ದೊಡ್ಮನೆಯಿಂದ ಹೊರ ಬಂದು ಫೋಟೋ ಶೇರ್ ಮಾಡಿದ ಜಗದೀಶ್; ನೋವಿನಲ್ಲಿ ಹೇಳಿದ್ದೇನು?

ನ್ಯೂಸ್ ಆ್ಯರೋ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರಿಂದ ನಿನ್ನೆಯ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಔಟ್ ಆಗಿದ್ದಾರೆ. ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ರಾಯಲ್ ಆಗಿ ಎಂಟ್ರಿ ಕೊಟ್ಟಿದ್ದ ಜಗದೀಶ್ ಆಚೆ ಬಂದಿದ್ದಾರೆ. ಹೌದು, ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಲಾಯರ್ ಜಗದೀಶ್ ಒಂದು ಹವಾ ಕ್ರಿಯೇಟ್ ಮಾಡಿದ್ದರು. ಇದರಿಂದಲೇ ಕ್ರಶ್ ಆಫ್ ಕರ್ನಾಟಕ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ನಿನ್ನೆ ಬಿಗ್ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಗ್ಬಾಸ್ ನಟ ರಂಜಿತ್ ಹಾಗೂ ಲಾಯರ್ ಜಗದೀಶ್ ಅವರನ್ನು ಬಿಗ್ಬಾಸ್ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಿಗ್ಬಾಸ್ ಮನೆಯಿಂದ ಆಚೆ ಬಂದ ಬಳಿಕ ಲಾಯರ್ ಜಗದೀಶ್ ಅವರು ಬೇಸರ ಹೊರ ಹಾಕಿದ್ದರು. ಇದೀಗ ಬಿಗ್ಬಾಸ್ ಶೋಯಿಂದ ಆಚೆ ಬಂದ ಬೆನ್ನಲ್ಲೇ ಫೇಸ್ಬುಕ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು ಮೂರು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿದ್ದ ಲಾಯರ್ ಜಗದೀಶ್ ಸದ್ಯ ಸಖತ್ ಕೂಲ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇನ್ನು ಬಿಗ್ಬಾಸ್ ಮನೆಯಿಂದ ಆಚೆ ಬಂದ ಬಳಿಕ ಲಾಯರ್ ಜಗದೀಶ್ ಅವರು ಬೇಸರ ಹೊರ ಹಾಕಿದ್ದಾರೆ. ಮಾಹಿತಿ ಪ್ರಕಾರ ಬಿಗ್ಬಾಸ್ ತಂಡಕ್ಕೆ ಲಾಯರ್ ಜಗದೀಶ್ ಅವರು ಹೀಗೆ ವಿದಾಯ ಹೇಳಿದ್ದಾರೆ. ನಿಮ್ಮ ಪ್ರತಿ ಒಂದು ಚಪ್ಪಾಳೆ, ಮೆಸೇಜ್, ನಿಮ್ಮ ಆಶೀರ್ವಾದ ನನ್ನ ಈ ಬಿಗ್ಬಾಸ್ ಪಯಣ ಸಕಸ್ಸ್, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು. ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ವಿಶ್ಲೇಷಣೆ ಮಾಡಲು ನನ್ನ ಬಳಿ ಪದಗಳೇ ಇಲ್ಲ. ನೂರಾರು ಕ್ಯಾಮೆರಾ, ಸಾವಿರಾರು ದೊಡ್ಡ ಬಾಸ್ ಕಾರ್ಯಪಡೆ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಸಮರ್ಪಣೆ ಹಾಗೂ ನನ್ನ 20 ಕೋಟಿಗೂ ಹೆಚ್ಚಿನ ಬಿಗ್ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಬಿಗ್ ಬಾಸ್ ಜಗದೀಶ್ ಕ್ರಶ್. ನಿಮಗೆ ಕೋಟಿ ಕೋಟಿ ನಮನ. ನನ್ನ ಹೀರೋ ಸುದೀಪ್, ಇಡೀ ಬಿಗ್ ಬಾಸ್ ತಂಡಕ್ಕೆ ಹಾಗೂ ಸುದೀಪ್ ಸರ್ ನನ್ನನ್ನು ಕ್ಷಮಿಸಿ. ಬಹಳಷ್ಟು ಕಲಿತಿದ್ದೀನಿ ಬಿಗ್ ಬಾಸ್ ನಲ್ಲಿ ನೀವು ನನ್ನ ಮಾರ್ಗದರ್ಶಕರಾಗಿದ್ದಿರಿ. ನೀವು ನನಗೆ ಗುರುವಾಗಿದ್ದೀರಿ.
ಕನ್ನಡ ರೋಮಾಂಚನ ಈ ಕನ್ನಡ. ಪ್ರೀತಿಸು, ಪೂಜಿಸು, ಆನಂದಿಸು. ಏನು ಕೊಟ್ಟಿಲ್ಲ ಈ ಕರ್ನಾಟಕ, ಎಲ್ಲಾ ಕೊಟ್ಟಿದ್ದೆ. ಕೋಟಿ ಕೋಟಿ ನಮನ ಮತ್ತೊಮ್ಮೆ. ಗೊತ್ತಿಲ್ಲ, ಈ ಮಾತುಗಳು ನನ್ನ ಹೃದಯದಿಂದ ಬಂದವು . ನನ್ನನ್ನು ಕನ್ನಡ ಇಂಡಸ್ಟ್ರಿಯಲ್ಲಿ ನಾಯಕನನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು. ಎಂದೆಂದಿಗೂ ನನ್ನ ನಿಷ್ಠೆ ಕರ್ನಾಟಕದ ನಾಯಕ ಸುದೀಪ್ ಅವರಿಗೆ. ನಾನು ಬಿಗ್ ಬಾಸ್‌ನಲ್ಲಿ ಆ ವೇಕ್ ಅಪ್ ಹಾಡನ್ನು ಮಿಸ್ ಮಾಡಿದ್ದೇನೆ. ಐಶ್ವರ್ಯ ನನ್ನನ್ನು ಡ್ಯಾನ್ಸ್ ಮಾಡಿದ್ದಾಳೆ. ಲವ್ ಯೂ ಐಶ್ವರ್ಯಾ. ನನ್ನ ಪ್ರೀತಿಯ ಮಗು ದೇವರ ಆಶೀರ್ವಾದ ನಿನ್ನ ಮೇಲೆ ಇರಲಿ. ಕ್ಷಮಿಸಿ ರಂಜಿತ್, ಮಾನಸ, ಎಲ್ಲರೂ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರು. ನಾನು ನಿಮ್ಮ ಜೊತೆಯಲ್ಲಿ ಒಬ್ಬ ನಾಗಲು ಪ್ರಯತ್ನ ಪಟ್ಟೆ? ಈ ಕೆಲವು ತಪ್ಪುಗಳು ನನ್ನಿಂದ ಆಗಿದೆ. ಅದು ನಟನೆ (ಮನರಂಜನೆ) ಒಂದು ಭಾಗವಾಗಿದೆ. ವೈಯಕ್ತಿಕವಾಗಿ ಏನೂ ಇಲ್ಲ ಅಂತ ಹೇಳಿದ್ದಾರೆ.
Leave a Comment