Chicken Green Kebab : ಬಾಯಲ್ಲಿ ನೀರೂರಿಸುವ ಗ್ರೀನ್‌ ಚಿಕನ್‌ ಕಬಾಬ್‌ ರೆಸಿಪಿ – ಇದನ್ನು ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ.

Chicken Green Kebab : ಬಾಯಲ್ಲಿ ನೀರೂರಿಸುವ ಗ್ರೀನ್‌ ಚಿಕನ್‌ ಕಬಾಬ್‌ ರೆಸಿಪಿ – ಇದನ್ನು ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ.

ನ್ಯೂಸ್ ಆ್ಯರೋ : ಚಿಕನ್‌ ಕಬಾಬ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…ಜಸ್ಟ್‌ ಕಬಾಬ್‌ ಅಂದ ಕ್ಷಣ ಎಲ್ಲಾ ಮಾಂಸಾಹಾರಿಗಳ ಬಾಯಲ್ಲೂ ನೀರು ಬರುತ್ತೆ. ಮನೆಯಲ್ಲಿ ದೊಡ್ಡವರಿಗಷ್ಟೇ ಅಲ್ಲ ಚಿಕ್ಕ ಮಕ್ಕಳಿಗೂ ಕಬಾಬ್‌ ಅಂದ್ರೆ ಪಂಚಪ್ರಾಣ. ಆದರೆ ಗ್ರೀನ್ ಚಿಕನ್ ಕಬಾಬ್ ನಾರ್ಮಲ್‌ ಕಬಾಬ್‌ ಗೂ ಟೇಸ್ಟ್‌ ನಲ್ಲಿ ಭಿನ್ನವಾಗಿದೆ. ಅದರಲ್ಲೂ ಇದು ಸ್ವಲ್ಪ ಮಟ್ಟಿಗೆ ಸ್ಪೈಸಿ ಇದ್ದು ಇಷ್ಟಪಡುವವರು ನಾಲಿಗೆ ಚಪ್ಪರಿಸಿ ತಿನ್ನಬಹುದು.

ಹಾಗಾದರೆ ಈ ಗ್ರೀನ್‌ ಚಿಕನ್‌ ಕಬಾಬ್‌ ರೆಸಿಪಿ ಮಾಡುವ ವಿಧಾನ ಹೇಗೆ? ಇದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುವು? ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಚಿಕನ್‌-ಅರ್ಧ ಕೆ.ಜಿ., ಬೆಳ್ಳುಳ್ಳಿ-10ಎಸಳು, ಕಾಳುಮೆಣಸು-8ರಿಂದ10, ಹಸಿಮೆಣಸು-5, ಶುಂಠಿ, ಪುದೀನಾ ಸೊಪ್ಪು-1/4 ಕಟ್ಟು, ಕೊತ್ತಂಬರಿ ಸೊಪ್ಪು-ಅರ್ಧ ಕಟ್ಟು, ಕಾನ್‌ಪೌಡರ್‌-3ಚಮಚ, ಲಿಂಬೆ-1, ಮೊಟ್ಟೆ-1, ಎಣ್ಣೆ(ಕರಿಯಲು), ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

  • ಮೊದಲಿಗೆ ಚಿಕನ್‌ ಅನ್ನು ಕಬಾಬ್‌ ಅಳತೆಗೆ ಕತ್ತರಿಸಿ, ಶುಚಿಯಾಗಿ ನೀರಿನಲ್ಲಿ ತೊಳೆದಿಟ್ಟುಕೊಂಡು ಅದರಲ್ಲಿನ ನೀರಿನಾಂಶ ಇರದಂತೆ ಮಾಡಿಕೊಳ್ಳಿ.
  • ಒಂದು ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕಳುಮೆಣಸು, ಪುದೀನಾ, ಕೊತ್ತಂಬರಿ ಸೊಪ್ಪು ಎಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ತೊಳೆದಿಟ್ಟ ಚಿಕನ್‌ ಗೆ ಲಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ,ಮೊಟ್ಟೆ, ಕಾರ್ನ್ ಪೌಡರ್‌ ಮತ್ತು ಮಾಡಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಅರ್ಧ ಗಂಟೆಗಳ ಕಾಲ ಮ್ಯಾರಿನೇಟ್‌ ಆಗಲು ಬಿಡಿ.
  • -ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದನಂತರ ಮ್ಯಾರಿನೇಟ್‌ ಆದ ಚಿಕನ್‌ನನ್ನು ಒಂದೊಂದಾಗಿ ಎಣ್ಣೆಗೆ ಹಾಕಿರಿ.
  • ಕೆಲ ನಿಮಿಷಗಳ ಕಾಲ ಚಿಕನ್‌ ಬೇಯುವವರೆಗೂ ಎಣ್ಣೆಯಲ್ಲಿ ಕರಿಯಿರಿ.

ನಂತರ ಒಂದು ಪ್ಲೇಟ್‌ ಗೆ ಹಾಕಿ ಮೇಯನೇಸ್ ಜೊತೆ ತಿನ್ನಿ, ಬಹಳ ರುಚಿಯಾಗಿರುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *