ನಡು ರಸ್ತೆಯಲ್ಲೇ ಧಮ್ ಹೊಡೆಯುತ್ತಿರುವ ಯುವತಿಯರು! ಎತ್ತ ಸಾಗುತ್ತಿದೆ ಯುವಸಮೂಹ..? ನೆಟ್ಟಿಗರ ಆಕ್ರೋಶ
ನ್ಯೂಸ್ ಆ್ಯರೋ : ಈಗಿನ ಜನರೇಶನ್ ನ ಮಕ್ಕಳಿಗೆ ಸಿಗರೇಟ್ ಸೇದುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೌದು ಟಿವಿ ಪ್ರೋಗ್ರಂ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಗರೇಟ್ ಸೇದುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿ ಹೇಳಿದ್ರು ಕ್ಯಾರೇ ಎನ್ನುತ್ತಿಲ್ಲ ಈಗಿನ ಮಕ್ಕಳು. ಇದಕ್ಕೆ ಸಾಕ್ಷಿ ಎಂಬಂತೆ ಅದೇ ಹರಿಯದ ಹುಡುಗಿಯರು ರಸ್ತೆ ಬದಿಯಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈಗಿನ ಯುವಜನರು ಧೂಮಪಾನ ಮಧ್ಯಪಾನ ಮತ್ತು ಮಾದಕ ವಸ್ತುಗಳ ಗೀಳಿಗೆ ಬಿದ್ದು ಅದರ ದಾಸರಾಗುತ್ತಿದ್ದಾರೆ. ಈ ವಿಷಯದಲ್ಲಿ ಮಾತ್ರ ಮಕ್ಕಳು ಪೋಷಕರ ಕೈಜಾರಿ ಹೋಗುತ್ತಿದ್ದಾರೆ. ಟ್ರೆಂಡ್ ಹಾಗೂ ಫ್ಯಾಶನ್ ನ ಬಲೆಗೆ ಬಿದ್ದು, ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.
ಇದಕ್ಕೆ ಉದಾಹರಣೆ ಎನ್ನುವಂತೆ ಹದಿಹರೆಯದ ಹೈಸ್ಕೂಲ್ ಹುಡುಗಿಯರು ಬೀದಿ ಬದಿಯಲ್ಲಿ ನಿಂತು ಸ್ಟೈಲ್ ಆಗಿ ಧಮ್ ಹೊಡೆಯುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎತ್ತ ಸಾಗುತ್ತಿದೆ ಸಮೂಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ನ್ನು ಶೋನಿ ಕಪೂರ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಈ ಮಕ್ಕಳಿಗೆ ಸರಿಯಾಗಿ ಸಿಗರೇಟ್ ಸೇದಲು ಬರುವುದಿಲ್ಲ , ಆದರೂ ಸಿಗರೇಟ್ ಸೇದುತ್ತಿದ್ದಾರೆ” ಎಂದು ತಮ್ಮ ‘x’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆ. 29 ರಂದು ಈ ಪೋಸ್ಟ್ ವೈರಲ್ ಆಗಿದ್ದು, 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಜನರು ʼಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಬೇಕುʼ ಎಂದು ಆಕ್ರೋಶ ಹೊರಹಾಕಿದ್ದಾರೆ.

Leave a Comment