Srilankan Biriyani Recipe : ನೀವು ಶ್ರೀಲಂಕಾ ಶೈಲಿಯ ಬಿರಿಯಾನಿ ಟೇಸ್ಟ್‌ ಮಾಡಿದ್ದೀರಾ? – ಈ ರೆಸಿಪಿಯನ್ನು ಫಾಲೋ ಮಾಡಿ, ರುಚಿ ರುಚಿ ಬಿರಿಯಾನಿ ತಿನ್ನಿ..

Srilankan Biriyani Recipe : ನೀವು ಶ್ರೀಲಂಕಾ ಶೈಲಿಯ ಬಿರಿಯಾನಿ ಟೇಸ್ಟ್‌ ಮಾಡಿದ್ದೀರಾ? – ಈ ರೆಸಿಪಿಯನ್ನು ಫಾಲೋ ಮಾಡಿ, ರುಚಿ ರುಚಿ ಬಿರಿಯಾನಿ ತಿನ್ನಿ..

ನ್ಯೂಸ್ ಆ್ಯರೋ : ನೀವು ದಮ್‌ ಬಿರಿಯಾನಿ, ದೊನ್ನೆ ಬಿರಿಯಾನಿ, ಹೈದ್ರಾಬಾದ್‌ ಬಿರಿಯಾನಿ ಹೀಗೆ ಅನೇಕ ರುಚಿಯ ಬಿರಿಯಾನಿ ಸವಿದಿರುತ್ತೀರಿ. ಆದರೆ ಶ್ರೀಲಂಕಾ ಶೈಲಿಯ ಬಿರಿಯಾನಿ (Srilankan Biriyani Recipe) ಟೇಸ್ಟ್‌ ಮಾಡಿದ್ದೀರಾ? ಅದಕ್ಕಾಗಿ ಶ್ರೀಲಂಕಾಕ್ಕೆ ಹೋಗ ಬೇಕಾಗಿಲ್ಲ, ಈ ರೆಸಿಪಿಯನ್ನು ಫಾಲೋ ಮಾಡಿದರೆ ಸಾಕು.

ನೀವು ಬಿರಿಯಾನಿ ಪ್ರಿಯರಾಗಿದ್ದರೆ ಈ ಶ್ರೀಲಂಕಾ ಶೈಲಿಯ ಬಿರಿಯಾನಿ ಟ್ರೈ ಮಾಡಿ. ತೆಂಗಿನಕಾಯಿ ಹಾಲು ಬಳಸಿ ಮಾಡುವ ಈ ಬಿರಿಯಾನಿ ಸಕತ್ ಟೇಸ್ಟಿಯಾಗಿದ್ದು, ಇದನ್ನು ಮಾಡುವ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿ

  • ಮಟನ್‌ ಪೀಸ್‌ ಅರ್ಧ ಕೆಜಿ
  • ವಿನೆಗರ್‌ 1 ಚಮಚ
  • 1 ಚಮಚ ಉಪ್ಪು
  • ಕೊತ್ತಂಬರಿ ಬೀಜ 2 ಚಮಚ
  • ಜೀರಿಗೆ 2 ಚಮಚ
  • ಕಾಳುಮೆಣಸು 1 ಚಮಚ
  • ಕರಿಬೇವಿನ ಎಲೆ
  • ಏಲಕ್ಕಿ 6
  • ಲವಂಗ 4
  • ತೆಂಗಿನಕಾಯಿ 1
  • ಬಾಸ್ಮತಿ ಅಕ್ಕಿ 4 ಕಪ್
  • ಉಪ್ಪು 2 ಚಮಚ (ರುಚಿಗೆ ತಕ್ಕ ತಕ್ಕಷ್ಟು)
  • ತುಪ್ಪ ಅರ್ಧ ಕಪ್
  • ಗೋಡಂಬಿ 2 ಚಮಚ
  • ಒಣದ್ರಾಕ್ಷಿಗಳು 2 ಚಮಚ
  • ಈರುಳ್ಳಿ1 ಕಪ್
  • ಬೆಣ್ಣೆ 1 ಚಮಚ
  • ಏಲಕ್ಕಿ, ಲವಂಗ, ಚಕ್ಕೆ (ಈ ಮೂರನ್ನು ಪುಡಿ ಮಾಡಿ)
  • ಬೇಯಿಸಿದ ಮೊಟ್ಟೆ 4

ಮಾಡುವ ವಿಧಾನ:

  • ಮಟನ್‌ ಅನ್ನು ವಿನೆಗರ್ ಹಾಗೂ ಉಪ್ಪಿನ ಜತೆ ಮಿಕ್ಸ್ ಮಾಡಿ ಇಡಿ. ನಂತರ ಸೆಕ್ಷನ್‌ ಎ ಭಾಗದಲ್ಲಿ ನೀಡಿರುವ ಉಳಿದ ಪದಾರ್ಥಗಳನ್ನು ಪುಡಿ ಮಾಡಿಡಿ.
  • ಮಟನ್‌ ಅನ್ನು ಒಂದು ಬದಿಯಲ್ಲಿಡಿ.
  • ತೆಂಗಿನಕಾಯಿಯನ್ನು ತುರಿದು 2 ಕಪ್ ಹಾಲು ತೆಗೆಯಿರಿ.
  • ಅಕ್ಕಿಯನ್ನು ತೊಳೆದು ಅದರ ನೀರು ಸೋಸಿ ಇಡಿ. ಅದಕ್ಕೆ 2 ಕಪ್ ತೆಂಗಿನಕಾಯಿ ಹಾಲು, 5 ಕಪ್ ನೀರು ಹಾಕಿ, ನಂತರ ರುಚಿಗೆ ತಕ್ಕ ಉಪ್ಪು ಹಾಕಿ. ನಂತರ ಬೇಯಿಸಿ. ಬೆಂದ ಅನ್ನವನ್ನು ಒಂದು ಪಾತ್ರೆಯಲ್ಲಿ ಹರಡಿ ಇಡಿ.
  • ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಗೋಡಂಬಿ. ದ್ರಾಕ್ಷಿಯನ್ನು ಹುರಿದು ಇಡಿ.
  • ಈಗ ಪ್ಯಾನ್‌ನಲ್ಲಿ ಉಳಿದ ತುಪ್ಪಕ್ಕೆ ಕರಿಬೇವಿನ ಎಲೆ ಹಾಗೂ ಈರುಳ್ಳಿ ಹಾಕಿ ಫ್ರೈ ಮಾಡಿ.
  • ಈಗ ಮಟನ್‌ಗೆ 1 ಕಪ್ ನೀರು ಹಾಕಿ ಬೇಯಿಸಿ, ಮಟನ್ ಡ್ರೈಯಾಗಲಿ
  • ಈಗ ಬೆಂದ ಮಟನ್‌ಗೆ ಬೇಯಿಸಿದ ಅನ್ನ ಹಾಕಿ , ಮಂದವಾದ ತೆಂಗಿನಕಾಯಿ ಹಾಲು ಹಾಕಿ, ನಂತರ ಪುಡಿ ಮಾಡಿಟ್ಟ ಪೌಡರ್ ಉದುರಿಸಿ ಮೆಲ್ಲನೆ ಮಿಕ್ಸ್ ಮಾಡಿ.
  • ಈಗ ಬೆಣ್ಣೆ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 8-10 ನಿಮಿಷ ಬೇಯಿಸಿ.

ಈಗ ಬಿರಿಯಾನಿಯನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ, ಅದರ ಮೇಲೆ ಹುರಿದ ಗೋಡಂಬಿ, ದ್ರಾಕ್ಷಿ, ಮೊಟ್ಟೆಯನ್ನು ಇಟ್ಟು ಅಲಂಕರಿಸಿದರೆ ಶ್ರೀಲಂಕಾ ಶೈಲಿಯ ಬಿರಿಯಾನಿ ರೆಡಿ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *