ಕೊನೆಗೂ ಸ್ಯಾಮ್ ಜೊತೆಗಿನ ಆ ಫೋಟೋ ಡಿಲೀಟ್ ಮಾಡಿದ ಚೈ; ಅಸಲಿಗೆ ಈ ನಡೆಗೆ ಕಾರಣವೇನು ಗೊತ್ತಾ?

ನ್ಯೂಸ್ ಆ್ಯರೋ: ಪ್ರೀತಿಸಿ ಮದುವೆ ಆಗಿದ್ದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಘೋಷಿಸುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಆದರೆ ಅಂಥದ್ದೊಂದು ಶಾಕಿಂಗ್ ಸುದ್ದಿ ಬಂದಾಗ ಬಹುತೇಕರಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಈಗ ಅದೆಲ್ಲ ಹಳೇ ವಿಷಯ ಆಗಿದೆ. ಹಾಗಿದ್ದರೂ ಕೂಡ ಸಮಂತಾ ಮತ್ತು ನಾಗ ಚೈತನ್ಯ ಅವರ ಬಗೆಗಿನ ಚರ್ಚೆ ನಿಂತಿಲ್ಲ.
ಶೀಘ್ರದಲ್ಲೇ ನಾಗ ಚೈತನ್ಯ ಅವರು ಎರಡನೇ ಮದುವೆ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಮಾಜಿ ಪತ್ನಿಯ ಕೊನೇ ಫೋಟೋವನ್ನು ಡಿಲೀಟ್ ಮಾಡಿ ಸುದ್ದಿ ಆಗಿದ್ದಾರೆ.

ನಾಗ ಚೈತನ್ಯ ಮತ್ತು ಸಮಂತಾ ಅವರು ಡಿವೋರ್ಸ್ ಪಡೆದ ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದರು. ಆದರೆ ಸಮಂತಾ ಅವರಿಗೆ ಸಂಬಂಧಿಸಿ 3 ಪೋಸ್ಟ್ಗಳು ನಾಗ ಚೈತನ್ಯ ಅವರ ಇನ್ಸ್ಟಾಗ್ರಾಮ್ ವಾಲ್ನಲ್ಲಿ ಹಾಗೆಯೇ ಇತ್ತು. ಒಂದು- ವಿಚ್ಛೇದನ ಘೋಷಿಸಿದ್ದು, ಎರಡು- ಮಜಿಲಿ ಸಿನಿಮಾದ ಪೋಸ್ಟರ್, ಮೂರು- ಸಮಂತಾ ಹಾಗೂ ನಾಗ ಚೈತನ್ಯ ಜೊತೆಯಾಗಿ ರೇಸ್ ಕಾರ್ ಜೊತೆ ನಿಂತಿದ್ದ ಫೋಟೋ.
ಮೊದಲ ಎರಡು ಫೋಟೋವನ್ನು ನಂತರದ ದಿನಗಳಲ್ಲಿ ನಾಗ ಚೈತನ್ಯ ಅವರು ಡಿಲೀಟ್ ಮಾಡಿದರು. ಆದರೆ ರೇಸ್ ಕಾರ್ ಜೊತೆ ನಿಂತಿದ್ದ ಫೋಟೋವನ್ನು ಅವರು ಡಿಲೀಟ್ ಮಾಡಿರಲಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ಇತ್ತೀಚೆಗೆ ಸಮಂತಾ ಅವರ ಅಭಿಮಾನಿಗಳು ನಾಗ ಚೈತನ್ಯಗೆ ಕ್ಲಾಸ್ ತೆಗೆದುಕೊಂಡಿದ್ದರು.
‘ಆ ಫೋಟೋವನ್ನು ಡಿಲೀಟ್ ಮಾಡಿ’ ಎಂದು ಒತ್ತಾಯಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಶೋಭಿತಾ ಜೊತೆ ಮದುವೆ ಆಗಲಿರುವ ನಾಗ ಚೈತನ್ಯ ಅವರು ಮಾಜಿ ಪತ್ನಿಯ ಆ ಕಟ್ಟಕಡೆಯ ಫೋಟೋವನ್ನು ಈಗ ಡಿಲೀಟ್ ಮಾಡಿದ್ದಾರೆ.
Leave a Comment