ಬಹುನಿರೀಕ್ಷಿತ ಹ್ಯುಂಡೈ ಎಕ್ಸ್ಟೀರ್ ಎಸ್.ಯು.ವಿ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ – ಟಾಟಾ ಕಂಪೆನಿಗೆ ಸವಾಲೊಡ್ಡಿರುವ ಈ ಕಾರಿನ ತಂತ್ರಜ್ಞಾನ ಹೇಗಿದೆ‌ ಗೊತ್ತಾ?

ಬಹುನಿರೀಕ್ಷಿತ ಹ್ಯುಂಡೈ ಎಕ್ಸ್ಟೀರ್ ಎಸ್.ಯು.ವಿ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ – ಟಾಟಾ ಕಂಪೆನಿಗೆ ಸವಾಲೊಡ್ಡಿರುವ ಈ ಕಾರಿನ ತಂತ್ರಜ್ಞಾನ ಹೇಗಿದೆ‌ ಗೊತ್ತಾ?

Hyundai Exter : ಹ್ಯುಂಡೈ ಕಂಪನಿಯ ಹೊಸ ಎಸ್‌ಯುವಿ ಎಕ್ಸ್‌ಟೀರ್‌ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಇದು ಕಂಪನಿಯ ಅಗ್ಗದ ಎಸ್‌ಯುವಿ. ಈ ಕಾರಣದಿಂದ ದೇಶದ ಎಸ್‌ಯುವಿ ಪ್ರಿಯರು ಈ ಕಾರಿನ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. 2022ರಲ್ಲಿ ಈ‌ ಕಂಪೆನಿಯ ಅಗ್ರ ಸ್ಥಾನವನ್ನು ಟಾಟಾ ಮೋಟಾರ್ಸ್‌ ತನ್ನದಾಗಿಸಿಕೊಂಡಿತ್ತು.

ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ಎಸ್‌ಯುವಿ ಮಾರಾಟ ಮಾಡುತ್ತಿದೆ. ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿ ತಾನು ಕಳೆದುಕೊಂಡ ಸ್ಥಾನವನ್ನು ನೂತನ ಕಾರಿನ ಮೂಲಕ ವಾಪಸ್‌ ಪಡೆಯಲು ಹ್ಯುಂಡೈ ನಿರ್ಧರಿಸಿದ್ದು ಇದರ ವಿಶೇಷತೆಗಳನ್ನು ನೋಡೋಣ.

  1. ಈ ಕಾರಿನ ಮಾರುಕಟ್ಟೆ ದರ ಎಷ್ಟು?

ಮೂಲಗಳ ಪ್ರಕಾರ ಈ ಕಾರಿನ ಬೆಲೆ 6 ರಿಂದ 9 ಲಕ್ಷದ ನಡುವೆ ಇರಲಿದೆ. ಇದು ಎಕ್ಸ್ ಶೋರೂಂ ದರವಾಗಿದ್ದು, ಆನ್ ರೋಡ್ ದರ ಟಾಪ್ ಎಂಡ್ ಮಾಡೆಲ್ ಗೆ 10 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಈ ನೂತನ ಹ್ಯುಂಡೈ ಎಕ್ಸ್‌ಟೀರ್‌ ಎಸ್‌ಯುವಿ ಇಎಕ್ಸ್‌, ಎಸ್‌, ಎಸ್‌ಎಕ್ಸ್‌ ಇತ್ಯಾದಿ ಐದು ಟ್ರಿಮ್‌ಗಳಲ್ಲಿ ಹಾಗೂ 14 ಆವೃತ್ತಿಗಳಲ್ಲಿ ಲಭ್ಯವಿರಲಿದೆ.

2.ಹೊರಮೈ ವಿನ್ಯಾಸ ಹೇಗಿದೆ?

ಕಂಪೆನಿ‌ ಈಗಾಗಲೇ ಬಿಡುಗಡೆ ಮಾಡಿರುವ ಕಾರಿನ ಅಧಿಕೃತ ಫೋಟೋಗಳ ಆಧಾರದಲ್ಲಿ‌ ಹೇಳುವುದಾದರೆ, ಪ್ಯಾರಾಮೆಟ್ರಿಕ್‌ ಗ್ರಿಲ್‌ಗಳು, ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ಗಳು, ಎಚ್‌ ಸಿಗ್ನೆಚರ್‌ ಎಲ್‌ಇಡಿ ಡಿಆರ್‌ಎಲ್‌ಗಳು, ಎಚ್‌ ಸಿಗ್ನೇಚರ್‌ ಎಲ್‌ಇಡಿ ಟೇಲ್‌ ಲ್ಯಾಪ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಕಿಡ್‌ ಪ್ಲೇಟ್‌ಗಳು, ಡೈಮಾಂಡ್‌ ಕಟ್‌ ಅಲಾಯ್‌ ವೀಲ್‌ಗಳು ಲಭ್ಯವಿದೆ.

3.ಮೈಲೇಜ್ ಎಷ್ಟು?

ಮಾಹಿತಿಯ ಪ್ರಕಾರ, ಹ್ಯುಂಡೈ ಎಕ್ಸ್‌ಟೀರ್‌ ಎಸ್‌ಯುವಿ ಮೈಲೇಜ್‌ ಒಂದು ಲೀಟರ್‌ ಪೆಟ್ರೋಲ್‌ಗೆ 19 ಕಿ.ಮೀ. ಅಂದರೆ ಸಿಎನ್‌ಜಿ ಆವೃತ್ತಿಯು ಸುಮಾರು 25 ಕಿ.ಮೀ. ಮೈಲೇಜ್‌ ನೀಡುವ ಸಾಮರ್ಥ್ಯ ಹೊಂದಿರುತ್ತದೆ ಎನ್ನಲಾಗಿದೆ.

  1. ಇನ್ನಷ್ಟು ವಿಶೇಷತೆಗಳೇನು?

ಈ ಕಾರಿನಲ್ಲಿ 1.2 ಲೀಟರ್‌ನ ಕಪ್ಪಾ ಪೆಟ್ರೋಲ್‌ ಎಂಜಿನ್‌ ಲಭ್ಯವಿರಲಿದೆ. ಈಗಾಗಲೇ ಈ ತಂತ್ರಜ್ಞಾನ ಐ10 ನಿಯೊಸ್‌ ಮತ್ತು ಔರಾ ಕಾರುಗಳಲ್ಲಿ ಕಾಣಬಹುದು. ಇದು 83 ಪಿಎಸ್‌ ಗರಿಷ್ಠ ಶಕ್ತಿ ಮತ್ತು 113.8 ಎನ್‌ಎಂ ಟಾರ್ಕ್‌ ಒದಗಿಸಲಿದೆ. ಐದು ಸ್ಪೀಡ್‌ನ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ಗಳಲ್ಲಿ ನೂತನ ಹ್ಯುಂಡೈ ಎಕ್ಸ್‌ಟೀರ್‌ ಎಸ್‌ಯುವಿ ಲಭ್ಯವಿದೆ. ಸಿಎನ್‌ಜಿ ಆವೃತ್ತಿಯು ಮ್ಯಾನುಯಲ್‌ ಗಿಯರ್‌ನಲ್ಲಿ ಮಾತ್ರ ದೊರಕಲಿದೆ.

ಹ್ಯುಂಡೈ ಎಕ್ಸ್‌ಟೀರ್‌ ಎಸ್‌ಯುವಿ ಕಾರಿನ ಗಾತ್ರದ ಕುರಿತೂ ಕಂಪನಿ ಮಾಹಿತಿ ನೀಡಿದೆ. ಇದರ ವೀಲ್‌ಬೇಸ್‌ 2,450 ಮಿ.ಮೀ. ಮತ್ತು ಎತ್ತರ 1,631 ಮಿ.ಮೀ. ಲಭ್ಯವಿದೆ‌ ಎನ್ನಲಾಗಿದೆ.

ಇದಿಷ್ಟೇ ಅಲ್ಲದೇ, ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಇರಲಿದ್ದು, ಇದು ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ಪ್ಲೇಗೆ ಬೆಂಬಲ ಸಿಗಲಿದೆ. 4.2 ಇಂಚಿನ ಬಣ್ಣದ ಟಿಎಫ್‌ಟಿ ಸ್ಕ್ರೀನ್‌ನಲ್ಲಿ ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಇರಲಿದೆ. ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಸೆಮಿ ಲೆದರ್‌ನ ಅಪ್‌ಹೋಲೆಸ್ಟೆ, ಎಲ್ಲಾ ಸೀಟುಗಳಿಗೂ ಸೀಟು ಬೆಲ್ಟ್‌ ಹಾಕಿರುವುದನ್ನು ನೆನಪಿಸುವ ವ್ಯವಸ್ಥೆ, ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾದ ಡ್ಯಾಷ್‌ಕ್ಯಾಮ್‌ ಸೇರಿದಂತೆ ಹಲವು ಫೀಚರ್‌ಗಳನ್ನು ಕಾಣಬಹುದಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *