

ಪತಿ-ಪತ್ನಿ ಇಬ್ಬರು ಸೇರಿ ಈ ಬೀಗವನ್ನು ಅರ್ಪಿಸಲು ಬಯಸುವುದಾಗಿಯೂ ಸದ್ಯ ಸಾಗಿಸಲು ಹಣದ ಕೊರತೆ ಇರುವುದಾಗಿಯೂ ದಂಪತಿ ಹೇಳಿದ್ದಾರೆ. ಈ ಬೀಗವನ್ನು ಅರ್ಪಿಸಲು ಆ ರಾಮನೇ ದಾರಿ ತೋರುತ್ತಾನೆ ಎಂದು ಸತ್ಯ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *