ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಚಾಕು ಇರಿತ;‌ ದೇವಸ್ಥಾನದ ಬಳಿ ಪರಿಸ್ಥಿತಿ ಉದ್ವಿಗ್ನ

Knife attack
Spread the love

ನ್ಯೂಸ್ ಆ್ಯರೋ: ರಾಜಸ್ತಾನದ ಜೈಪುರದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಆಯೋಜಿಸಿದ್ದ ಖೀರ್ ವಿತರಣಾ ಕಾರ್ಯಕ್ರಮದ ವೇಳೆ ಹಿಂಸಾತ್ಮಕ ಘಟನೆಯೊಂದು ನಡೆದಿದ್ದು ಎಂಟು ಮಂದಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಅಕ್ಟೋಬರ್ 17 ರಂದು ಶರದ್ ಪೂರ್ಣಿಮಾ ದಿನವನ್ನು ಆಚರಿಸಲು ‘ಜಾಗ್ರಣ’ ಕಾರ್ಯಕ್ರಮ ನಡೆಯುತ್ತಿದ್ದ ದೇವಸ್ಥಾನದಲ್ಲಿ ಈ ದಾಳಿ ಸಂಭವಿಸಿದೆ.

ನಸೀಬ್ ಚೌಧರಿ ಮತ್ತು ಅವರ ಪುತ್ರ ಎಂದು ಗುರುತಿಸಲಾದ ಇಬ್ಬರು ಸ್ಥಳೀಯ ನಿವಾಸಿಗಳು ತಡರಾತ್ರಿ ನಡೆಯುತ್ತಿದ್ದ ಉತ್ಸವವನ್ನು ವಿರೋಧಿಸಿದಾಗ ಪರಿಸ್ಥಿತಿ ಉದ್ವಿಗ್ನವಾಯಿತು.

ತೀವ್ರ ವಾಗ್ವಾದದ ನಂತರ, ಇಬ್ಬರೂ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದು ಇವರೊಂದಿಗೆ ಇನ್ನೂ ಹಲವರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಗಾಯಾಳುಗಳಾದ ಶಂಕರ್ ಬಗ್ಡಾ, ಮುರಾರಿಲಾಲ್, ರಾಮ್ ಪರೀಕ್, ಲಖನ್ ಸಿಂಗ್ ಜಾದೂನ್, ಪುಷ್ಪೇಂದ್ರ ಮತ್ತು ದಿನೇಶ್ ಶರ್ಮಾ ಅವರನ್ನು ಚಿಕಿತ್ಸೆಗಾಗಿ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಪ್ರತಿಭಟನೆ ಮತ್ತು ರಸ್ತೆ ತಡೆಗೆ ಕಾರಣವಾಯಿತು. ಕಾನುನು ಸುವ್ಯವಸ್ಥೆ ಕಾಪಾಡಲು ಕರ್ಣಿ ವಿಹಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!