
ನಿಮ್ಮ ಅಕೌಂಟ್ ನಲ್ಲಿ ಇಷ್ಟು ಹಣ ಇದ್ರೆ Income Tax ನೋಟೀಸ್ ಬರುತ್ತೆ ಎಚ್ಚರ – ದಾಖಲೆ ಕೊಡದಿದ್ರೆ ಬರುತ್ತೆ ಸಂಕಷ್ಟ…!!
- ಹಣಕಾಸು
- July 13, 2023
- No Comment
- 323
ನ್ಯೂಸ್ ಆ್ಯರೋ : ಬ್ಯಾಂಕ್ ನಲ್ಲಿ ಹಣ ಡೆಪಾಸಿಟ್ ಇಡುವ ವಿಚಾರಕ್ಕೆ ಸಂಬಂಧಿಸಿ ಸರಕಾರ ನಿಯಮ ರೂಪಿಸಿದೆ. ನಿಗದಿಪಡಿಸಿದ ಮೊತ್ತ ಮೀರಿ ಡೆಪಾಸಿಟ್ ಮಾಡಿದರೆ ಇನ್ ಕಮ್ ಟ್ಯಾಕ್ಸ್ ಕಡೆಯಿಂದ ನೋಟಿಸ್ ಬರಲಿದೆ.
ಏನಿದು ನಿಯಮ?
ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಬೇಕಾದರೂ ಡೆಪಾಸಿಟ್ ಮಾಡಬಹುದು. ಆದರೆ ಒಂದು ವರ್ಷದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚು ಡೆಪಾಸಿಟ್ ಮಾಡಲು ಸೂಕ್ತ ದಾಖಲೆ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ತೆರಿಗೆ ಇಲಾಖೆಯಿಂದ ನೋಟಿಸ್ ಬರಲಿದೆ. ಇದಕ್ಕೆ ದಂಡ ಕಟ್ಟಬೇಕಾಗುತ್ತದೆ.
ಕಾರಣವೇನು?
ತೆರಿಗೆ ವಂಚನೆ ಪ್ರಕರಣಕ್ಕೆ ನಿಯಂತ್ರಣ ಹೇರಲು, ಕಪ್ಪು ಹಣವನ್ನು ಕಡಿಮೆ ಮಾಡಲು ಕೇಂದ್ರ ಕ್ಯಾಶ್ ಮಿತಿ ಹೇರಿದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.
ಈ ಮಧ್ಯೆ ಆನ್ ಲೈನ್ ಟ್ರಾನ್ಸಾಕ್ಷನ್ ಗೆ ಸರಕಾರ ಉತ್ತೇಜನ ನೀಡುತ್ತಿದೆ. 10 ವರ್ಷಗಳ ಹಿಂದೆ ಶೇ. 95ರಷ್ಟು ಇದ್ದ ಕ್ಯಾಶ್ ಟ್ರಾನ್ಸಾಕ್ಷನ್ ಇಂದು ಶೇ. 70ಕ್ಕೆ ಇಳಿದಿದೆ. ಇದನ್ನು ಮುಂದಿನ 5 ವರ್ಷಗಳಲ್ಲಿ ಶೇ. 30ಕ್ಕೆ ಇಳಿಸುವುದು ಕೇಂದ್ರದ ಗುರಿ. ನೋಟುಗಳನ್ನು ಮುದ್ರಿಸಲು ಆಗುವ ಖರ್ಚನ್ನು ಉಳಿಸುವುದು ಸರಕಾರದ ಉದ್ದೇಶ. ಒಂದು 500 ರೂ. ನೋಟನ್ನು ಮುದ್ರಿಸಲು 3 ರೂ. ಖರ್ಚಾಗುತ್ತದೆ. ಜೊತೆಗೆ ಸಾಗಾಣಿಕೆ ವೆಚ್ಚ ಬೇರೆಯದೇ ಇದೆ. ಹೀಗಾಗಿ ಸರಕಾರ ಡಿಜಿಟಲ್ ವ್ಯವವಹಾರಕ್ಕೆ ಒತ್ತು ಕೊಡಲಿದೆ.