ಕಿಚ್ಚನ ಮುಂದೆಯೇ ವಾದಕ್ಕೆ ಇಳಿದ ತ್ರಿವಿಕ್ರಮ್; ವಾರದ ಕತೆ ನಡೆಸಿಕೊಂಡಲು ಬಂದು ಅರ್ಧಕ್ಕೆ ಹೋದ ಸುದೀಪ್

New Project 1 1
Spread the love

ನ್ಯೂಸ್ ಆ್ಯರೋ: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಾರದ ಕತೆಯನ್ನು ನಡೆಸಿಕೊಡಲು ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಆದರೆ ಅಚ್ಚರಿ ಎಂಬಂತೆ ಬಿಗ್​ಬಾಸ್​ ವೇದಿಕೆ ಮೇಲಿಂದಲೇ ಕಿಚ್ಚ ಸುದೀಪ್ ಹೊರಟು ಹೋಗಿದ್ದಾರೆ.

ಬಿಗ್​ಬಾಸ್​ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಕಿಚ್ಚ ಸುದೀಪ್ ಕೋಪದಲ್ಲೇ ಆಚೆ ಹೋಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ತ್ರಿವಿಕ್ರಮ್​. ಈ ಹಿಂದೆ ಬಿಗ್​ಬಾಸ್​ ಮನೆ ಮಂದಿಗೆ ಒಂದು ಟಾಸ್ಕ್​ ಅನ್ನು ಕೊಟ್ಟಿರುತ್ತಾರೆ.

ಆಗ ಆ ಟಾಸ್ಕ್​ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ ಹಾಗೂ ರಜತ್​ ಆಚೆ ಉಳಿದುಕೊಂಡಿರುತ್ತಾರೆ. ಅಲ್ಲದೇ ಚೈತ್ರಾ, ಧನರಾಜ್, ಮಂಜು, ಮೋಕ್ಷಿತಾ, ಗೌತಮಿ ಹಾಗೂ ಹನುಮಂತ ಟಾಸ್ಕ್​ ಆಡಲು ಓಕೆ ಅಂತ ಹೇಳಿತ್ತಾರೆ. ಆಗ ಧನರಾಜ್​, ಹನುಮಂತನ ಮುಂದೆ ಬಂದ ತ್ರಿವಿಕ್ರಮ್​ ಇಷ್ಟು ದಿನ ನಾವು ನಿಮಗೆ ಅನ್ನ ಹಾಕಿದ್ದೀವಿ, ಈಗ ನೀವು ನಮಗೆ ಹಾಕಿ ಎನ್ನುವ ಹೇಳಿಕೆ ನೀಡುತ್ತಾರೆ.

ಇದೇ ವಿಚಾರವಾಗಿ ಕಿಚ್ಚನ ಪಂಚಾಯ್ತಿಯಲ್ಲಿ ಪ್ರಸ್ತಾಪ ಆಗಿದೆ. ಆಗ ಕಿಚ್ಚ ಸುದೀಪ್​ ಮುಂದೆಯೇ ತ್ರಿವಿಕ್ರಮ್​ ನಾನು ಎಲ್ಲಿ ಹಾಗೇ ಹೇಳಿದ್ದೀನಿ ಅಂತ ವಾದ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಕಿಚ್ಚ ಸುದೀಪ್​ ವೇದಿಕೆಯಿಂದಲೇ ಹೊರಟು ಹೋಗಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!