ಕೆಲವೇ ಗಂಟೆಗಳಲ್ಲಿ ಮುಗಿಲು ಮುಟ್ಟಲಿದೆ ಹೊಸ ವರ್ಷದ ಸಂಭ್ರಮ; ವರ್ಷಾಚರಣೆ ಆಹ್ವಾನದ ಜೊತೆಗೆ ಕಾಂಡೋಮ್ ನೀಡಿದ ಪಬ್

Pub
Spread the love

ನ್ಯೂಸ್ ಆ್ಯರೋ: ಇಡೀ ಜಗತ್ತು ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ಕೆಲವೇ ಗಂಟೆಗಳಲ್ಲಿ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಲಿದೆ. ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಸಂಭ್ರಮ ಹೆಚ್ಚಾಗಿದೆ. ಹೊಸ ವರ್ಷ ಸ್ವಾಗತಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರವಾಸಿ ತಾಣಗಳು, ಹೋಟೆಲ್​ಗಳಲ್ಲಿ, ಪಬ್, ಬಾರ್​ಗಳಲ್ಲಿ ಹೊಸ ವರ್ಷಾಚರಣೆಗೆ ಜನ ಸಜ್ಜಾಗಿದ್ದಾರೆ.

ಇದೆಲ್ಲದರ ನಡುವೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ಮಹಾರಾಷ್ಟ್ರದ ಪುಣೆಯ ಪಬ್ ಒಂದು ಹೊಸ ವರ್ಷಾಚರಣೆಗೆ ಆಹ್ವಾನಿತರಿಗೆ ಆಹ್ವಾನ ಪತ್ರಿಕೆ ಜೊತೆಗೆ ಕಾಂಡೋಮ್ ನೀಡಿದ್ದು ಬೆಳಕಿಗೆ ಬಂದಿದೆ. ಪುಣೆಯ ಮುಂಧ್ವಾದಲ್ಲಿರುವ ಹೈ-ಸ್ಪಿರಿಟ್ ಪಬ್​, ಕಾಂಡೋಮ್ ಮತ್ತು ಓಆರ್​ಎಸ್​ಪ್ಯಾಕೆಟ್ ವಿತರಿಸಿದೆ.

ಹಳೆಯ ವರ್ಷಕ್ಕೆ ವಿದಾಯ ಹೇಳಲು, ಹೊಸವರ್ಷ ಸ್ವಾಗತಿಸಲು ಪುಣೆ, ಸುತ್ತಲಿನ ಯುವಕರು ಪಬ್​ಗಳಿಗೆ ಹೋಗುತ್ತಾರೆ. ಪುಣೆಯ ಹೈ-ಸ್ಪಿರಿಟ್ ಪಬ್ ಅಡ್ವಾನ್ಸ್ ಬುಕಿಂಗ್ ಮಾಡಿದವರಿಗೆ ಕೆಲವು ಪಾಕೆಟ್​ಗಳನ್ನು ಕಳಿಸಿದೆ. ಅದರಲ್ಲಿ ಕಾಂಡೋಮ್ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಬ್​ ಕಾಂಡೋಮ್ ವಿತರಿಸಿದ ವಿಡಿಯೋ ವೈರಲ್ ಬಳಿಕ ಮಹಾರಾಷ್ಟ್ರ ಕಾಂಗ್ರೆಸ್ ಯುವ ಘಟಕ ಪೊಲೀಸರಿಗೆ ದೂರು ನೀಡಿ, ಪಬ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಪಬ್​, ನೈಟ್ ಲೈಫ್ ವಿರೋಧಿಗಳು ನಾವಲ್ಲ. ಆದರೆ ಯುವ ಸಮುದಾಯವನ್ನು ಸೆಳೆಯಲು ದಾರಿ ತಪ್ಪಿಸುವ ಮಾರ್ಕೆಟಿಂಗ್ ತಂತ್ರ ಮಾಡುತ್ತಿರುವ ಪಬ್​ ನಿಂದ ಪುಣೆ ಸಂಸ್ಕೃತಿ ಹಾಳಾಗುತ್ತದೆ ಅಂತ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೈ-ಸ್ಪಿರಿಟ್ ಪಬ್, ಯುವಕರಲ್ಲಿ ಜಾಗೃತಿ ಮೂಡಿಸಲು ಈ ನಿರ್ಧಾರ ಮಾಡಿದ್ದೇವೆ. ಕಾಂಡೋಮ್ ಹಂಚುವುದು ಅಪರಾಧವಲ್ಲ ಅಂತ ಸ್ಪಷ್ಟನೆ ನೀಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!