ಮಿಡಲ್​ ವೀಕ್ ಎಲಿಮಿನೇಷನ್; ಬಿಗ್ ಬಾಸ್ ಮನೆಯಿಂದ ಧನರಾಜ್​ ಔಟ್​ ಆಗಿದ್ದು ನಿಜಾನಾ?

Dhanaraj achar
Spread the love

ನ್ಯೂಸ್ ಆ್ಯರೋ: ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಬಿಗ್ ಬಾಸ್​ನ ಬಹುತೇಕರು ನಾಮಿನೇಟ್ ಆಗಿದ್ದರು. ಆದರೆ, ಯಾರೊಬ್ಬರೂ ಔಟ್ ಆಗಿರಲಿಲ್ಲ. ಹೀಗಾಗಿ, ಮನೆಯಲ್ಲಿ 16 ಸ್ಪರ್ಧಿಗಳ ಮಧ್ಯೆಯೇ ಕಾಂಪಿಟೇಷನ್ ಮುಂದುವರಿದಿದೆ. ಹಾಗಿದ್ದರೆ ಈ ವಾರ ಮಧ್ಯವಾರದಲ್ಲಿ ಒಬ್ಬರು ಹೋಗ್ತಾರಾ? ಮಾನಸಾ ಮಾತಿನಿಂದ ಎಲ್ಲರಲ್ಲೂ ಹೀಗೊಂದು ಅನುಮಾನ ಮೂಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂರನೇ ವಾರದಲ್ಲಿ ಫೋನ್​ಬೂತ್ ಬಂದಿದೆ. ಇದರ ಮೂಲಕ ಬಿಗ್ ಬಾಸ್ ಮಾತನಾಡುತ್ತಿದ್ದಾರೆ. ವಿಶೇಷ ಎಂದರೆ ತುಕಾಲಿ ಸಂತೋಷ್ ಕರೆ ಮಾಡಿ ಪತ್ನಿ ಮಾನಸಾ ಬಳಿ ಮಾತನಾಡಿ, ಕೆಲವು ಸ್ಪರ್ಧಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ. ಈ ಕಿವಿಮಾತನ್ನು ಸ್ಪರ್ಧಿಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಈ ಸಮಯವನ್ನು ಮಾನಸಾ ಎನ್​ಕ್ಯಾಚ್ ಮಾಡಿಕೊಂಡಿದ್ದಾರೆ.

ಭವ್ಯಾ, ರಂಜಿತ್, ತ್ರಿವಿಕ್ರಂ ಮೊದಲಾದವರಿಗೆ ಕಿವಿಮಾತನ್ನು ಹೇಳಲಾಗಿತ್ತು. ಇದನ್ನು ಹೋಗಿ ತಲುಪಿಸಿದರು ಮನಾಸಾ. ಆದರೆ, ಧನರಾಜ್ ಆಟದ ಬಗ್ಗೆ ಯಾವುದೇ ಸೂಚನೆ ಬಂದಿರಲಿಲ್ಲ. ಆದರೂ ಮನಾಸಾ ಅವರೇ ಒಂದು ಕಥೆ ಕಟ್ಟಿ ಹೇಳಿದರು. ಅವರ ಮಾತನ್ನು ಕೇಳಿ ಧನರಾಜ್ ಶಾಕ್ ಆದರು. ‘ಧನು ನಿನಗೊಂದು ವಿಷಯ ಬಂತು. ಎಲ್ಲರ ಮುಂದೆ ಹೇಳಲಾ’ ಎಂದು ಕೇಳಿದರು ಮಾನಸಾ. ಇದಕ್ಕೆ ಓಕೆ ಎಂದರು ಧನರಾಜ್. ‘ಲಗೇಜ್ ಪ್ಯಾಕ್ ಮಾಡಬೇಕಂತೆ. ವಾರದ ಕೊನೆವರೆಗೆ ನೀನು ಇರಲ್ವಂತೆ. ಮಿಡಲ್ ಎಲಿಮಿನೇಷನ್ ಅಂತ ಹೋಗಬಹುದುಂತೆ. ಈಗಲೇ ಬಟ್ಟೆ ಪ್ಯಾಕ್ ಮಾಡಬೇಕಂತೆ. ಬಿಗ್ ಬಾಸ್ ಗಂಭೀರವಾಗಿ ಹೇಳಿದ್ದಾರೆ’ ಎಂದರು ಮಾನಸಾ. ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಯಿತು. ಆ ಬಳಿಕ ಮಾನಸಾ ಅವರು, ‘ಇದನ್ನು ನಾನೇ ಹೇಳಿದ್ದು, ಬಿಗ್ ಬಾಸ್ ಹೇಳಿಲ್ಲ’ ಎಂದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು.

ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಪ್ರಯೋಗಳು ಭಿನ್ನವಾಗಿವೆ. ಈ ವಾರ ಬಿಗ್ ಬಾಸ್​ ಮನೆಗೆ ಫೋನ್​ಬೂತ್ ಬಂದಿದೆ. ಇದರ ಜೊತೆಯೂ ಎಲಿಮಿನೇಷ್ ಪ್ರಕ್ರಿಯೆಯೂ ಭಿನ್ನವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧನರಾಜ್ ಅವರು ಅಷ್ಟು ಹೈಲೈಟ್ ಆಗುತ್ತಿಲ್ಲ. ಅವರು ಡಲ್ ಆಗಿದ್ದಾರೆ. ಇದಕ್ಕೆ ಕಾರಣ ಹಲವು. ಈಗ ಧನರಾಜ್ ಅವರು ಕಣ್ಣೀರು ಹಾಕಿದ್ದಾರೆ. ಅವರು ಗೊಂದಲದಲ್ಲಿದ್ದಾರೆ ಎನ್ನುವ ಕಾರಣ ನೀಡಿ ಶಿಶಿರ್, ಧನರಾಜ್​​ನ ನಾಮಿನೇಟ್ ಮಾಡಿದ್ದಾರೆ. ಇದರಿಂದ ಅವರು ಕಣ್ಣೀರು ಹಾಕಿದ್ದಾರೆ. ‘ನಾನು ಅನ್​ಫಿಟ್ ಅನಿಸುತ್ತಿದೆ’ ಎಂದಿದ್ದಾರೆ ಧನರಾಜ್. ಹೀಗಾಗಿ ಮಿಡಲ್​ ವೀಕ್ ಎಲಿಮಿನೇಷನ್ ನಲ್ಲಿ ಧನರಾಜ್‌ ಅವರು ಎಲಿಮಿನೇಟ್‌ ಆಗೋದು ಪಕ್ಕಾ ಅಂತಾ ಹೇಳಲಾಗ್ತಿದೆ.

Leave a Comment

Leave a Reply

Your email address will not be published. Required fields are marked *

error: Content is protected !!