ಮಿಡ್ ವೀಕ್ ಶಾಕಿಂಗ್ ಎಲಿಮಿನೇಷನ್ ಬಿಸಿ ಯಾರಿಗೆ ?; ಮಧ್ಯದಲ್ಲೇ ತಡೆಹಿಡಿಯಲು ಅಸಲಿ ಕಾರಣ ರಿವೀಲ್
ನ್ಯೂಸ್ ಆ್ಯರೋ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಹೀಗಾಗಿ ಯಾವ 5 ಸ್ಪರ್ಧಿಗಳು ಫೈನಲಿಸ್ಟ್ ಆಗಲಿದ್ದಾರೆ ಅಂತ ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಇದರ ಮಧ್ಯೆ ಏಕಾಏಕಿ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯನ್ನು ಬಿಗ್ಬಾಸ್ ತಡೆ ಹಿಡಿದಿದ್ದರು. ಇದೀಗ ಇದಕ್ಕೆ ಕಾರಣ ಏನು ಅಂತ ಬಿಗ್ಬಾಸ್ ರಿವೀಲ್ ಮಾಡಿದ್ದಾರೆ.
109ನೇ ದಿನಕ್ಕೆ ಕಾಲಿಟ್ಟಿರೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಹೊತ್ತಲ್ಲಿ ಮತ್ತೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿ ಮತ್ತೆ ಟಾಸ್ಕ್ನಲ್ಲಿ ಮೋಸ ಮಾಡಿದ್ದು ಬೆಳಕಿಗೆ ಬಂದಿದೆ. ಇದೇ ವಿಚಾರಕ್ಕೆ ನಿನ್ನೆಯ ಮಿಡ್ ವೀಕ್ ಎಲಿಮಿನೇಷನ್ ಅನ್ನು ತಡೆ ಹಿಡಿದಿದ್ದರು ಬಿಗ್ಬಾಸ್. ಇದೀಗ ಅದಕ್ಕೆ ಕಾರಣ ಕೂಡ ಬಿಚ್ಚಿಟ್ಟಿದ್ದಾರೆ. ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ನಾಮಿನೇಷನ್ ಟಾಸ್ಕ್ನಲ್ಲಿ ಧನರಾಜ್ ಆಚಾರ್ಯ ಮೋಸ ಮಾಡಿದ್ದಾರೆ. ಟಾಸ್ಕ್ನಲ್ಲಿ ಮೋಸ ಮಾಡಿದ್ದ ವಿಡಿಯೋವನ್ನು ಬಿಗ್ಬಾಸ್ ರಿವೀಲ್ ಮಾಡಿದ್ದಾರೆ. ಹೀಗಾಗಿ ಧನರಾಜ್ ಅವರನ್ನು ಬಿಗ್ ಬಾಸ್ ಹೊರ ಕಳುಹಿಸುತ್ತಾರೋ ಕಾದು ನೋಡಬೇಕಿದೆ. ಇನ್ನು ಈ ಹಿಂದೆ ಭವ್ಯ ಗೌಡ ಕೂಡಾ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಮೋಸದಾಟವಾಡಿ ಶಿಕ್ಷೆಗೆ ಗುರಿಯಾಗಿದ್ರು.
ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿತ್ತು. ನಾಮಿನೇಷನ್ನಿಂದ ಪಾರಾಗಲು ಬಿಗ್ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಜೊತೆಗೆ ವಾರದ ಕೊನೆಯಲ್ಲಿ ಸ್ಪರ್ಧಿಗಳಿಗೆ ಬಿಗ್ಬಾಸ್ ಎಚ್ಚರಿಕೆ ಕೊಟ್ಟಿದ್ದರು. ಬಿಗ್ಬಾಸ್ ಕೊಟ್ಟ ಟಾಸ್ಕ್ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ನಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.
ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್ನಲ್ಲಿ ಧನರಾಜ್ ಆಚಾರ್ಯ ಗೆದ್ದುಕೊಂಡು ಈ ವಾರದ ನಾಮಿನೇಷನ್ನಿಂದ ಸೇಫ್ ಆಗಿದ್ದರು. ಇದೀಗ ಬಿಗ್ಬಾಸ್ ಕೊಟ್ಟ ಕೊನೆಯ ಟಾಸ್ಕ್ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಪಜಲ್ ಗೇಮ್ ಆಡಿದ್ದು ಬೆಳಕಿಗೆ ಬಂದಿದೆ. ಹೀಗಾಗಿ ಬಿಗ್ಬಾಸ್ ಮಿಡ್ ವೀಕ್ ಎಲಿಮಿನೇಷನ್ ತಡೆ ಹಿಡಿದಿದ್ದರು.
ಈ ಬಗ್ಗೆ ಖುದ್ದು ಬಿಗ್ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಬಿಗ್ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಬಿಗ್ಬಾಸ್ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಲಿಲ್ಲ. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಪ್ಲಿಸ್ ಅಂತ ಬೇಡಿಕೊಂಡಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಬಿಗ್ಬಾಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಿದೆ.
Leave a Comment