ಬಾಡಿ ಹೋದ ಬೈಕ್ ರೇಸಿಂಗ್ ನ ಅರಳುವ ಪ್ರತಿಭೆ – ಅಪಘಾತದಲ್ಲಿ 13 ವರ್ಷದ ಶ್ರೇಯಸ್ ದುರ್ಮರಣ

ಬಾಡಿ ಹೋದ ಬೈಕ್ ರೇಸಿಂಗ್ ನ ಅರಳುವ ಪ್ರತಿಭೆ – ಅಪಘಾತದಲ್ಲಿ 13 ವರ್ಷದ ಶ್ರೇಯಸ್ ದುರ್ಮರಣ

ನ್ಯೂಸ್ ಆ್ಯರೋ‌ : ಆತ ಪ್ರತಿಭಾವಂತ ಹುಡುಗ. 13ನೇ ವಯಸ್ಸಿಗೆ ಅಪರೂಪದ ಸಾಧನೆ ಮಾಡಿದ್ದ. ಮೋಟಾರ್ ಸೈಕಲ್ ರೇಸಿಂಗ್ ನಲ್ಲಿ ಛಾಪು ಮೂಡಿಸುತ್ತಿದ್ದ ಈ ಪೋರನ ಬದುಕು ಅಂತ್ಯವಾಗಿದೆ. ಬೆಂಗಳೂರು ಮೂಲದ ಕೊಪ್ಪರಂ ಶ್ರೇಯಸ್ ಹರೀಶ್ ಚೆನ್ನೈಯಲ್ಲಿ ನಡೆದ ರೇಸಿಂಗ್ ಚಾಂಪಿಯನ್ ಶಿಪ್ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಚಿಕ್ಕ ವಯಸ್ಸಿಗೆ ರೇಸ್ ಟ್ರ್ಯಾಕ್ ನಲ್ಲಿ ಮಿಂಚು

ಶ್ರೇಯಸ್ ಶನಿವಾರ ಚೆನ್ನೈಯ ಮದ್ರಾಸ್ ಅಂತಾರಾಷ್ಟ್ರೀಯ ಸರ್ಕಿಟ್ (ಎಂ.ಐ.ಸಿ.) ನಲ್ಲಿ ಆಯೋಜಿಸಿದ್ದ ಎಂ.ಆರ್.ಎಫ್. ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದ್ದ. ಮುಂಚೂಣಿಯಲ್ಲಿ ಸಾಗುತ್ತಿದ್ದ ಆತನಿಗೆ ಅಪಘಾತ ಸಂಭವಿಸಿತ್ತು. ಈತ ಬೆಂಗಳೂರಿನ ಕೆನ್ಸರಿ ಶಾಲೆಯ ವಿದ್ಯಾರ್ಥಿ. ಉದಯೋನ್ಮುಖ ಸ್ಪರ್ಧಿಗಳ ವಿಭಾಗದಲ್ಲಿ ಟಿವಿಎಸ್ ಒನ್ ಮೇಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ.

ತಿರುವಿನಲ್ಲಿ ಆಯ ತಪ್ಪಿ ಶ್ರೇಯಸ್ ಚಲಾಯಿಸುತ್ತಿದ್ದ ಬೈಕ್ ಉರುಳಿತು. ಆತ ಧರಿಸಿದ್ದ ಹೆಲ್ಮೆಟ್ ಲಾಕ್ ಕಳಚಿತ್ತು. ಹಿಂದಿನಿಂದ ಬರುತ್ತಿದ್ದ ಇನ್ನೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿತ್ತು. ಕುಡಲೇ ರೇಸ್ ಸ್ಥಗಿತಗೊಳಿಸಿ ಆಯೋಜಕರು ಶ್ರೇಯಸ್ ನನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.

ಬಾಲ್ಯದಲ್ಲೇ ರೇಸ್ ಪಟುವಾಗುವ ಗುರಿ

ಶ್ರೇಯಸ್ ಗೆ ತನ್ನ ತಂದೆ ಹರೀಶ್ ಪರಂಧಾಮನ್ ಅವರ ಜೊತೆ ಯಮಹಾ ಬೈಕ್ ನಲ್ಲಿ ಓಡಾಡುವಾಗ ಬಾಲ್ಯದಲ್ಲೇ ರೇಸ್ ಪಟುವಾಗುವ ಕನಸು ಮೂಡಿತ್ತು. ಮಗನ ಆಸೆ ಪೂರೈಸಲು ತಂದೆಯೇ ಗುರುವಾಗಿದ್ದರು. ಕಬ್ಬನ್ ಪಾರ್ಕ್ ಗೆ ಕರೆದುಕೊಂಡು ಹೋಗಿ ಬೈಕ್ ರೈಡಿಂಗ್ ಹೇಳಿ ಕೊಡುತ್ತಿದ್ದರು. ಮಗನಿಗೆ ಬೆಂಬಲ ನೀಡಲು ಹರೀಶ್ ಫಾರ್ಮಾಸ್ಯುಟಿಕಲ್ ಕಂಪೆನಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.

11ನೇ ವಯಸ್ಸಿನಲ್ಲಿಯೇ ಭಾರತ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಗಳ ಫೆಡರೇಷನ್ ಮಾನ್ಯತೆ ಪಡೆದ ರೇಸ್ ಗಳಲ್ಲಿ ಭಾಗವಹಿಸಲು ಶ್ರೇಯಸ್ ಲೈಸನ್ಸ್ ಪಡೆದಿದ್ದ. ನಿಬಂಧನೆ ಪ್ರಕಾರ ಮರುವಿನ್ಯಾಸಗೊಳಿಸಿದ ಬೈಕ್ ಅನ್ನು ಮಾತ್ರ ರೇಸಿಂಗ್ ಟ್ರ್ಯಾಕ್ ನಲ್ಲಿ ಶ್ರೇಯಸ್ ಚಾಲನೆ ಮಾಡಬೇಕಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ಓಡಿಸುವಂತಿರಲಿಲ್ಲ. ಅಲ್ಲದೆ ಅಭ್ಯಾಸದ ಸಂದರ್ಭದಲ್ಲಿ ಜೊತೆಗೆ ಒಬ್ಬರು ಹಿರಿಯರು ಇರುವುದು ಕಡ್ಡಾಯವಾಗಿತ್ತು.

ಕೊಯಮತ್ತೂರಿನಲ್ಲಿ ನಡೆದ ಎಂ.ಆರ್.ಎಫ್. ಎಂ.ಎಂ.ಎಸ್.ಸಿ. ಎಫ್.ಎಸ್.ಸಿ.ಐ. ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲೂ ಶ್ರೇಯಸ್ ಸ್ಪರ್ಧಿಸಿದ್ದ. ಭಾರತದಲ್ಲಿ ನಡೆದ ಮಿನಿ ಜಿಪಿ ಟೈಟಲ್ ಕೂಡ ಜಯಿಸಿದ್ದ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *