ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹಾಗೂ ಪತ್ನಿ ನಡುವೆ ಡೈವೋರ್ಸ್ – 18 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಿದ ಪ್ರಧಾನಿ
- ಅಂತಾರಾಷ್ಟ್ರೀಯ ಸುದ್ದಿ
- August 3, 2023
- No Comment
- 87
ನ್ಯೂಸ್ ಆ್ಯರೋ : ಮತ್ತೊಂದು ಸೆಲೆಬ್ರಿಟಿ ಜೋಡಿಯ ದಾಂಪತ್ಯ ಜೀವನ ಅಂತ್ಯವಾಗಿದ್ದು, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ತಮ್ಮ ಪತ್ನಿ ಸೋಫಿಯಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ 18 ವರ್ಷಗಳ ಸಂಬಂಧ ಮುರಿದು ಬಿದ್ದಂತಾಗಿದೆ.
ಒಪ್ಪಂದಕ್ಕೆ ಸಹಿ
51ರ ಹರೆಯದ ಟ್ರುಡೊ ಮತ್ತು 48 ವರ್ಷದ ಸೋಫಿಯಾ 2005ರ ಮೇಯಲ್ಲಿ ವಿವಾಹವಾಗಿದ್ದರು. ಸದ್ಯ ಈ ದಂಪತಿ ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನೂ ಪೂರ್ತಿಗೊಳಿಸಿದೆ.
ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಟ್ರುಡೊ ಮತ್ತು ಸೋಫಿಯಾ ಮಕ್ಕಳನ್ನು ಸುರಕ್ಷಿತ, ಉತ್ತಮ ವಾತಾವರಣದಲ್ಲಿ ಬೆಳೆಸಲು ತೀರ್ಮಾನಿಸಿದ್ದಾರೆ.
ಮುಂದಿನ ವಾರದಿಂದ ಟ್ರುಡೊ ಮತ್ತು ಸೋಫಿಯಾ ಕುಟುಂಬ ಜೊತೆಯಲ್ಲಿ ರಜೆಯನ್ನು ಕಳೆಯಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.