ಮಧ್ಯಪ್ರದೇಶದಲ್ಲೊಂದು ಘರ್ ವಾಪ್ಸಿ ಪ್ರಕರಣ – ಹಿಂದೂ ಧರ್ಮಕ್ಕೆ ಮರಳಿದ 35 ಮುಸ್ಲಿಂ ಕುಟುಂಬಗಳು

ಮಧ್ಯಪ್ರದೇಶದಲ್ಲೊಂದು ಘರ್ ವಾಪ್ಸಿ ಪ್ರಕರಣ – ಹಿಂದೂ ಧರ್ಮಕ್ಕೆ ಮರಳಿದ 35 ಮುಸ್ಲಿಂ ಕುಟುಂಬಗಳು

ನ್ಯೂಸ್ ಆ್ಯರೋ‌ : ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 35 ಮುಸ್ಲಿಂ ಕುಟುಂಬದ 190 ಮಂದಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೇಶ ಮುಂಡನ ಮಾಡಿಸಿಕೊಂಡ ಅವರು ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ನದಿಯ ದಂಡೆಯಲ್ಲಿ ಹೋಮ, ಹವನ ಆಯೋಜಿಸಲಾಗಿತ್ತು.

ಮೂಲತಃ ಹಿಂದೂಗಳು

ವಿಶೇಷ ಎಂದರೆ ಇದೀಗ ಮತಾಂತರಗೊಂಡ ಕುಟುಂಬಗಳ 4 ತಲೆಮಾರಿನ ಹಿಂದಿನವರು ಹಿಂದೂಗಳಾಗಿದ್ದರು. ಮುಸ್ಲಿಂ ಆಗಿ ಬದಲಾಗಿದ್ದ ಆ ಕುಟುಂಬದ ಯುವ ಪೀಳಿಗೆ ಮತ್ತೆ ಹಿಂದೂ ಧರ್ಮದತ್ತ ಆಕರ್ಷಿತವಾಗಿದೆ.

ಸಂತ ಆನಂದಗಿರಿ ಮಹಾರಾಜ್ ಪ್ರಕಾರ, ಈ ಕುಟುಂಬಗಳು ಮೂಲತಃ ರತ್ಲಂ ಜಿಲ್ಲೆಯ ಅಂಬಾ ಗ್ರಾಮದವರು. ಅವರು ಕರಡಿ, ಮಂಗಗಳನ್ನು ಸಾಕಿ ಅವುಗಳನ್ನು ಪ್ರದರ್ಶಿಸಿ ಜೀವನ ಸಾಗಿಸುತ್ತಿದ್ದರು. 200 ವರ್ಷಗಳ ಹಿಂದೆ ಇಲ್ಲಿದ್ದ ಮುಸ್ಲಿಂ ಜಮೀನುದಾರರು ಇವರನ್ನು ಬಲವಂತವಾಗಿ ಮತಾಂತರಿಸಿದ್ದರಂತೆ.

ಮತಾಂತರಗೊಂಡಿದ್ದರೂ ಇವರು ತಮ್ಮ ಕುಟುಂಬ ದೇವತೆಯನ್ನು ಪೂಜಿಸುವುದನ್ನು ಬಿಟ್ಟಿರಲಿಲ್ಲ. ಚಾಮುಂಡಿ ಮಾತೆ ಈ ಸಮುದಾಯದ ಆರಾಧ್ಯ ದೇವರು. ಇದೀಗ ಅವರು ಘರ್ ವಾಪಸಿಯಾಗಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *