ಮಗು ಹೆತ್ತಿದ್ದರೂ ಬಿಕ್ಕಿ ಬಿಕ್ಕಿ ಅತ್ತ ನಟಿ ಬಿಪಾಶಾ ಬಸು – ಮಗುವಿಗಿರೋ ಸಮಸ್ಯೆ ಬಗ್ಗೆ ನಟಿ ಹೇಳಿಕೊಂಡಿದ್ದೇನು?

ಮಗು ಹೆತ್ತಿದ್ದರೂ ಬಿಕ್ಕಿ ಬಿಕ್ಕಿ ಅತ್ತ ನಟಿ ಬಿಪಾಶಾ ಬಸು – ಮಗುವಿಗಿರೋ ಸಮಸ್ಯೆ ಬಗ್ಗೆ ನಟಿ ಹೇಳಿಕೊಂಡಿದ್ದೇನು?

ನ್ಯೂಸ್ ಆ್ಯರೋ‌ : ಬಾಲಿವುಡ್‌ನ ಖ್ಯಾತ ನಟಿ ಬಿಪಾಶಾ ಬಸು ಮತ್ತು ಕರಣ್‌ ಸಿಂಗ್‌ ಗ್ರೋವರ್ ಕಳೆದ ವರ್ಷವಷ್ಟೇ ಪೋಷಕರಾಗಿ ಬಡ್ತಿ ಹೊಂದಿದ್ದರು. ನವೆಂಬರ್ 12ರಂದು 44ರ ಹರೆಯದ ನಟಿ ಬಿಪಾಶಾ ಬಸು, ಹೆಣ್ಣು ಮಗುವಿಗೆ ಜನ್ಮ ನೀಡಿ ಹೆಣ್ಣು ಮಗುವಿಗೆ ಅಮ್ಮನಾಗಿದ್ದರು.

ಆ ಮುದ್ದು ಮಗಳಿಗೆ ದೇವಿ ಎಂದೂ ನಾಮಕರಣ ಮಾಡಿದ್ದರು. ಮಗು ಬಂದ ಹಿನ್ನೆಲೆಯಲ್ಲಿ ಅವರ ಇಡೀ ಕುಟುಂಬ, ಆಪ್ತ ವಲಯ ಸಂಭ್ರಮದಲ್ಲಿ ಮುಳುಗಿತ್ತು. ಆದರೆ, ಇದೀಗ ಬಿಪಾಶಾ ಮತ್ತು ಕರಣ್‌ ಕುಟುಂಬಕ್ಕೆ ಕರಿ ಛಾಯೆ ಆವರಿಸಿದ್ದು, ಬಿಪಾಶಾ ದಂಪತಿ ನೋವಿನಲ್ಲಿ ಮುಳುಗಿದ್ದಾರೆ. ಅದಕ್ಕೆ ಕಾರಣ ದೇವಿಗೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ.

ಹೌದು.. ಪುಟಾಣಿ ದೇವಿ ಇದೀಗ 9 ತಿಂಗಳ ಮಗು. ಇದೇ ದೇವಿ ಹುಟ್ಟಿದ ಮೂರು ದಿನದವಳಿದ್ದಾಗ, ಪುಟಾಣಿಯ ಹೃದಯದಲ್ಲಿ ಎರಡು ರಂಧ್ರಗಳಿರುವುದು ಪತ್ತೆಯಾಗಿತ್ತು. ಸಂತೋಷದಲ್ಲಿ ತೇಲುತ್ತಿದ್ದ ಬಿಪಾಶಾ ದಂಪತಿಯ ನಗು ಮಾಸಿತ್ತು. ಇದೀಗ ಆ ವಿಚಾರವನ್ನು ತಾಯಿ ಬಿಪಾಶಾ ಬಸು ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದು ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಹೌದು.. ದೇವಿ ಹುಟ್ಟಿದ ಮೂರನೇ ದಿನವೇ ಮಗಳ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂದು ವೈದ್ಯರು ಹೇಳಿದ್ದರು ಎಂದು ನಟಿ ಬಿಪಾಶಾ ಬಸು ಹೇಳಿದ್ದಾರೆ. ಇದರೊಂದಿಗೆ ಪ್ರತಿ ತಿಂಗಳು ಮಗಳ ಸ್ಕ್ಯಾನ್ ಮಾಡಲಾಗುವುದು ಇದರಿಂದ ರಂಧ್ರಗಳು ತಾವಾಗಿಯೇ ಗುಣವಾಗುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು ಎಂದು ವೈದ್ಯರು ಹೇಳಿದ್ದರು. ಆದರೀಗ ಈ ರಂಧ್ರಗಳು ತುಂಬಾ ದೊಡ್ಡದಾಗಿದ್ದು, ಅವುಗಳನ್ನು ಸ್ವಂತವಾಗಿ ತುಂಬಲು ಸಾಧ್ಯವಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ ಎಂದು ಬಿಪಾಶಾ ಬಸು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

“ನನಗೆ ಬಂದ ಸ್ಥಿತಿ ಯಾವ ತಾಯಿಗೂ ಬರಬಾರದು ಅಂತ ಹಾರೈಸ್ತೀನಿ. ನನ್ನ ಮುಖದಲ್ಲಿದ್ದ ನಗುವಿಗಿಂತ ಜಾಸ್ತಿ ಒಳಗಡೆ ನೋವಿತ್ತು. ನಮ್ಮ ಮಗಳ ಹೃದಯದಲ್ಲಿ ಎರಡು ಹೋಲ್ ಇತ್ತು, ventricular septal defect ಅಂದರೆ ಏನು ಅಂತ ಗೊತ್ತಿರಲಿಲ್ಲ. ಈ ಸಮಸ್ಯೆಯನ್ನು ಕುಟುಂಬದ ಜೊತೆ ನಾವು ಚರ್ಚೆ ಮಾಡಲೇ ಇಲ್ಲ. ನಮ್ಮಿಬ್ಬರಿಗೂ ಮಂಕು ಬಡಿದ ಹಾಗೆ ಆಗಿತ್ತು. ಮಗಳು ಹುಟ್ಟಿದಳು ಎನ್ನೋದನ್ನು ಸೆಲೆಬ್ರೇಟ್ ಮಾಡಬೇಕಿತ್ತು, ಆದರೆ ಈ ಸಮಸ್ಯೆಯಿತ್ತು. ಆರಂಭದ ಐದು ತಿಂಗಳು ನಮಗೆ ತುಂಬ ಕಷ್ಟ ಆಗಿತ್ತು, ಆದರೆ ದೇವಿ ಮೊದಲ ದಿನದಿಂದಲೂ ಚೆನ್ನಾಗಿದ್ದಳು” ಎಂದು ಬಿಪಾಶಾ ಬಸು ಹೇಳಿದ್ದಾರೆ.

ಜೊತೆಗೆ ಇಷ್ಟು ಚಿಕ್ಕ ಮಗುವನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಹೇಗೆ ಎಂದು ನಮಗೆ ತುಂಬಾ ದುಃಖ ಆಗುತ್ತಿದ್ದು, ಈ ಕುರಿತು ಅಸಮಾಧಾನ ಕಾಡುತ್ತಿದೆ. ದೇವಿಗೆ ಕಾಡುತ್ತಿರುವ ಸಮಸ್ಯೆ ಅದಾಗಿಯೇ ಗುಣವಾಗುತ್ತದೆ ಎಂದು ನಾವು ಭಾವಿಸುತ್ತಿದ್ದೆವು. ಮೊದಲ ಸಲ ಸ್ಕ್ಯಾನ್ ಮಾಡಲು ಹೋದಾಗ ಆಗಲಿಲ್ಲ, ಎರಡನೇ ಸಲ ಹೋದಾಗಲೂ ಆಗಲಿಲ್ಲ. ಮೂರನೇ ತಿಂಗಳಲ್ಲಿ, ನಾನು ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಶಸ್ತ್ರಚಿಕಿತ್ಸಕರು, ವೈದ್ಯರು ಮತ್ತು ಆಸ್ಪತ್ರೆಗಳೊಂದಿಗೆ ಮಾತನಾಡಿದೆ. ಪತಿ ಕರಣ್ ಸಿಂಗ್ ಗ್ರೋವರ್ ಶಸ್ತ್ರ ಚಿಕಿತ್ಸೆಗೆ ಸಿದ್ಧರಿಲ್ಲ, ಆದರೆ ಮಗಳನ್ನು ಗುಣಪಡಿಸಲೇಬೇಕು ಎಂದು ನಿರ್ಧರಿಸಿದ್ದಾಗಿಯೂ ಬಿಪಾಶಾ ಹೇಳಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *