ದಿನ ಭವಿಷ್ಯ: ಶುಭ ಸೋಮವಾರದ ರಾಶಿ ಭವಿಷ್ಯ. ಯಾವ ರಾಶಿ ಮೇಲಿದೆ ಶಿವನ ಕೃಪಾಕಟಾಕ್ಷ..!?

IMG 20240902 WA0000
Spread the love

ನ್ಯೂಸ್ ಆ್ಯರೋ : ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆಯ ದಿನವಾದ ಇಂದು ಶಿವನ ಕೃಪಾಕಟಾಕ್ಷ ಯಾವ ರಾಶಿಯ ಮೇಲಿದೆ ತಿಳಿಯೋಣ.

ಮೇಷ ರಾಶಿ: ಈ ರಾಶಿಯವರು ಇಂದು ಆಲೋಚಿಸಿ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು. ಆತುರದ ನಿರ್ಧಾರದಿಂದ ತೊಂದರೆಗೆ ಸಿಲುಕಿಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಕೆಲವು ನಷ್ಟಗಳನ್ನು ಅನುಭವಿಸಲಿದ್ದಾರೆ.

ವೃಷಭರಾಶಿ : ಈ ರಾಶಿಯವರು ಪ್ರಯಾಣದಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ. ಇಂದು ಯಾವುದೇ ಹೂಡಿಕೆಗಳನ್ನು ಮಾಡದಿರುವುದು ಉತ್ತಮ.

ಮಿಥುನ ರಾಶಿ : ರಾಶಿಯವರಿಗೆ ಇಂದು ಉದ್ಯೋಗ ಸಂಬಂಧಿ ಅಡೆತಡೆಗಳು ನಿವಾರಣೆಯಾಗಲಿದೆ. ಮುಂದಿನ ಭವಿಷ್ಯದ ಬಗ್ಗೆ ಚಿಂತೆಗೊಳಗಾಗುವಿರಿ. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒಲವು ಮೂಡಲಿದೆ.

ಕಟಕ ರಾಶಿ: ಈ ರಾಶಿಯವರು ಇಂದು ಅನಾರೋಗ್ಯದಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬಹುದು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ವಾತಾವರಣ ಸೃಷ್ಟಿಯಾಗಲಿದೆ. ಆರ್ಥಿಕ ನಷ್ಟದ ಬಗ್ಗೆ ಎಚ್ಚರಿಕೆ ವಹಿಸಬೇಕು.

ಸಿಂಹ ರಾಶಿ: ಇಂದು ಈ ರಾಶಿಯವರಿಗೆ ಧನಾಗಮನವಾಗಲಿದೆ. ಆಲಸ್ಯತನವು ನಿಮ್ಮನ್ನು ಕಷ್ಟಕ್ಕೆ ದೂಡಲಿದೆ. ಇಂದು ನಿಮಗೆ ದೂರ ಪ್ರಯಾಣದ ಯೋಗವಿದೆ.
ನೀವು ಗುರಿಯನ್ನು ಬೆನ್ನಟ್ಟಿ ಮುಂದೆ ಸಾಗುವಿರಿ.

ಕನ್ಯಾ ರಾಶಿ: ಈ ರಾಶಿಯವರಿಗೆ ಇಂದು ವ್ಯಾಪಾರ ವಹಿವಾಟಿನಲ್ಲಿ ಉತ್ತಮ ದಿನವಾಗಿದೆ. ಅಂದುಕೊಂಡ ಕಾರ್ಯಗಳು ಸುಗಮ ರೀತಿಯಲ್ಲಿ ನಡೆಯಲಿದೆ. ಇಂದು ನಿಮ್ಮ ಚಿತ್ತ ಯಶಸ್ಸಿನೆಡೆಗೆ ಇರುವುದು.

ತುಲಾ ರಾಶಿ: ಈ ರಾಶಿಯವರಿಗೆ ಎಂದು ಉದ್ಯೋಗದಲ್ಲಿ ಸಹಕಾರ ಹಾಗೂ ಬೆಂಬಲ ದೊರೆಯಲಿದೆ. ಹಣಕಾಸಿನಲ್ಲಿ ಸಾಮಾನ್ಯ ಲಾಭವಾಗಲಿದೆ. ಇಂದು ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಮಾತೇ ಮಾಣಿಕ್ಯವಾಗಲಿದೆ. ಇಂದು ನಿಮಗೆ ವ್ಯಾಪಾರ ವಹಿವಾಟಿನಲ್ಲಿ ತಕ್ಕಮಟ್ಟಿಗೆ ಲಾಭವಾಗಲಿದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.

ಧನುಸ್ಸು ರಾಶಿ: ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭದಿನವಾಗಿದೆ. ಶೈಕ್ಷಣಿಕ ವಿಚಾರದಲ್ಲಿ ಮಹತ್ತರ ಸಾಧನೆ ಮಾಡಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ. ವ್ಯವಹಾರದಲ್ಲಿ ಮುನ್ನಡೆ.

ಮಕರ ರಾಶಿ: ಇಂದು ಈ ರಾಶಿಯವರಿಗೆ ಧನ ನಷ್ಟವಾಗಲಿದೆ. ಬ್ಯಾಂಕ್ ವ್ಯವಹಾರಗಳು ಇಂದು ನಿಮ್ಮನ್ನು ಚಿಂತೆಗೆದೂಡಲಿದೆ. ಉದ್ಯೋಗ ಸ್ಥಳದಲ್ಲಿ ಮನ್ನಣೆ ದೊರೆಯಲಿದೆ.

ಕುಂಭ ರಾಶಿ: ಇಂದು ಈ ರಾಶಿಯವರು ಅಂದುಕೊಂಡ ಕಾರ್ಯ ಸರಾಗವಾಗಿ ನಡೆಯಲಿದೆ. ಅನಿರೀಕ್ಷಿತ ಲಾಭವಾಗಲಿದೆ. ಮೃತ್ ರಂಗದಲ್ಲಿ ಉತ್ತಮ ಸ್ಥಾನಮಾನವನ್ನು ಹೊಂದಲಿದ್ದೀರಿ.

ಮೀನಾ ರಾಶಿ: ಇಂದು ಈ ರಾಶಿಯವರು ಸಾಲದ ಸುಳ್ಳಿಗೆ ಸಿಲುಕಿಕೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಜಾಗೃತರಾಗಿ ಮುಂದಿನ ನಡೆಯ ನಿರ್ಧಾರವನ್ನ ಕೈಗೊಳ್ಳಬೇಕು.

Leave a Comment

Leave a Reply

Your email address will not be published. Required fields are marked *